ಎಲ್ಲಿಂದಲೋ ಡ್ರೋನ್ ತಂದು ಇಲ್ಲಿ ಬಿಡ್ತವ್ನೆ, ಪ್ರತಾಪ್ ಗೆ ಅವಮಾನ ಮಾಡಿದ ಪ್ರತಿಸ್ಪರ್ಧಿ

ಬಿಗ್ ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಡ್ರೋನ್ ಪ್ರತಾಪ್ ಸ್ಪರ್ಧಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಬಂದಾಗಿನಿಂದಲೂ ಡ್ರೋನ್ ಪ್ರತಾಪ್ ಎಲ್ಲರೊಂದಿಗೆ ಬೆರೆಯುತ್ತಿಲ್ಲ. ಬಹುತೇಕ ಬಾರಿ ಡಲ್ ಆಗಿರುತ್ತಾರೆ. ನೀವು ಓಪನ್ ಅಪ್ ಆಗ್ತಿಲ್ಲ ಅಂತ ತುಕಾಲಿ ಸಂತು ಕೂಡ ಡ್ರೋನ್ ಪ್ರತಾಪ್‌ಗೆ ಪದೇ ಪದೇ ಹೇಳಿದ್ದಾರೆ.
ಇದೇ ಕಾರಣಕ್ಕೆ ಡ್ರೋನ್ ಪ್ರತಾಪ್ ಬಗ್ಗೆ ಇತರೆ ಸ್ಪರ್ಧಿಗಳಲ್ಲಿ ಬ್ಯಾಡ್ ಇಂಪ್ರೆಶನ್ ಅಥವಾ ಅಷ್ಟೇನು ಉತ್ತಮವಲ್ಲದ ಇಂಪ್ರೆಶನ್ ಮೂಡಿದೆ. ಬಿಗ್ ಬಾಸ್’ ಮನೆಯೊಳಗೆ ಪ್ರದೀಪ್ ಈಶ್ವರ್ ಅತಿಥಿಯಾಗಿ ಭಾಗವಹಿಸಿದರು. ಎಲ್ಲಾ ಸ್ಪರ್ಧಿಗಳಿಗೆ ಪ್ರದೀಪ್ ಈಶ್ವರ್ ಒಂದು ಟಾಸ್ಕ್ ನೀಡಿದರು.
ಪ್ರತಿಯೊಬ್ಬರು ಮುಂದೆ ಬಂದು – ತಮಗೆ ಗುಡ್ ಇಂಪ್ರೆಶನ್ ಮೂಡಿಸಿದ ಹಾಗೂ ಬ್ಯಾಡ್ ಇಂಪ್ರೆಶನ್ ಮೂಡಿಸಿದ ಓರ್ವ ಸ್ಪರ್ಧಿ ಮತ್ತು ಕಾರಣವನ್ನ ತಿಳಿಸಬೇಕಿತ್ತು. ಈ ಟಾಸ್ಕ್‌ನಲ್ಲಿ ಬ್ಯಾಡ್ ಇಂಪ್ರೆಶನ್‌ನ ಹೆಚ್ಚು ಮಂದಿ ಬೆಟ್ಟು ಮಾಡಿ ತೋರಿಸಿದ್ದು ಡ್ರೋನ್ ಪ್ರತಾಪ್ ಕಡೆಗೆ..! ಎಲ್ಲರ ಜೊತೆಗೆ ಜಾಸ್ತಿ ಮಾತನಾಡುತ್ತಿಲ್ಲ, ಮಿಂಗಲ್ ಆಗುತ್ತಿಲ್ಲ,
ಓಪನ್ ಅಪ್ ಆಗುತ್ತಿಲ್ಲ, ಸೆಪರೇಟ್ ಆಗಿ ಇರುತ್ತಿದ್ದಾರೆ, ಡಲ್ ಆಗಿ ಕಾಣ್ತಿದ್ದಾರೆ, ಕನೆಕ್ಟ್ ಆಗ್ತಿಲ್ಲ ಎಂಬಿತ್ಯಾದಿ ಕಾರಣಗಳನ್ನ ನೀಡಿ ರಕ್ಷಕ್ ಬುಲೆಟ್, ವಿನಯ್ ಗೌಡ, ನೀತು ವನಜಾಕ್ಷಿ, ಸಿರಿ, ಗೌರೀಶ್ ಅಕ್ಕಿ, ವರ್ತೂರು ಸಂತೋಷ್, ತುಕಾಲಿ ಸಂತು ಹಾಗೂ ಸ್ನೇಹಿತ್ ಗೌಡ… ಡ್ರೋನ್ ಪ್ರತಾಪ್ ಬಗ್ಗೆ ತಮಗಾದ ಬ್ಯಾಡ್ ಇಂಪ್ರೆಶನ್ ವಿವರಿಸಿದರು.
