ಈ ಭವಿಷ್ಯ ಹೇಳುತ್ತಿದೆ ಇನ್ನೂ ಆತ ಹೊರಗಡೆ ಬರಲ್ಲ; ಬರೋದಕ್ಕೆ ಕೆಲಬರು ಬಿಡಲ್ಲ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ದರ್ಶನ್ ಕನ್ನಡಕ್ಕೆ ಸಿಕ್ಕಿದ್ದ ಸೂಪರ್ ಸ್ಟಾರ್. 60ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಮಾಸ್ ಹೀರೋ.. ಆದ್ರೆ ಆ ಒಂದು ಕೊಲೆ ದರ್ಶನ್ ಬಣ್ಣದ ಭವಿಷ್ಯವನ್ನೇ ಮುಗಿಸಿ ಬಿಡ್ತಾ? ಹೌದು ಎನ್ನುತ್ತಿದೆ ಜೋತಿಷ್ಯ ಶಾಸ್ತ್ರ. ಹಾಗಾದ್ರೆ ದರ್ಶನ್ ‘ಮತ್ತೆ ಸಿನಿಮಾದಲ್ಲಿ ನಟಿಸಲ್ವಾ? ಸಿನಿಮಾ ಬಿಟ್ಟು ದರ್ಶನ್‌ಗೆ ಬದುಕೋಕೆ ಆಗುತ್ತಾ?
ನಟ ದರ್ಶನ್ ಕನ್ನಡ ಬೆಳ್ಳಿತೆರೆ ಮೇಲೆ ಮಿನುಗುತ್ತಿದ್ದ ಮಿನುಗುತಾರೆ. ಅಪ್ಪ ತೂಗುದೀಪ ಶ್ರೀನಿವಾಸ್ ದೊಡ್ಡ ಖಳನಟನಾಗಿ ಹೆಸರು ಮಾಡಿದ್ರು, ಅಪ್ಪನ ಹೆಸರು ಹೇಳದೇ ಸ್ವಂತ ಪ್ರತಿಭೆ ನಂಬಿ ಒಬ್ಬ ಲೈಟ್ ಬಾಯ್ ಆಗಿ ಕೆಲಸ ಮಾಡಿಕೊಂಡು, ಸಪೋರ್ಟಿಂಗ್ ರೋಲ್ ಮಾಡುತ್ತಾ ಹಿರೋ ಆಗಿ ಬೆಳೆದಾತ.
ದರ್ಶನ್ ಸ್ಟಾಂಡಲ್‌ವುಡ್‌ನಲ್ಲಿ ತನ್ನದೇ ಬ್ಯಾಂಡ್ ಸೃಷ್ಟಿಸಿಕೊಂಡು ಬಾಕ್ಸಾಫೀಸ್ ಸುಲ್ತಾನ ಅಂತಾನೆ ಹೆಸರು ಪಡೆದಿದ್ದ. ಆದ್ರೆ ರೇಣುಕಾ ಸ್ವಾಮಿ ಒಂದು ಕೊಲೆ ದರ್ಶನ್ ಬ್ಯಾಂಡ್ ವ್ಯಾಲ್ಕು ಕಳೆದುಕೊಳ್ಳೋ ಹಾಗೆ ಮಾಡಿದೆ. ದಚ್ಚು ಈಗ ಜೈಲು ಹಕ್ಕಿ. ಇನ್ನೇನು ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತೆ. ದಾಸ ಆಚೆ ಬರ್ತಾನೆ. ಮತ್ತೆ ಆನೆ ನೆಡೆದಿದ್ದೇ ದಾರಿ, ಬಾಸ್ ಸಿನಿಮಾ ಮಾಡ್ತಾರೆ ಅಂತ ಫ್ಯಾನ್ಸ್ ಆಸೆಗಣ್ಣಿನ ಗೋಪುರ ಕಟ್ಟಿಕೊಂಡು ಕಾಯುತ್ತಿದ್ದಾರೆ. ಆದ್ರೆ ದರ್ಶನ್ ಸಿನಿ ಖರಿಯರ್ ಎಂಡ್ ಆಗುತ್ತೆ ಅನ್ನೋ ಬೆಂಕಿ ಬಿರುಗಾಳಿಯಂತಾ ಸುದ್ದಿಯೊಂದು ಸ್ಯಾಂಡಲ್‌ವುಡ್‌ನ ಆವರಿಸಿದೆ.
ನಟ ದರ್ಶನ್ ಗೆ ಕೆಟ್ಟ ಸಮಯ. ಕೊಲೆ ಆರೋಪದ ಸುಳಿಗೆ ಸಿಕ್ಕಿ ಒದ್ದಾಡುತ್ತಿರುವ ದರ್ಶನ್ ಗೆ ಹೇಗಾದ್ರು ಮಾಡಿ ಹೊರ ಬರಬೇಕು ಅನ್ನೋ ಹಂಬಲ, ಆದ್ರೆ ಅದಕ್ಕೆ ಸದ್ಯಕ್ಕೆ ಸರಿಯಾದ ಸಮಯ ಇಲ್ವಂತೆ. ದರ್ಶನ್ ಜೀವನದ ಸರಿಯಾದ ಟೈಂ ಶುರುವಾಗೋದು 2027ಕ್ಕೆ ಅಂತೆ. ಅಲ್ಲಿವರೆಗೂ ದರ್ಶನ್ ಜೈಲಿನಿಂದ ಹೊರಬರಲ್ವಾ ಅಂತ ಚಿಂತೆ ಬೇಡ, ಜೈಲಿನಿಂದ ಹೊರ ಬಂದ್ರೂ ಈ ಕೊಲೆ ಕೇಸ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿ ಟಾರ್ಚರ್ ಮಾಡುತ್ತೆ ಅಂತ ಕಾನೂನು ತಜ್ಞರು ಹೇಳುತ್ತಿದ್ದಾರೆ.
ಇದಕ್ಕೆ ಸರಿಯಾಗಿ ಜೋತಿಷ್ಯಿ ಒಬ್ಬರು, ದರ್ಶನ್‌ಗೆ ರೈಟ್ ಟೈಂ ಬರೋದು 2027ಕ್ಕೆ ಎಂದಿದ್ದಾರೆ. ಅದು ಕೂಡ ದರ್ಶನ್ ಚಿತ್ರರಂಗವನ್ನ ತೊರೆದು ಕಂಪ್ಲೇಟ್ ರಾಜಕೀಯಕ್ಕೆ ಬರುತ್ತಾರೆ ಅಂತ ಪ್ರಶಾಂತ್ ಕಿಣಿ ಹೆಸರಿನ ಜೋತಿಷಿ ಭವಿಷ್ಯ ನುಡಿದಿದ್ದಾರೆ.