ಕಿಶನ್ ಜೊತೆ ನಮ್ರತಾ ಡ್ಯಾನ್ಸ್ ಮಾಡುವಾಗ ಏನು ಆಗುತ್ತೆ ಅಂತ ಗೊ ತ್ತಾ;
ನಮ್ರತಾ ಗೌಡಗೆ ಒಂದು ಶಾಪ ಬೆನ್ನು ಬಿದ್ದಿದೆ. ಬಿಗ್ ಬಾಸ್ ಶೋ ನಂತರ ಸಿಕ್ಕಾಪಟ್ಟೆ ಅವಕಾಶ ಸಿಗತ್ತೆ ಅಂತ ಅಂದುಕೊಂಡಿದ್ದರೂ ಕೂಡ ಆಮೇಲೆ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದಿದೆ. ಸಿನಿಮಾ ನಾಯಕಿಯಾಗುವೆ ಎಂದುಕೊಂಡಿದ್ದ ನಮ್ರತಾ ಅವರು ಕಿಶನ್ ಬಿಳಗಲಿ ಜೊತೆ ಡ್ಯಾನ್ಸ್ ಮಾಡಿ ಸುಸ್ತಾಗಿದ್ದಾರೆ.
ಕೊಡಗಿನಲ್ಲಿ ಬಿಕಿನಿ ಡ್ರೆಸ್ ಹಾಕಿ ಅದನ್ನು ಬಾಲಿಯಲ್ಲಿ ತೆಗೆದ ಫೋಟೋ ಎಂದು ಪೋಸ್ ಕೊಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ ಅವರು ಹೇಳಿಕೊಳ್ಳುವ ಸ್ಪರ್ಧಿ ಆಗಿರಲಿಲ್ಲ. ಅದ್ಯಾರೋ ಕಿಶನ್ ಬಿಳಗಲಿ ಜೊತೆ ನಮ್ರತಾ ಡ್ಯಾನ್ಸ್ ಮಾಡಿ ಚಾಲ್ತಿಯಲ್ಲಿದ್ದಾರೆ. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಗೆಲ್ಲೋದು ಮರೀಚಿಕೆ ಇರಬೇಕು.
ಸದಾ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಬರುತ್ತಲಿದೆ, ಟ್ರೋಲ್ಸ್ ಆಗುತ್ತಿದೆ, ನಾನು ಇದ್ಯಾವುದರ ಬಗ್ಗೆಯೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈ ವಿಡಿಯೋದಿಂದ ನನ್ನ ಮನಸ್ಸಿಗೆ ತುಂಬ ಘಾಸಿಯಾಯ್ತು. ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಇವರು ಟಾರ್ಗೆಟ್ ಮಾಡಿದ್ದಾರೆ. ಇದು ತಪ್ಪು. ನಾನು ಚಿತ್ರರಂಗದಲ್ಲಿ ತುಂಬ ವರ್ಷದಿಂದ ಇದ್ದೇನೆ, ನಾನು ಏನು ಅಂತ ಇಲ್ಲಿಯವರಿಗೆ ಗೊತ್ತಿದೆ. ಆದರೆ ನನ್ನ ಬಗ್ಗೆ ಗೊತ್ತಿಲ್ಲದವರು ಏನು ಮಾಡಬೇಕು? ಎಂದು ನಮ್ರತಾ ಗೌಡ ಹೇಳಿದ್ದಾರೆ.
ನಾನು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿ ಸುಮ್ಮನೆ ಇದ್ದೆ. ನನಗೆ ಏಕಾಏಕಿ ಯಶಸ್ಸು ಸಿಗಲಿಲ್ಲ. ಹಗಲು ರಾತ್ರಿ ನಾನು ಕೆಲಸ ಮಾಡಿದ್ದಕ್ಕೆ ಇಂದು ನಾನು ಈ ಸ್ಥಿತಿಯಲ್ಲಿದ್ದೇನೆ. ಕಿಶನ್ ಜೊತೆ ನಾನು ಡ್ಯಾನ್ಸ್ ಮಾಡಿದರೆ ಅವರ ಜೊತೆ ನನ್ನನ್ನು ಜೋಡಿ ಮಾಡಿ ಮಾತಾಡುತ್ತಿರುತ್ತಾರೆ. ನಾನು ಯಾರ ಜೊತೆ ತಿರುಗಾಡಿದರೂ ಕೂಡ ಅವರ ಜೊತೆ ನಮ್ಮ ಸಂಬಂಧ ಕಲ್ಪಿಸುತ್ತಾರೆ, ಕಿಶನ್ ಬಿಳಗಲಿ ಒಳ್ಳೆಯ ಡ್ಯಾನ್ಸರ್, ಅವರ ಜೊತೆ ಡ್ಯಾನ್ಸ್ ಮಾಡೋದರಿಂದ ನಮಗೆ ದುಡ್ಡು ಸಿಗಲ್ಲ, ನಾವು ಖರ್ಚು ಮಾಡಿ ಡ್ಯಾನ್ಸ್ ಮಾಡುತ್ತೇವೆ. ನಮ್ಮ ಹಣವೇ ಖರ್ಚಾಗುತ್ತದೆ ಎಂದು ನಮ್ರತಾ ಗೌಡ ಹೇಳಿದ್ದಾರೆ.