ಯಾರ್ಯಾರು ಏನೇನು ಹೇಳಿದ್ದೀರಾ.. ನನಗೆ ಎಲ್ಲವೂ ಅರ್ಥ ಆಯ್ತು. ಮುಂದಿನ ದಿನಗಳಲ್ಲಿ ನೋಡೋಣ ಹೇಗಾಗುತ್ತೆ ಅಂತ. ಎಲ್ಲದಕ್ಕೂ ಒಂದು ಟೈಮ್ ಬೇಕು. ನನಗೆ ನನ್ನದೇ ಆದ ಒಂದು ಟೈಮ್ ಬೇಕು. ನಾನು ಮಾಡ್ತಿರುವ ಕೆಲಸವನ್ನ ನಾನು ಕಂಟಿನ್ಯೂ ಮಾಡುತ್ತಿದ್ದೇನೆ. ಮೊದಲು ಡ್ರೋನ್ ಎಲ್ಲಿ ಅಂತ ಕೇಳುತ್ತಿದ್ದರು. ಈಗ ಡ್ರೋನ್ ಇದೆ. ಆಮೇಲೆ ಪರ್ಮಿಷನ್ ಎಲ್ಲಿ ಅಂತ ಕೇಳುತ್ತಿದ್ದರು.
ಆ ಪರ್ಮಿಷನ್ ಕೂಡ ಬಂದ್ಮೇಲೆ ಇನ್ನೊಂದೆಲ್ಲಿ ಅಂತ ಕೇಳ್ತಾರೆ. ನನ್ನ ಮೇಲೆ ಆರೋಪ ಇರೋದೇ ಟೆಕ್ನಿಕಲ್ ನಾಲೆಡ್ಜ್ ಮತ್ತು ಡ್ರೋನ್ ಮಾಡಿದ್ದಾರಾ, ಬಿಟ್ಟಿದ್ದಾರಾ ಅಂತ ಅನುಮಾನವಿದೆ. ನಾನು ಹೇಳೋದಿಷ್ಟೇ. ನನ್ನನ್ನ ನಂಬಿ ಅಂತ ಹೇಳಲ್ಲ. ನನ್ನ ಕೆಲಸವನ್ನ ನಾನು ಕಂಟಿನ್ಯೂ ಮಾಡ್ತೀನಿ. ನನ್ನನ್ನ ಚಾಲೆಂಜ್ ಮಾಡುವ ಹಾಗಿದ್ದರೆ ಲೀಗಲ್ ಆಗಿ ಚಾಲೆಂಜ್ ಮಾಡಿ. ಸಮಾಜದಲ್ಲಿ ಸಾಕಷ್ಟು ಜನ ಈ ತರಹ ಅಟ್ಯಾಕ್‌ಗೆ ಒಳಗಾಗುತ್ತಾರೆ. ರಕ್ಷಕ್ ಅವರನ್ನೂ ಟ್ರೋಲ್ ಮಾಡಿದ್ದಾರೆ. ಅವರಿಗೂ ಯಾವುದೇ ರೀತಿ ಸಪೋರ್ಟ್ ಇಲ್ಲ.
ಧೈರ್ಯ ಇದ್ದರೆ ದೊಡ್ಡ ದೊಡ್ಡವರನ್ನ ಚಾಲೆಂಜ್ ಮಾಡಿ. ಯಾರು ಜನರ ದುಡ್ಡನ್ನ ಲೂಟಿ ಮಾಡ್ತಾರೋ, ಅವರನ್ನ ಚಾಲೆಂಜ್ ಮಾಡಿ. ಅದಕ್ಕೆ ಗಟ್ಸ್ ಇಲ್ಲ ಅಲ್ವಾ? ನಿಮಗೆ ಗಟ್ಸ್ ಇದ್ದರೆ ಕೇಸ್ ಫೈಲ್ ಮಾಡಿ ನನ್ನ ಮೇಲೆ.! ನನ್ನನ್ನ ನಂಬಿ ಅಂತ ನಾನು ಹೇಳ್ತಿಲ್ಲ. ಸ್ವಲ್ಪ ಟೈಮ್ ಕೊಡಿ ಅಂತ ಕೇಳ್ತಿದ್ದೀನಿ. ರಾತ್ರೋ ರಾತ್ರಿ ಮಾಡುವ ಕೆಲಸ ಅಲ್ಲ ಇದು. ಲೋ ಫೀಲ್ ಆದಾಗ ನನಗೆ ಬೇಸರ ಆಗುತ್ತೆ.
ಜಾಬ್ಸ್ ಕ್ರಿಯೇಟ್ ಮಾಡಬೇಕು, ಭಾರತವನ್ನ ಡ್ರೋನ್ ಹಬ್ ಆಗಿ ಮಾಡಬೇಕು ಅಂತ ಆಸೆ ಇದೆ. ಅದು ಬಿಟ್ಟು ನನಗೆ ಇನ್ನೇನು ಬೇಡ ಎಂದು ‘ಬಿಗ್ ಬಾಸ್’ ಮನೆಯಲ್ಲಿ ಡ್ರೋನ್ ಪ್ರತಾಪ್ ಎಲ್ಲರ ಮುಂದೆ ಹೇಳಿದ್ದಾರೆ.