• Uncategorised

‘ಆತನ ಸಹವಾಸ ಬಿಟ್ಟಿದ್ದೆ ಅದಿಕ್ಕೆ; ದ ರ್ಶನ್ ಬಗ್ಗೆ ನಟ ಸೃಜನ್ ಲೋಕೇಶ್ ಖಡಕ್ ಮಾತು

ನಟ ನಟಿಯರು ಸಾಮಾನ್ಯವಾಗಿ ರೆಸ್ಟೋರೆಂಟ್ ಇಲ್ಲವೇ ಸಲೂನ್, ಫ್ಯಾಷನ್ ಡಿಸೈನರ್ ಬೋಟಿಕ್ ಇಲ್ಲವೇ ಪಬ್ ಬಾರ್ ಗಳನ್ನು ನಡೆಸುವುದು ಕಾಮಾನ್. ಎಲ್ಲಾ ಚಿತ್ರರಂಗದಲ್ಲಿ ಕೂಡಾ ಅದು ಸಾಮಾನ್ಯವಾಗಿ ಬಳಕೆಯಲ್ಲಿದೆ. ಇದೀಗ ಅವರ ಸಾಲಿಗೆ ನಟ ಪ್ರೇಮ್ ಕೂಡಾ ಸೇರಿದ್ದಾರೆ.ನೆನಪಿರಲಿ ಪ್ರೇಮ್ ಹಾಗೂ ನಿರ್ದೇಶಕ ಎಪಿ ಅರ್ಜುನ್ ಸೇರಿ ಇನ್ನೂ ಕೆಲವರು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಟಾಪಿಕ್ ಬಾರ್ & ಕಿಚನ್ ಆರಂಭಿಸಿದ್ದಾರೆ. ಈ ಹೊಸ ಸಾಹಸಕ್ಕೆ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿದ್ದರು.ಪ್ರೇಮ್ ಹಾಗೂ ಪತ್ನಿ ಜ್ಯೋತಿ ಅವರು ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದರು. ನಟಿ ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆಗೆ ಈ ಉದ್ಘಾಟನೆಗೆ ಆಗಮಿಸಿದ್ದರು. ಅಲ್ಲಿಗೆ ನಟ ಸೃಜನ್ ಲೋಕೇಶ್ ಕೂಡ ಆಗಮಿಸಿದ್ದರು.

ನಟ ಅನಿರುದ್ಧ ಪತ್ನಿ ಕೀರ್ತಿ, ಮಗಳು ಶ್ಲೋಕ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮಕ್ಕಳಾದ ವಂದಿತಾ, ಧೃತಿ, ಅವಿನಾಶ್-ಮಾಳವಿಕಾ, ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಅವರು ಮಗಳು ವಂಶಿಕಾ ಅಂಜನಿ ಕಶ್ಯ ಹಾಗೂ ಮಗ, ಅನುಷಾ ರೈ, ನೇಹಾ ಗೌಡ-ಚಂದನ್ ದಂಪತಿ ಅವರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದಾರೆ.

ಇನ್ನು ಅಲ್ಲಿನ ಕಾರ್ಯಕ್ರಮದಲ್ಲಿ ನಟಿ ಮಾಲಾಶ್ರೀ ಹಾಗೂ ಸೃಜನ್ ಲೋಕೇಶ್ ನಟ ದರ್ಶನ್ ಕುರಿತಾಗಿ ಮಾತಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಅದ್ಯಾಕೆ ಹಾಗೆ ಮಾಡಿಕೊಂಡರೋ ಅರ್ಥವಾಗುತ್ತಿಲ್ಲ ಎಂದು ನಟಿ ಆರಾಧನಾ ರಾಮ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅನೇಕ ಸೆಲೆಬ್ರಿಟಿಗಳು ನಟನೆ, ನಿರ್ದೇಶನ, ನಿರ್ಮಾಣದ ಜೊತೆಗೆ ಉದ್ಯಮದಲ್ಲಿ ಭಾಗಿಯಾಗಿದ್ದಾರೆ.

ಅದರಲ್ಲಿಯೂ ಹೋಟೆಲ್ ಉದ್ಯಮಕ್ಕೆ ಕೈ ಹಾಕಿದವರ ಸಂಖ್ಯೆ ಜಾಸ್ತಿ ಇದೆ. ಉದ್ಯಮದಲ್ಲಿ ಭಾಗಿಯಾದವರ ಸಾಲಿಗೆ ಈಗ ಪ್ರೇಮ್ ಕೂಡ ಸೇರಿದ್ದಾರೆ.

You may also like...