• Uncategorised
  • 0

ಕರ್ನಾಟಕದ ಸಂಸ್ಕೃತಿ ಹಾಳು ಮಾಡುತ್ತಿರುವ ಯುವ ಪ್ರೇಮಿಗಳು

ಇತ್ತೀಚಿನ ದಿನಗಳಲ್ಲಿ ರೀಲ್ಸ್‌ ಹುಚ್ಚು ಬಹಳನೇ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗ್ಬೇಕಂತಾ ಕೆಲವೊಬ್ಬರು ವಿತ್ರ ವಿಚಿತ್ರ ಸರ್ಕಸ್‌ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಜೋಡಿ ಕೂಡಾ ಗದ್ದೆಯಲ್ಲಿ ಭತ್ತ ನಾಟಿ ಮಾಡೋದು ಬಿಟ್ಟು, ಗದ್ದೆಯ ಕೆಸರು ನೀರಲ್ಲಿ ಹೊರಳಾಡುತ್ತಾ ನಾಗಿಣಿ ಡಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ರೀಲ್ಸ್‌ ಕ್ರೇಜ್‌ ಊಹಿಸಲು ಸಾಧ್ಯವಾಗದಷ್ಟು ಹೆಚ್ಚಾಗಿದೆ. ರೀಲ್ಸ್‌ ಮಾಡುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಲು, ರಾತ್ರೋರಾತ್ರಿ ಫೇಮಸ್‌ ಆಗಲು ಬಹುತೇಕರು ಬಯಸುತ್ತಾರೆ. ಮತ್ತು ಲೈಕ್ಸ್‌ ಮತ್ತು ಫಾಲೋವರ್ಸ್‌ ಮೂಲಕ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಹವಣಿಸುತ್ತಿರುತ್ತಾರೆ. ಇದಕ್ಕಾಗಿ ಯುವಕ ಯುವತಿಯರು ಚಿತ್ರ ವಿಚಿತ್ರ ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ.

ಅದರಲ್ಲಿ ಕೆಲವೊಂದು ವಿಡಿಯೋಗಳು ನಮಗೆ ನಗು ತರಿಸುವಂತಿರುತ್ತವೆ. ಅದೇ ರೀತಿ ಇಲ್ಲೊಂದು ಜೋಡಿ ಕೂಡಾ ಫೇಮಸ್‌ ಆಗುವ ಸಲುವಾಗಿ ಗದ್ದೆಯಲ್ಲಿ ಭತ್ತ ನಾಟಿ ಕೆಲಸ ಬಿಟ್ಟು ಗದ್ದೆಯ ಕೆಸರು ನೀರಿನಲ್ಲಿ ಹೊರಳಾಡುತ್ತಾ ನಾಗಿಣಿ ಡಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಇದೆಂಥಾ ಅವಸ್ಥೆ ಮಾರ್ರೆ ಎಂದು ನೆಟ್ಟಿಗರು ನಗ್ತಿದ್ದಾರೆ.

Vinay VK99351 ಹೆಸರಿನ ಯೂಟ್ಯೂಬ್‌ ಚಾನೆಲ್‌ ಒಂದರಲ್ಲಿ ಈ ರೀಲ್ಸ್‌ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ʼನಾಗಿಣಿ ಡಾನ್ಸ್‌ʼ ಎಬ ಶೀರ್ಷಿಕೆಯನ್ನು ಬರೆಯಲಾಗಿದೆ.ವೈರಲ್‌ ವಿಡಿಯೋದಲ್ಲಿ ಭತ್ತ ನಾಟಿ ಮಾಡೋದನ್ನು ಬಟ್ಟು ಜೋಡಿಯೊಂದು ಗದ್ದೆಯ ಕೆಸರು ನೀರಿನಲ್ಲಿ ಹೊರಳಾಡುತ್ತಾ ನಾಗಿಣಿ ಡಾನ್ಸ್‌ ಮಾಡುತ್ತಿರುವ ಫನ್ನಿ ದೃಶ್ಯವನ್ನು ಕಾಣಬಹುದು.

You may also like...

Leave a Reply

Your email address will not be published. Required fields are marked *