ಅಕ್ಕ ಅಕ್ಕ ಎನ್ನುತ್ತಾ ಡ್ರೋನ್ ಪ್ರತಾಪ್ ಮಾಡಿದ ಕೆಲಸಕ್ಕೆ ರೊ ಚ್ಚಿಗೆದ್ದ ಪ್ರೇಕ್ಷಕರು
ಬಿಗ್ ಬಾಸ್ ಮನೆಯಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳುವ ಮೊದಲು, ಪಾಪ ಕಾರ್ತಿಕ್ ಮಹೇಶ್ ಹೃದಯಕ್ಕಾಗಿರುವ ನೋವಿನ ಬಗ್ಗೆ ಯೋಚನೆ ಮಾಡ್ಬೇಕಿದೆ. ಇತ್ತ ಸಂಗೀತ ಕೂಡ ಅವರಿಂದ ದೂರವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಅತ್ತ ಸ್ನೇಹಿತ ವಿನಯ್ ಇವರಿಂದ ದೂರ ಆಗಿ ಬಿಟ್ಟಿದ್ದಾರೆ.
ಅಲ್ಲದೆ ಮೊನ್ನೆ ಮೊನ್ನೆ ಪ್ರತಾಪ್‌ಗೆ ಬೇರೆ ಸಂಗೀತಾ ಪ್ರಪೋಸ್ ಮಾಡಿದ್ದು, ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಹೌದು.. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೀತಿ ಯಾವಾಗ ಹುಟ್ಟುತ್ತೋ, ಧ್ವೇಷ ಯಾವಾಗ ಹುಟ್ಟುತ್ತೋ.. ಅಂತ ಹೇಳೋದೆ ಕಷ್ಟವಾಗಿದೆ. ಜಸ್ಟ್ ಐದು ನಿಮಿಷದ ಹಿಂದೆ ಸ್ನೇಹಿತರಂತೆ ಇದ್ದವರು, ಟಾಸ್ಕ್ ಮುಗಿಯುವುದರೊಳಗೆ ವೈರಿಗಳಾಗಿರುತ್ತಾರೆ ಇಲ್ಲವೆ ಅಲ್ಲಿ ಹೊಸ ಸ್ನೇಹ ಹುಟ್ಟಿಕೊಂಡಿರುತ್ತವೆ.
ಸಧ್ಯ ಇಷ್ಟು ದಿನ ಬಿಗ್‌ಬಾಸ್ ಮನೆಯ ಲವ್ ಬರ್ಡ್ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಸಂಗೀತಾ ಕಾರ್ತೀಕ್ ನಡುವೆ ಏನೂ ಇಲ್ಲ ಎಂಬ ವಿಚಾರ ಬಹಿರಂಗವಾಗಿದೆ. ಅಲ್ಲದೆ, ಇಬ್ಬರು ಜಸ್ಟ್ ಪ್ರೇಂಡ್ಸ್ ಅಂತ ಬೇರೆ ಸಂಗೀತ ಹೇಳಿಕೊಂಡಿದ್ದು, ಅಚ್ಚರಿ ಮೂಡಿಸಿದೆ. ಅಲ್ಲದೆ, ಇತ್ತೀಚಿಗೆ ಪ್ರತಾಪ್ ಸಂಗೀತಾ ಪ್ರಪೋಸ್ ಮಾಡಿದ್ದು, ನೆಟ್ಟಿಗರ ಹೊಸ ಕಥೆ ಸೃಷ್ಟಿಗೆ ಕಾರಣವಾಗಿದೆ.
