ಐವರೊಂದಿಗೆ ಮ ಲಗು ಎಂದಿದ್ದ, ಶ್ರುತಿ ಹರಿಹರನ್ ಮತ್ತೆ ಸದ್ದು
ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿ ಶ್ರುತಿ ಹರಿಹರನ್. ನಾಲ್ಕು ವರ್ಷಗಳ ಹಿಂದೆ ತಮಗೆ ಆದ ಅಹಿತಕರ ಅನುಭವದ ಬಗ್ಗೆ ಇದೀಗ ಬಹಿರಂಗಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಶ್ರುತಿ ಹರಿಹರನ್. #MeToo ವಿವಾದದ ಸಂದರ್ಭದಲ್ಲಿ ನಟ ಅರ್ಜುನ್ ಸರ್ಜಾ ಬಗ್ಗೆ ಮಾಡಿದ ಆರೋಪದಿಂದ ಸಾಕಷ್ಟು ಸುದ್ದಿಯಾಗಿದ್ದಾರೆ.
ಇದೀಗ ನಟಿ ಶ್ರುತಿ ಹರಿಹರನ್ ನಾಲ್ಕು ವರ್ಷಗಳ ಹಿಂದೆ ತಮ್ಮೊಂದಿಗೆ ತಮಿಳು ಚಿತ್ರ ನಿರ್ಮಾಪಕರು ಅಸಭ್ಯವಾಗಿ ನಡೆದುಕೊಂಡರು ಎಂದು ಆರೋಪಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು ಎಂದು ಹೇಳಿದ್ದಾರೆ. ತಮಿಳು ಚಿತ್ರವೊಂದರ ನಿರ್ದೇಶಕರು ಚಿತ್ರದಲ್ಲಿ ನಟಿಸಲು ಆಫರ್ ಕೊಟ್ಟಿದ್ದರು. ಫುಲ್ ಎಕ್ಸೈಟ್ ಆಗಿದ್ದೆ. ತುಂಬಾ ಖುಷಿ ಆಗಿತ್ತು ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.
ಈ ಚಿತ್ರಕ್ಕೆ ಐವರು ನಿರ್ಮಾಪಕರಿದ್ದರು. ಈ ಸಿನಿಮಾದಲ್ಲಿ ನಾನು ನಟಿಸಬೇಕಂದರೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಬಹುದು ಅಂತ ತಿಳಿಸಿದ್ದರು ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದಾರೆ. ಇಂಥದ್ದೊಂದು ದುರುದ್ದೇಶವಿದ್ದರೆ ಕಾಲಲ್ಲಿರೋದು ಕೈ ಗೆ ಬರಬೇಕಾಗುತ್ತದೆ ಎಂದು ಉಗಿದಿದ್ದೆ ಎಂದು ನಟಿ ಶ್ರುತಿ ಹರಿಹರನ್ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.