• Uncategorised

ಗಣೇಶ್ ಮಗಳು ಎಷ್ಟು ಮುದ್ದಾಗಿದ್ದಾಳೆ; ಎರಡನೇ ಮಗುವಿನ ಜೊತೆ ಮುದ್ದಾಟ

ಗೋಲ್ಡನ್‌ ಸ್ಟಾರ್‌’ ಗಣೇಶ್‌ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಹೇಗೆ ಚಿತ್ರರಂಗಕ್ಕೆ ಪ್ರವೇಶ ಪಡೆದರು, ಅದಕ್ಕೂ ಮುನ್ನ ಅವರು ಎಷ್ಟು ಕಷ್ಟಪಟ್ಟಿದ್ದರು, ನಂತರ ಯಾವ ಚಿತ್ರಗಳಲ್ಲಿ ಅವರಿಗೆ ಬ್ರೇಕ್‌ ಸಿಕ್ಕಿತು? ಈ ಎಲ್ಲ ಪ್ರಶ್ನೆಗಳಿಗೂ ಅಭಿಮಾನಿಗಳಲ್ಲಿ ಉತ್ತರ ಇದೆ. ಅದೇ ರೀತಿ, ಅವರ ಮಕ್ಕಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಕುತೂಹಲ ಕೂಡ ಅಭಿಮಾನಿಗಳಿಗೆ ಇದ್ದೇ ಇರುತ್ತದೆ.

ಗಣೇಶ್‌ ಮತ್ತು ಶಿಲ್ಪಾ ದಂಪತಿಗೆ ಇಬ್ಬರು ಮಕ್ಕಳು. ಆ ಪೈಕಿ ಮಗಳು ಚಾರಿತ್ರ್ಯ ಸಖತ್‌ ಚೂಟಿ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಮಿಂಚುತ್ತಿದ್ದಾಳೆ. ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುತ್ತಲೇ, ಇನ್ನಿತರ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಂಡಿರುವ ಚಾರಿತ್ರ್ಯ ನಟಿ ಅಮೂಲ್ಯ ಮಕ್ಕಳ ಜೊತೆಗೆ ಪುಟ್ಟ ಮಗುವಿನಂತೆ ಆಟ ಆಡಿದ್ದಾರೆ.

ಅಷ್ಟೇ ಅಲ್ಲದೇ ಇತ್ತೀಚಿಗೆ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮುದ್ದು ಮಗಳು ಚಾರಿತ್ರ್ಯ ಗಣೇಶ್ ಸೀರೆಯುಟ್ಟಿರೋ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪಿಂಕ್ ಸೀರೆಯಲ್ಲಿ ಚಾರಿತ್ರ್ಯ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ.
ಗುಲಾಬಿ ಬಣ್ಣದ ಕಾಟನ್ ಸೀರೆ ಜೊತೆ, ಗುಲಾಬಿ ಬಣ್ಣದ ಸ್ಲೀವ್ ಲೆಸ್ ಫುಲ್ ನೆಕ್ ಬ್ಲೌಸ್ ಧರಿಸಿರುವ ಚಾರಿತ್ರ್ಯ ಬೇರೆ ಬೇರೆ ರೀತಿಯಲ್ಲಿ ಪೋಸ್ ನೀಡಿದ್ದು, ಇದನ್ನು ಅಮ್ಮ ಶಿಲ್ಪಾ ಗಣೇಶ್ ಕ್ಲಿಕ್ ಮಾಡಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

14 ವರ್ಷದ ಚಾರಿತ್ರ್ಯ ಸದ್ಯ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಮ್ಮ, ಅಪ್ಪನ ಜೊತೆ ಚಾರಿತ್ರ್ಯ ಕೂಡ ಹೆಚ್ಚಾಗಿ ಪಾರ್ಟಿಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಕಾಣಿಸುತ್ತಿದ್ದಾರೆ. ಮುಂದೊಂದು ದಿನ ಸಿನಿಮಾ ನಟಿಯಾಗಬಹುದು ಎಂದು ಸಿನಿರಸಿಕರು ಕಾಯ್ತಾ ಇದ್ದಾರೆ. 

You may also like...