ಎರಡನೇ ಮದುವೆಗೆ ಮೇಘನಾ ರಾಜ್ ಸಿದ್ದತೆ; ರವಿಚಂದ್ರನ್ ಮಗನ ಜೊತೆ ಓಡಾಟ
ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿ ಕನಸು ಕಂಡ ಬಾಳನ್ನು ಬಾಳುವ ಮೊದಲೇ ಪತಿಯನ್ನು ಕಳೆದುಕೊಂಡ ಮೇಘನಾ ರಾಜ್ ಮತ್ತೊಮ್ಮೆ ಮದುವೆಯಾಗುತ್ತಾರಾ? ತಾಯಿ ಮಡಿಲಲ್ಲಿ ಮಲಗಿ ಮೇಘನಾ ಹೇಳಿದ್ದೇನು ತಿಳ್ಕೊಳ್ಳೋಣ ಬನ್ನಿ. ಜೂನ್ 7, 2020 ರಂದು ನಟಿ ಮೇಘನಾ ರಾಜ್ ಅವರ ಜೀವನ ದಿಕ್ಕೇ ಬದಲಾಯಿತು. ಚಿರಂಜೀವಿ ಸರ್ಜಾ ಅವರು ಕೇವಲ 39 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ನೋವಿನ ಆ ಕ್ಷಣದಲ್ಲಿ, ಮೇಘನಾ ತಮ್ಮ ಮಗುವಿನ ನಿರೀಕ್ಷೆಯಲ್ಲಿದ್ದರು.
ಅವರು ಅಕ್ಟೋಬರ್ 22, 2020 ರಂದು ತಮ್ಮ ಮಗ ರಾಯನ್ ರಾಜ್ ಸರ್ಜಾಗೆ ಜನ್ಮ ನೀಡಿದರು.
ಅಂದಿನಿಂದ ನಟಿ ತನ್ನೆಲ್ಲ ಸಂತೋಷವನ್ನು ರಾಯನ್‌ನಲ್ಲಿಯೇ ಕಾಣುತ್ತಿದ್ದಾರೆ. ತಂದೆಯ ಬಗ್ಗೆ ಮಗನಿಗೆ ಹಲವು ವಿಚಾರ ಹೇಳುವುದರಿಂದ ಹಿಡಿದು ಜೀವನದ ಉತ್ತಮ ಮೌಲ್ಯಗಳನ್ನು ಕಲಿಸುವವರೆಗೆ, ಮೇಘನಾ ತನ್ನ ಮಗುವನ್ನು ಸಿಂಗಲ್ ಮದರ್ ಆಗಿ ಪ್ರೀತಿಯಿಂದ ಬೆಳೆಸುತ್ತಿದ್ದಾರೆ. ನಟಿ ತಮ್ಮ ಇನ್ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ ಮಗನೊಂದಿಗೆ ವೀಡಿಯೊ ಶೇರ್ ಮಾಡಿದ್ದರು. ಅದರಲ್ಲಿ ತಾಯಿ-ಮಗನ ಜೋಡಿ ಸೆಲ್ಫೀ ವಿಡಿಯೋ ಮಾಡಿದ್ದನ್ನು ಕಾಣಬಹುದು.
ರಾಯನ್ ಪದೇ ಪದೇ ಅಮ್ಮ ಎಂದು ಉಚ್ಚರಿಸುತ್ತಿರುವುದು ಕಂಡುಬಂದಿದೆ. ಆದರೆ, ವೀಡಿಯೊದ ಕೊನೆಯಲ್ಲಿ, ಅವರ ತಾಯಿ ಅಮ್ಮಾ ಎಂದು ಹೇಳಿದ ನಂತರವೂ, ರಾಯನ್ ಅಪ್ಪಾ ಎಂದು ಉಚ್ಚರಿಸಿದ್ದು ನೆಟ್ಟಿಗರ ಕಣ್ಣಲ್ಲಿ ನೀರು ತರಿಸಿತ್ತು.
ಬಾಲಿವುಡ್ ಬಬಲ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಮೇಘನಾ ರಾಜ್ ತನ್ನ ಸುತ್ತಲಿನ ಎಷ್ಟು ಜನರು ತನ್ನನ್ನು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಆದರೆ, ಒಂಟಿಯಾಗಿದ್ದು ಮಗನನ್ನು ನೋಡಿಕೊಳ್ಳಲು ಸಲಹೆ ನೀಡುವ ಜನರ ಒಂದು ವಿಭಾಗವೂ ಇದೆ ಎಂದು ಅವರು ಹೇಳಿದರು. ಅದೇ ಸಂಭಾಷಣೆಯಲ್ಲಿ, ಮೇಘನಾ ತನ್ನ ಪತಿ ಚಿರು ತನ್ನೊಂದಿಗೆ ಬಿಟ್ಟುಹೋದ ಒಂದು ಸಲಹೆಯನ್ನು ನೆನಪಿಸಿಕೊಂಡರು. ಜಗತ್ತು ಏನೇ ಹೇಳಿದರೂ ಮನಸಿನ ಮಾತನ್ನು ಕೇಳು ಎಂದು ಚಿರಂಜೀವಿ ಯಾವಾಗಲೂ ಹೇಳುತ್ತಿದ್ದರು ಎಂದು ಅವರು ಹೇಳಿದ್ದಾರೆ. ಆದ್ದರಿಂದ, ತಾನು ಅದೇ ರೀತಿ ಮಾಡುತ್ತಿರುವುದಾಗಿ ಹೇಳಿದರು.
ನಾನು ಮದುವೆಯ ಬಗ್ಗೆ ಇನ್ನೂ ಆ ಪ್ರಶ್ನೆಯನ್ನು ನನಗೆ ಕೇಳಿಕೊಂಡಿಲ್ಲ. ಚಿರು ಅವರು ಬಿಟ್ಟುಹೋದ ಒಂದು ವಿಷಯವೆಂದರೆ ಅದು ವ್ಯಕ್ತಿ ಒಬ್ಬರು ಬದುಕಬೇಕಾದ ರೀತಿ. ಹಾಗಾಗಿ ನಾಳೆ ಏನಾಗಲಿದೆ ಎಂದು ನಾನು ಯೋಚಿಸುವುದಿಲ್ಲ. ಅಥವಾ ಒಂದೆರಡು ದಿನಗಳ ನಂತರ ನನ್ನ ಜೀವನ ಹೇಗಿರುತ್ತದೆ ಎಂದೂ ಯೋಚಿಸುವುದಿಲ್ಲ. ನಾನು ಈಗಿನ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ ಎಂದಿದ್ದಾರೆ.