• Uncategorised

ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ ಹೊಸ ರೂಲ್ಸ್, ಏನಾಗಲಿದೆ ಗೊತ್ತಾ ನಿಮ್ಮ ಆ.ಸ್ತಿ

ಇದು 5g ಯುಗ ಇಲ್ಲಿ ಯಾವಾಗ ಎನು ಬೇಕಾಗುತ್ತದೆ , ಚೆನ್ನಾಗಿ ಇದ್ದವರಿಗೆ ಏನಾಗುತ್ತದೆ ಎಂದು ಯಾರೂ ಕೂಡ ಹೇಳಲು ಸಾಧ್ಯವಿಲ್ಲ. ಹೌದು ಮನುಷ್ಯನಿಗೆ ಯಾವ ಸಮಯದಲ್ಲಿ ಯಾವ ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೆಷ್ಟೋ ಬಾರಿ ನಾವು ದುಡಿದ ಹಣ ನಮಗೆ ಸಾಲುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಹಣಕ್ಕಾಗಿ ಸಾಲ ಮಾಡುವುದು ಅನಿವಾರ್ಯ.

ಮನೆ ಖರೀದಿಸುವ ಸಲುವಾಗಿ ಗೃಹ ಸಾಲ ಕಾರು ಖರೀದಿಸುವ ಸಲುವಾಗಿ ವಾಹನ ಸಾಲ ಅಥವಾ ವೈಯಕ್ತಿಕ ಸಾಲವನ್ನು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಪಡೆದುಕೊಳ್ಳುತ್ತೇವೆ. ಇನ್ನು ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳಬೇಕು ಅಂದ್ರೆ ಸುಖ ಸುಮ್ಮನೆ ಯಾರು ಸಾಲ ಕೊಡುವುದಿಲ್ಲ ಎಂಬುದು ನಿಮಗೂ ಗೊತ್ತಿರುವ ವಿಚಾರ.

ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವುದಾದರೆ ನಾವು ಶೂರಿಟಿ ಅಥವಾ ನಂಬಿಕೆಗಾಗಿ ನಮ್ಮ ಬಳಿ ಇರುವ ಆಸ್ತಿ ಪತ್ರ ಅಥವಾ ಇತರ ಯಾವುದೇ ಮೌಲ್ಯಯುತವಾದ ದಾಖಲೆಗಳನ್ನು ಅಡವಿಡಬೇಕು. ನಾವು ಯಾವ ಮೌಲ್ಯದ ಆಸ್ತಿ ಪತ್ರ ನೀಡುತ್ತೇವೆ ಅಷ್ಟು ಮೌಲ್ಯದ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.

ಸಾಕಷ್ಟು ಬಾರಿ ಆಸ್ತಿ ಪತ್ರ ಅಡವಿಟ್ಟು ಸಾಲ ತೆಗೆದುಕೊಂಡ ನಂತರ ಪ್ರತಿ ತಿಂಗಳು ಸರಿಯಾಗಿ ಸಾಲ ಮರುಪಾವತಿ ಮಾಡಿದರು ಕೂಡ ಕೆಲವೊಮ್ಮೆ ಬ್ಯಾಂಕುಗಳು ಹೆಚ್ಚುವರಿ ಶುಲ್ಕವನ್ನು ಕೂಡ ಹಾಕುತ್ತವೆ.ಈ ಶುಲ್ಕವನ್ನು ಕೂಡ ಪಾವತಿಸಿದ್ದೇವೆ ಎಂದುಕೊಳ್ಳಿ. ನಿಮ್ಮ ಸಾಲ ಸಂಪೂರ್ಣವಾಗಿ ಹಿಂತಿರುಗಿಸಿದ ನಂತರ ನಿಮ್ಮ ಆಸ್ತಿ ಪತ್ರ ನಿಮ್ಮ ಕೈ ಸೇರಬೇಕು ಆದರೆ ಕೆಲವು ಬ್ಯಾಂಕುಗಳು ಅಥವಾ ಸಣ್ಣ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಲ್ಲ ಬೇಕಾಗಿರುವ ಅವರ ಆಸ್ತಿ ಪತ್ರವನ್ನು ಕೊಡುವಲ್ಲಿ ಹಿಂದೆಟು ಹಾಕುತ್ತಾರೆ ಅಥವಾ ಬೇಜವಾಬ್ದಾರಿ ತೋರಿಸುತ್ತಾರೆ.

ಆಸ್ತಿ ಪತ್ರ ಕಳೆದು ಹೋಗಿದೆ ಅಥವಾ ಇಂದು ಆಸ್ತಿ ಪತ್ರ ಹಿಂತಿರುಗಿಸಲು ಸಮಯವಿಲ್ಲ ಹೀಗೆ ಏನೇನೋ ನೆಪ ಒಡ್ಡಿ ಸಾಲಗಾರರು ಸಾಲ ತೀರಿಸಿದ ನಂತರವೂ ಕೂಡ ತಮ್ಮ ಆಸ್ತಿ ಪತ್ರ ಪಡೆದುಕೊಳ್ಳಲು ಬ್ಯಾಂಕ್ ಗೆ ಅಲೆದಾಡುವಂತೆ ಮಾಡುತ್ತಾರೆ.ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಆರ್ ಬಿ ಐ ಹೊಸ ನಿಯಮ ಜಾರಿಗೆ ತಂದಿದ್ದು ಬ್ಯಾಂಕ್ ಗಳಾಗಿರಲಿ ಅಥವಾ ಹಣಕಾಸು ಸಂಸ್ಥೆಗಳಾಗಿರಲಿ ಅಥವಾ ಎಂ ಬಿ ಸಿ ಎಫ್ ಗಳಾಗಿರಲಿ, ಸಾಲಗಾರನ ಆಸ್ತಿ ಪತ್ರವನ್ನು ಆತ ಸಾಲ ಮರುಪಾವತಿಸಿದ ತಕ್ಷಣವೇ ಹಿಂತಿರುಗಿಸಲು ಆದೇಶ ಹೊರಡಿಸಿದೆ.

ಅಲ್ಲದೆ ಸಾಲ ಮಾಡಿದವನು ಸಾಲ ಮರುಪಾವತಿ ಮಾಡಿದ ನಂತರ 30 ದಿನಗಳ ಒಳಗೆ ಆತ ಅಡವಿಟ್ಟ ಆಸ್ತಿ ಪತ್ರವನ್ನು ಆತನಿಗೆ ಹಿಂತಿರುಗಿಸಬೇಕು, ಒಂದು ವೇಳೆ ಬ್ಯಾಂಕ್ ಈ ಕೆಲಸ ಮಾಡದೆ ಇದ್ದಲ್ಲಿ, ದಿನಕ್ಕೆ 5000 ಗಳಂತೆ ಬ್ಯಾಂಕ್ ಗಳು ಗ್ರಾಹಕರಿಗೆ ದಂಡ ರೂಪದಲ್ಲಿ ಹಣವನ್ನು ಪಾವತಿ ಮಾಡಬೇಕು. ಎಂದು ಜನರಿಗೆ ಅನುಕೂಲ ಆಗುವಂತಹ ಆದೇಶ ಹೊರಡಿಸಿದೆ.

You may also like...