ಯಸ್… ಪ್ರತಾಪ್, ಕಣ್ಣೀರು ಹಾಕುತ್ತ ಮನೆ ಮಂದಿಯ ಮಾತಿಗೆ ಮೂಲೆಯಲ್ಲಿ ಕುಳಿತು ಅಳುತ್ತಿದ್ದ ಸ್ಪರ್ಧಿ. ಆದ್ರೆ ಇದೀಗ ಡ್ರೋನ್ ವರಸೆ ಬದಲಾಗಿದೆ, ಅದ್ಭುತವಾಗಿ ಆಟವಾಡುವುದರ ಜೊತೆಗೆ ಮನೆ ಮಂದಿಗೆ ಒಳ್ಳತನದ ಪಾಠ ಬೇರೆ ಮಾಡ್ತೀದ್ದಾರೆ. ಅಷ್ಟೇ ಅಲ್ಲ, ಧ್ವೇಷ ಮಾಡಿದ ಸ್ಪರ್ಧಿಗಳು ಎಲಿಮಿನೇಷನ್‌ನಿಂದ ಸೇಫ್ ಮಾಡಿ ಅವರ ದೃಷ್ಟಿಯಲ್ಲಿ ಉತ್ತಮ ಹುಡುಗ ಅಂತ ಕರೆಸಿಕೊಳ್ಳುತ್ತಿದ್ದಾನೆ.
ಇನ್ನು ಸಂಗೀತಾ ಶೃಂಗೇರಿ ಅಂತೂ ಡ್ರೋನ್ ಬಗ್ಗೆ ಯಾವಾಗ್ಲೂ ಒಳ್ಳೆಯದನ್ನೇ ಮಾತನಾಡುತ್ತಾ ಬಂದಿದ್ದಾರೆ. ಕಾರ್ತೀಕ್ ಬಗ್ಗೆ ಹೆಚ್ಚು ಹೇಳ್ತಾರೆ ಇಲ್ಲವೋ ಗೊತ್ತಿಲ್ಲ, ಆದ್ರೆ ಪ್ರತಾಪ್ ಹಾಗೂ ಅವನ ಮನಸ್ಸಿನ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಅಲ್ಲದೆ ಮೊನ್ನೆಯಷ್ಟೇ ಸಂಗೀತಾ ಡ್ರೋನ್‌ಗೆ ಪ್ರಪೋಸ್ ಮಾಡಿ ಅಚ್ಚರಿ ಮೂಡಿಸಿದ್ದರು.
ಸಂಗೀತಾ ಲವ್‌ಗೆ ಪ್ರತಾಪ್ ಒಪ್ಪದಿದ್ದಾಗ, ಏಕೆ ನಾನು ನಿನಗೆ ಇಷ್ಟ ಇಲ್ವಾ..? ನನ್ನ ಪ್ಯೂಚರ್ ಪತಿಯನ್ನ ನಿಮ್ಮಲ್ಲಿ ಕಾಣುತ್ತಿದ್ದೇನೆ ಎಂದು ಸಂಗೀತಾ ಹೇಳಿದ್ರು. ಆದ್ರೆ, ಪ್ರತಾಪ್ ಮಾತ್ರ, ನೀನು ನನ್ನ ಅಕ್ಕ ಅಂತ ಹೇಳಿಬಿಟ್ಟೆ. ನಿನ್ನ ನೋಡಿದ ಮೇಲೆ ಕ್ರಶ್ ಆಗಿದೆ ಅಂತ ಸಂಗೀತಾ ಡ್ರೋನ್ ಮನ ಒಲಿಸಲು ಪ್ರಯತ್ನ ಮಾಡಿದ್ರು. ತಬ್ಬಿ ಮುದ್ದಾಡಲು ನೋಡಿದ್ರು ಒಟ್ಟಾರೆಯಾಗಿ ಇದು ತಮಾಷೆಯಾಗಿರುಬಹುದು.
ಆದ್ರೆ ನೆಟ್ಟಿಗರು ಎಲ್ಲೋ ಒಂದು ಕಡೆ ಇಬ್ಬರ ನಡುವೆ ಲವ್ ಶುರುವಾಗಬಹುದು ಅಂತ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇನ್ನು ಕೆಲವರು ಸಂಗೀತಾ ಗೆ ಬಾಯಿಗೆ ಬಂದಂತೆ ಬೈದಿದ್ದಾರೆ.ಮುಂದೆ ಏನಾಗುತ್ತೆ ಅಂತ ಕಾಯ್ದು ನೋಡಬೇಕಿದೆ.