ಆನೆಯಂತೆ ಮತಗಟ್ಟೆಗೆ ಯಶ್ ದಾ.ಳಿ; ಕನ್ನಡಿಗರು ಫಿದಾ
ನ್ಯಾಷನಲ್ ಸ್ಟಾರ್ ಯಶ್ ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಹೊಸಕೆರೆಹಳ್ಳಿಯಲ್ಲಿ ಯಶ್ ಮತ ಚಲಾಯಿಸಿದ್ದಾರೆ. ದೇಶಕ್ಕಾಗಿ ಮತದಾನ ಮಾಡಿ ಎಂದು ಯೂತ್ಸ್ಗೆ ನಟ ಕರೆ ನೀಡಿದ್ದಾರೆ.
ಮತದಾನ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ವೋಟ್ ಮಾಡುವುದು ನಮ್ಮ ಕರ್ತವ್ಯ. ನಾವು ವೋಟ್ ಮಾಡಲೇಬೇಕು. ಯಾವಾಗಿನಿಂದ ವೋಟ್ ಮಾಡುವುದಕ್ಕೆ ಅವಕಾಶ ಸಿಗುತ್ತೋ ಆಗಿಂದಲೇ ಮತದಾನ ಮಾಡುವುದನ್ನು ಅಭ್ಯಾಸ ಮಾಡಕೊಳ್ಳಬೇಕು ಎಂದು ಯಶ್ ಮಾತನಾಡಿದ್ದಾರೆ.
ಪ್ರತಿ ಹಂತದಲ್ಲೂ ನಿರ್ಧಾರ ತೆಗೆದುಕೊಂಡು ಮತದಾನಕ್ಕೆ ಮುಂದಾಗಬೇಕು. ಕಳೆದ ಬಾರಿಗಿಂತ ಈ ಬಾರಿ ವೋಟ್ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಎಲ್ಲರ ಅಭಿಪ್ರಾಯಕ್ಕೂ ಪ್ರಜಾಪ್ರಭುತ್ವದಲ್ಲಿ ಬೆಲೆ ಇರಬೇಕು ಎಂದು ಯಶ್ ಮಾತನಾಡಿದ್ದಾರೆ.
ಇಂದು ಭಾರತ ಒಳ್ಳೆಯ ಸ್ಥಾನದಲ್ಲಿದೆ. ಇದನ್ನು ಉಪಯೋಗಿಸಿಕೊಂಡು ನಾವು ಮುಂದಕ್ಕೆ ಸಾಗಬೇಕು ಎಂದು ಯಶ್ ಮಾತನಾಡಿದ್ದಾರೆ.ಈಗ ರಾಜ್ಯದಲ್ಲಿ ಮೊದಲನೇ ಹಂತದ ಮತದಾನ ನಡೆದಿದ್ದು ಕನ್ನಡ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ಮತದಾನ ಮಾಡಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈಗಾಗಲೇ ನಟಿ ಅಮೂಲ್ಯ, ಶ್ವೇತಾ ಚೆಂಗಪ್ಪ, ಸುಧಾರಾಣಿ, ರಚಿತಾ ರಾಮ್ ನಟರಾದ ಕಿಚ್ಚ ಸುದೀಪ್, ದರ್ಶನ್, ಯಶ್, ರಕ್ಷಿತ್ ಶೆಟ್ಟಿ ಅವರು ಮತದಾನ ಮಾಡಿ ಜಾಗೃತೆ ಮೂಡಿಸಿದ್ದಾರೆ.