• Uncategorised

ಈ ವರ್ಷ‌ ವೀಕ್ಷಕರಿಗೆ ಹಬ್ಬ; ಬಿಗ್ ಬಾಸ್ ಮನೆಗೆ ‌ನುಗ್ಗಲು ಸ್ಪರ್ಧಿಗಳ ಆಯ್ಕೆ ಶುರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ನಿನ್ನೆ ಮೊನ್ನೆ ಮುಗಿದ ಹಾಗಿದೆ. ಸೀಸನ್‌ 10ರಲ್ಲಿ ಭಾಗವಹಿಸಿದ ಸ್ಪರ್ಧಿಗಳೂ ಬಿಗ್‌ ಬಾಸ್‌ ಗುಂಗಿನಿಂದ ಇನ್ನೂ ಆಚೆ ಬಂದಿಲ್ಲ. ಜನರ ಮನದಲ್ಲಿಯೂ ಹಾಗೆಯೇ ಇದೆ. ಹೀಗಿರುವಾಗಲೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿಚಾರವಾಗಿಯೂ ಒಂದಷ್ಟು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬರುತ್ತಿವೆ.

ಅಂದರೆ, ಸ್ಪರ್ಧಿಗಳು ಯಾರಿರಬಹುದು ಎಂಬ ಲೆಕ್ಕಾಚಾರ ಹಾಕುವ ಕೆಲಸವೂ ನಡೆಯುತ್ತಿದೆ. ಕಿಚ್ಚ ಸುದೀಪ್‌ ಎಂದಿನಂತೆ ಮತ್ತೆ ಹೊಸ ಅವತಾರದ ಜತೆಗೆ ಗತ್ತಿನಲ್ಲಿಯೇ ವೇದಿಕೆ ಮೇಲೇರಲಿದ್ದಾರೆ. ಹಾಗಾದರೆ ಈ ರಿಯಾಲಿಟಿ ಶೋನ ಬಾಪ್‌ ಬಿಗ್‌ ಬಾಸ್‌ ಶುರುವಾಗುವುದು ಯಾವಾಗ? ಅದರಲ್ಲೂ ಈ ಸಲ ಸುದೀಪ್ ಅವರು ನಡೆಸಿಕೊಡಲ್ಲ ಎಂದು ಕೂಡ ಹೇಳಲಾಗ್ತಿದೆ.

ಬಿಗ್‌ ಬಾಸ್‌ ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದು. ಬೇರೆ ಬೇರೆ ಕ್ಷೇತ್ರಗಳ 16 ಜನರನ್ನು ಒಂದೇ ಮನೆಯಲ್ಲಿ ಇರಿಸಿ, ಭಿನ್ನ ಮನಸ್ಥಿತಿಗಳ ಅಸಲಿ ಮುಖಗಳನ್ನು, ನವಿರು ಮನರಂಜನೆ ಮೂಲಕ ನೋಡುಗರ ಮುಂದಿಡುವುದೇ ಈ ಶೋನ ಮುಖ್ಯ ಉದ್ದೇಶ. ಇದೀಗ ಇದೇ ಬಿಗ್‌ ಬಾಸ್‌ ಕನ್ನಡ ಮತ್ತೆ ಹೊಸ ಸೀಸನ್‌ ಮೂಲಕ ಆಗಮಿಸಲು ಸಜ್ಜಾಗುತ್ತಿದೆ.

BBK ಸೀಸನ್‌ 10ರ ದೊಡ್ಡ ಯಶಸ್ಸಿನ ಬಳಿಕ, ಮತ್ತೊಂದು ಅಚ್ಚರಿಯ ಮೂಲಕ ವೀಕ್ಷಕರ ಎದುರು ಬರಲು ತರಹೇವಾರಿ ಪ್ಲಾನ್‌ಗಳ ಜತೆಗೆ ಆಗಮಿಸುತ್ತಿದೆ ಕಲರ್ಸ್‌ ಕನ್ನಡ ವಾಹಿನಿ. ಇದೀಗ ಸೀಸನ್‌ 11 ಇದೇ ಅಕ್ಟೋಬರ್‌ನಲ್ಲಿ ಪ್ರಸಾರ ಶುರುವಾಗಲಿದೆ. ಟ್ರೋಲ್‌ ಆದವರು, ಕಾಂಟ್ರವರ್ಸಿ ಮೂಲಕ ಸದ್ದು ಗದ್ದಲ ಮಾಡಿದವರೇ ಕನ್ನಡದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. 

ಸದ್ಯದ ಮಾಹಿತಿ ಪ್ರಕಾರ ಕಳೆದ ವರ್ಷ ಸದ್ದು ಮಾಡಿದ್ದ ‘ತುಕಾಲಿ ಸ್ಟಾರ್’ ಸಂತು ಅವರ ಪತ್ನಿ ಮಾನಸಾ, ಹುಡುಗಿ ವೇಷದಲ್ಲಿಯಲ್ಲಿ ಗಮನ ಸೆಳೆದ ಮಜಾಭಾರತ ಖ್ಯಾತಿಯ ರಾಘವೇಂದ್ರ, ಇವರ ಜತೆಗೆ ಇತ್ತೀಚೆಗಷ್ಟೇ ಮುಗಿದ ಬೃಂದಾವನ ಧಾರಾವಾಹಿ ಖ್ಯಾತಿಯ ವರುಣ್‌ ಆರಾಧ್ಯ ಸೇರಿ ಇನ್ನೂ ಹಲವರ ಹೆಸರು ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುತ್ತಿದೆಯಾದರೂ, ಅಧಿಕೃವಾಗಿ ಶೋ ಶುರುವಾದಾಗಲೇ ಘೋಷಣೆ ಆಗಲಿದೆ.

You may also like...