ಅತಿದೊಡ್ಡ ಕಟ್ಟಡದಿಂದ ಹೊಸ ವರ್ಷಕ್ಕೆ ಧು.ಮುಕಿದ ಯುವಕ, ಲೈವ್ ನೋಡಿ ಬೆ ಚ್ಚಿಬಿದ್ದ ಕನ್ನಡಿಗರು
ಮದ್ಯ ಪಾನ ಮಾಡಬೇಡಿ ಎಂದು ಹೇಳಿದರೆ ಜನರು ಕೇಳುವುದಿಲ್ಲ. ಆದರೆ ಅದರ ಪರಿಣಾಮ ಮಾತ್ರ ಬಹಳ ಕೆಟ್ಟದ್ದು. ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ 27ವರ್ಷದ ಟೆಕ್ಕಿಯೊಬ್ಬ ಮದ್ಯದ ಅಮಲಿನಲ್ಲಿ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೆ.ಆರ್.ಪುರದ ಅಯ್ಯಪ್ಪನಗರದ ಕೊಡಿಗೇಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಉತ್ತರ ಪ್ರದೇಶದ ಮೂಲದ ಇವರು ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದೀಪಾಂಶು, ಕೆ. ಆರ್. ಪುರದ ಕೊಡಿಗೇ ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಡಿಸೆಂಬರ್ 28 ರಂದು ರಾತ್ರಿ ಮೂವರು ಸ್ನೇಹಿತರ ಜತೆ ಸ್ನೇಹಿತೆ ನೆಲೆಸಿದ್ದ ಭಟ್ಟರ ಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ಗೆ ಬಂದಿದ್ದರು. ನಾಲ್ವರು ತಡ ರಾತ್ರಿವರೆಗೂ ಪಾರ್ಟಿ ಮಾಡಿದ್ದರು.
ಬೆಳಗಿನ ಜಾವ 2.30ರ ಸುಮಾರಿಗೆ ಬಾಲ್ಕನಿಯಲ್ಲಿ ನಿಂತಿದ್ದ ದೀಪಾಂಶು, ಸಿಗರೇಟ್‌ನ ಹ್ಯಾಶ್ ಅನ್ನು ಎಸೆಯಲು ಮುಂದಾಗಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಶಂಕೆಯಿದೆ. ಬಾಲ್ಕನಿಯಲ್ಲಿ ಚೆಲ್ಲಿದ್ದ ಸಿಗರೇಟ್ ಹೊಗೆ ಪುಡಿಯ ಮೇಲೆ ದೀಪಾಂಶು ಅವರ ಶೂ ಹೆಜ್ಜೆ ಗುರುತುಗಳು ಕಂಡು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟಕ್ಕೂ ಸಿನಿಮಾಗೆ ಹೋಗುವ ಸಲುವಾಗಿ ಸ್ನೇಹಿತರು ಒಟ್ಟಾಗಿ ಸೇರಿದ್ದರು. ಒಟ್ಟಿಗೆ ಮಾಲ್‌ವೊಂದಕ್ಕೆ ತೆರಳಿದ್ದರು. ಆದರೆ, ಆ ವೇಳೆಗೆ ಸಿನಿಮಾ ಪ್ರದರ್ಶನ ಪ್ರಾರಂಭವಾಗಿದ್ದರಿಂದ ಇಂದಿರಾ ನಗರದ ಪಬ್‌ಗೆ ತೆರಳಿ ಪಾರ್ಟಿ ಮಾಡಿದ್ದರು. ತಡ ರಾತ್ರಿ 2.30ರ ಸುಮಾರಿಗೆ ಫ್ಲ್ಯಾಟ್‌ಗೆ ವಾಪಸ್ ಆಗಿ ಎಲ್ಲರೂ ನಿದ್ರೆಗೆ ಜಾರಿದ್ದರು.
ಈ ಸಮಯದಲ್ಲಿಯೇ ದೀಪಾಂಶು ಬಾಲ್ಕನಿಗೆ ಬಂದು ಆಕಸ್ಮಿಕವಾಗಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.