• Uncategorised
  • 0

ಎರಡನೇ ಮದುವೆಗೆ ಕಾಲಿಟ್ಟ ನಿವೇದಿತಾ ಗೌಡ; ಪೋಷಕರಿಂದ ಮಹಾ ಸಂಭ್ರಮ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಸಂಬಂಧ ಮುರಿದು ಬಿದ್ದು ಹಲವಾರು ತಿಂಗಳೇ ಕಳೆದರೂ, ಜನರು ಮಾತ್ರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯ ಮ್ಯಾಟರ್ ಬಿಟ್ಟುಕೊಡಲು ಸಿದ್ಧವಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಸಣ್ಣ ಸಣ್ಣ ಸುದ್ದಿಗೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಟ್ರೆಂಡ್ ಆಗುತ್ತಿದ್ದಾರೆ.

ಈಗಲೂ ಅಷ್ಟೇ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ 2ನೇ ಮದುವೆ ಬಗ್ಗೆ ಸಂಚಲನ ಸೃಷ್ಟಿಸುವ ಸುದ್ದಿ ಹರಿದಾಡುತ್ತಿದೆ.ಅಷ್ಟಕ್ಕೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್ ಸೀಸನ್ 5ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಅದರಲ್ಲೂ ಬಿಗ್‌ಬಾಸ್ ಮನೆಯಲ್ಲಿ ಇಬ್ಬರು ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಮದುವೆ ಕೂಡ ಆಗಿದ್ದರು. ರಿಯಾಲಿಟಿ ಶೋನಿಂದ ಪ್ರೀತಿ ಶುರುವಾಗಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಯಲ್ಲೇ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದರು. ಆಗ ಇದು ವಿವಾದಕ್ಕೆ ಕಾರಣವಾಗಿತ್ತು.

ಅಲ್ಲದೆ ಆಗ ಸರ್ಕಾರ ಇವರ ಮೇಲೆ ನಿಷೇಧ ಕೂಡ ಹೇರಿತ್ತು. ಈ ರೀತಿ ವಿವಾದ ಮಾಡಿಕೊಂಡಿದ್ದ ಚಂದನ್ ಶೆಟ್ಟಿ ನಂತರ ತಮ್ಮ ಪತ್ನಿ ನಿವೇದಿತಾಗೆ ಡಿವೋರ್ಸ್ ಕೊಟ್ಟು ಸದ್ದು ಮಾಡಿದ್ದರು. ಈಗ ನೋಡಿದರೆ ನಿವೇದಿತಾಗೆ ಎರಡನೇ ಮದುವೆ ಆಗುತ್ತಿದೆ ಅಂತಿದ್ದಾರೆ ಜನ!ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಏನೇ ಮಾಡಿದರೂ ಟ್ರೋಲ್ ಆಗುತ್ತಿದೆ. ಯಾಕಂದ್ರೆ ಇದು ಸೋಷಿಯಲ್ ಮೀಡಿಯಾ ಜಮಾನ, ಹೀಗಾಗಿ ಇಲ್ಲಿ ಜನಗಳು ಕೂಡ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿ ಬದುಕುತ್ತಾರೆ.

ಅದೇ ರೀತಿ ಇದೀಗ ಚಂದನ್ ಶೆಟ್ಟಿ & ನಿವೇದಿತಾ ಗೌಡ ವಿಚಾರ ಕೂಡ ಚರ್ಚೆ ಆಗುತ್ತಿದೆ. ನೀಲಿ ಕಲರ್ ಸೀರೆ ಉಟ್ಟು ನಿವೇದಿತಾ ಗೌಡ ಈಗ ಮಿರ ಮಿರ ಮಿಂಚಿದ್ದಾರೆ. ಆದರೆ ಇದನ್ನೇ ನೋಡಿದ ನೆಟ್ಟಿಗರು ಮತ್ತೊಂದು ಮದುವೆಗಾಗಿ ತಯಾರಿ ನಡೆಸುತ್ತಿದ್ದೀರಾ? ಅಂತಾ ನಿವೇದಿತಾ ಗೌಡಗೆ ಪ್ರಶ್ನೆ ಕೇಳುತ್ತಿದ್ದಾರೆ.

ಆದರೆ ನಿವೇದಿತಾ ಗೌಡ ನೀಲಿ ಸೀರೆ ಉಟ್ಟಿದ್ದು ಖಾಸಗಿ ಜಾಹೀರಾತು ಒಂದಕ್ಕೆ. ಹೀಗೆ ಕಡು ನೀಲಿ ಬಣ್ಣದ ಸೀರೆ ಉಟ್ಟು ಆಭರಣ ಅಂಗಡಿಗೆ ಜಾಹೀರಾತು ನೀಡಿದ್ದಾರೆ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಿವೇದಿತಾ ಗೌಡ. ಆದರೂ ಈ ಬಗ್ಗೆ ತಪ್ಪು ತಪ್ಪು ಮಾಹಿತಿ ನೀಡುತ್ತಿದ್ದಾರೆ ಕೆಲವರು. ಈ ಬಗ್ಗೆ ನಿವೇದಿತಾ ಗೌಡ ಬೆಂಬಲಿಗರು & ಅಭಿಮಾನಿಗಳು ಬೇಸರ ಹೊರ ಹಾಕಿ ಸೂಕ್ತ ಪ್ರತ್ಯುತ್ತರ ನೀಡುತ್ತಿದ್ದಾರೆ.

You may also like...

Leave a Reply

Your email address will not be published. Required fields are marked *