• Uncategorised

ಈ‌ ಬಾರಿ‌‌‌‌ಯ ಬಿಗ್ ಬಾಸ್‌ ಆಂಕರ್ ಆಗಿ ಡಾಲಿ ಆಯ್ಕೆ; ಕರ್ನಾಟಕದಾದ್ಯಂತ ಬಾರಿ ಮೆಚ್ಚುಗೆ

ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ ಇನ್ನೂ ಮೊನ್ನೆ ಮುಗಿದ ಹಾಗಿದೆ. ಆಗಲೇ ಬಿಗ್‌ಬಾಸ್ ಕನ್ನಡ 11ನೇ ಸೀಸನ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬಿಗ್‌ಬಾಸ್ ಕನ್ನಡ 11 ಅಕ್ಟೋಬರ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಈವರೆಗೂ ಹತ್ತು ಸೀಸನ್ ಪ್ರಸಾರ ಕಂಡಿದೆ. ಒಂದು ಸೀಸನ್ ಓಟಿಟಿಯಲ್ಲಿ ನಡೆದಿದೆ. ಬಿಗ್‌ಬಾಸ್ ಲೋಗೋದಲ್ಲಿ ಒಂದೊಂದು ಸೀಸನ್‌ನಲ್ಲೂ ಒಂದು ವಿಶೇಷತೆ ಇತ್ತು. ಅದರಂತೆ ಈ ಬಾರಿಯ ಬಿಗ್‌ಬಾಸ್‌ ಲೋಗೋದಲ್ಲಿ ಬೆಂಕಿ ಇದೆ. ಅದರ ಜೊತೆಗೆ ನೀರು ಕೂಡ ಇರುವುದು ವಿಶೇಷ

ಕಳೆದ ಬಾರಿಯ ಸೀಸನ್‌ನಲ್ಲಿ ಕಾರ್ತಿಕ್‌ ಬಿಗ್‌ಬಾಸ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ಬಾರಿಯ ಸ್ಪರ್ಧಿಗಳ ಬಗ್ಗೆಯೂ ಭಾರೀ ಕುತೂಹಲ ಮೂಡಿದೆ. ಆದರೆ ಈ ಬಗ್ಗೆ ಇಲ್ಲಿವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬಾರಿ ಯಾರಾಗಲಿದ್ದಾರೆ ಬಿಗ್‌ಬಾಸ್ ವಿನ್ನರ್? ಹಾಗೆ ಸ್ಪರ್ಧೆಗಳು ಯಾರು? ಈ ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್‌ ಸಿಗಲಿದೆ.

ಬಿಗ್ ​ಬಾಸ್ ಸೀಸನ್ ಮತ್ತೊಮ್ಮೆ ಪ್ರಾರಂಭವಾಗಿದೆ. ಈಗಾಗಲೇ ಹೊಸ ಪ್ರೋಮೋ ಬಿಡುಗಡೆ ಆಗಿದೆ. ಆದರೆ ಪ್ರೋಮೋನಲ್ಲಿ ಸುದೀಪ್ ಕಂಡಿಲ್ಲ, ಮಾತ್ರವಲ್ಲ ಸುದೀಪ್ ಬದಲು ಬೇರೊಬ್ಬ ನಿರೂಪಕರು ಇರುವ ಸಣ್ಣ ಸುಳಿವನ್ನು ಅಥವಾ ದಾರಿತಪ್ಪಿಸುವ ತಂತ್ರ ಕಲರ್ಸ್ ವಾಹಿನಿ ನೀಡಿದೆ. ಇದರ ನಡುವೆ ಸುದೀಪ್ ಅಲ್ಲದಿದ್ದರೆ ಇನ್ಯಾರು ಎಂಬ ಪ್ರಶ್ನೆ ನೋಡುಗರಲ್ಲಿ ಹುಟ್ಟಿಕೊಂಡಿದೆ. ಸುದೀಪ್, ಬಿಗ್​ಬಾಸ್ ನಿರೂಪಣೆ ಮಾಡದಿದ್ದ ಪಕ್ಷದಲ್ಲಿ ನಟ ರಮೇಶ್ ಅರವಿಂದ್, ರಿಶಬ್ ಶೆಟ್ಟಿ ಬಿಗ್​ಬಾಸ್ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದೀಗ ಸ್ವತಃ ನಟ ರಮೇಶ್ ಅರವಿಂದ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಿಗ್​ಬಾಸ್ ನಿರೂಪಣೆ ಮಾಡುವ ಆಫರ್ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಮೇಶ್ ಅರವಿಂದ್, ‘ಆ ರೀತಿಯ ಯಾವುದೇ ಆಫರ್ ಬಂದಿಲ್ಲ, ಆ ಬಗ್ಗೆ ಚರ್ಚೆ ಸಹ ನಡೆಸಲಾಗಿಲ್ಲ. ನನ್ನ ಹಾದಿ ಬೇರೆ ಇದೆ, ನಾನು ಪ್ರೀತಿಯಿಂದ ರಮೇಶ್, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಬಿಗ್​ಬಾಸ್ ನಿರೂಪಣೆ ಮಾಡುತ್ತಿಲ್ಲ. ಆ ರೀತಿಯ ಯಾವುದೇ ಆಫರ್ ಸಹ ನನಗೆ ಬಂದಿಲ್ಲ’ ಎಂದಿದ್ದಾರೆ.

ಇನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೆಸರು ಸಹ ಬಿಗ್​ಬಾಸ್ ನಿರೂಪಣೆ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ. ಕಾಂತಾರ ಸಿನಿಮಾದ ಬಳಿಕ ರಿಷಬ್ ಶೆಟ್ಟಿಗೆ ದೊಡ್ಡ ಮಟ್ಟದ ಜನಪ್ರಿಯತೆ ಬಂದಿದೆ. ದೇಶದೆಲ್ಲೆಡೆ ಅವರನ್ನು ಜನ ಗುರುತಿಸುತ್ತಾರೆ. ಇದರ ಜೊತೆಗೆ ರಿಷಬ್ ಶೆಟ್ಟಿ ಬಳಿ ಒಳ್ಳೆಯ ಮಾತುಗಾರಿಕೆಯೂ ಇದೆ. 

ರಿಷಬ್ ಶೆಟ್ಟಿ ಈ ವರೆಗೂ ಯಾವುದೇ ಟಿವಿ ಶೋ ನಿರೂಪಣೆ ಮಾಡಿಲ್ಲ. ಹಾಗಾಗಿ ಅವರನ್ನು ನಿರೂಪಣೆಗೆ ಕರೆತರಬಹುದು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.ಇನ್ನು ಡಾಲಿ ಧನಂಜಯ್ ಹೆಸರು ಸಹ ಕೇಳಿ ಬರುತ್ತಿದೆ. ಡಾಲಿ ಸಹ ಶಕ್ತ ಮಾತುಗಾರ. ಕಿಚ್ಚ ಸುದೀಪ್ ರೀತಿಯಲ್ಲಿಯೇ ಗಂಭೀರವಾಗಿ, ಪ್ರಭಾವ, ಪರಿಣಾಮ ಬೀರುವಂತೆ ಡಾಲಿ ಧನಂಜಯ್ ಮಾತನಾಡಬಲ್ಲರು ಎನ್ನಲಾಗುತ್ತಿದೆ. ಯಾವುದಕ್ಕೂ ಕಾದು ನೋಡಬೇಕಿದೆ.

You may also like...