ಕೊನೆಯ ಗುಡ್ ನ್ಯೂಸ್ ಕೊಟ್ಟ ಅನುಶ್ರೀ ಹಾಗೂ ರಾಜ್ ಬಿ ಶೆಟ್ಟಿ, ಕರುನಾಡಿಗೆ ಹಬ್ಬದೂಟ
ತಮ್ಮ ಚಟಪಟ ಮಾತಿನ ಮೂಲಕವೇ ಕನ್ನಡ ಕಿರುತೆರೆಯಲ್ಲಿ ತಮ್ಮ ಅಮೋಘ ಮಾತುಗಾರಿಕೆ ಅಭಿನಯ ಹಾಗೂ ತುಂಟತನದ ಮೂಲಕ ಮನೆ ಮಾತಾಗಿರುವ ಆಂಕರ್ ಅನುಶ್ರೀ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಹಲವಾರು ಸೀಸನ್ಗಳಿಂದ ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜಿ ಕುಟುಂಬ ಅವಾರ್ಡ್ಸ್ ಸೇರಿದಂತೆ ಮುಂತಾದ
ಕಾರ್ಯಕ್ರಮಗಳ ನಿರೂಪಣೆ ಜೊತೆಗೆ ಯಶಸ್ವಿ ನಟರ ಸಿನಿಮಾದ ಆಡಿಯೋ ಲಾಂಚ್ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಕನ್ನಡಿಗರ ಮನೆಮಗಳಾಗಿ ಹೋಗಿರುವ ಅನು ಸದ್ಯ ಕನ್ನಡ ಚಿತ್ರ ರಂಗದ ಹೆವಿ ಟ್ಯಾಲೆಂಟೆಡ್ ರಾಜಾ ಬಿ ಶೆಟ್ಟಿ ಅವರೊಡನೆ ಕ್ಲಿಕ್ಕಿಸಿಕೊಂಡಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿಯ ವೈರಲಾಗುತ್ತಿದೆ.
ಮಂಗಳೂರಿನ ಕಲಾವಿದರಿಬ್ಬರು ಒಟ್ಟಿಗೆ ಒಂದೇ ಪ್ರೇಮ್ ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು ಫೋಟೋದಲ್ಲಿ ಖುಷಿ ಖುಷಿಯಿಂದ ಅನುಶ್ರೀ ಅವರಿಗೆ ರಾಜ್ ಬಿ ಶೆಟ್ಟಿ ಹಗ್ ನೀಡಿದ್ದಾರೆ. ಹೌದು ಸ್ನೇಹಿತರೆ, ರಾಜ್ ಬಿ ಶೆಟ್ಟ ಸದ್ಯ ತಮ್ಮ ಮುಂದಿನ ಚಿತ್ರ ಟೋಬಿ ಕೆಲಸದಲ್ಲಿ ತೊಡಗಿಕೊಂಡಿದ್ದು, ದಿನೇ ದಿನೇ ವಿಭಿನ್ನವಾದ ಪೋಸ್ಟರ್ ಹಾಗೂ ಮೋಶನ್ ಟೀಸರ್ಗ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸುತ್ತಿದ್ದಾರೆ ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಂತಹ ಅನುಶ್ರೀ ಅವರು ಟೋಬಿ ಸಿನಿಮಾ ತಂಡಕ್ಕೆ ವಿಶ್ ಮಾಡಿದರು.
ಇವರಿಬ್ಬರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದ್ದು, ಅನುಶ್ರೀ ಕೂಡ ಟೋಬಿ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು ಎಂದು ತಮ್ಮ ಅಭಿಪ್ರಾಯವನ್ನು ನೆಟ್ಟಿಗರು ಹೊರಹಾಕಿದ್ದಾರೆ.