• Uncategorised
  • 0

ಟಿಬೇಟ್ ಸಮಯದಲ್ಲಿ ಭಾವನಾ ಅವರ ಚಳಿಬಿಡಿಸಿದ ಸಂಬರ್ಗಿ;

ನಟ ದರ್ಶನ್ ಪ್ರಕರಣಕ್ಕೆ ಸ್ಯಾಂಡಲ್‌ವುಡ್‌ನಿಂದ ಹೆಚ್ಚು ಪ್ರತಿಕ್ರಿಯೆಗಳು ಬರುತ್ತಿಲ್ಲ. ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ನಟ ಸುದೀಪ್, ನಟಿ ರಮ್ಯಾ, ಜಗ್ಗೇಶ್ ಸೇರಿದಂತೆ ಕೆಲವೇ ಕೆಲವು ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟಿ ಭಾವನಾ ಅವರು ದರ್ಶನ್ ಬೆಂಬಲಕ್ಕೆ ಬಂದಿದ್ದಾರೆ.

ಕನ್ನಡದ ಸೂಪರ್‌ ಹಿಟ್ ಸಿನಿಮಾ ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಭಾವನಾ ರಾಮಣ್ಣ ಅವರು ಸಂತೋಷದಲ್ಲಿ ಮಾತ್ರ ಭಾಗಿಯಾಗಿ, ದುಃಖದ ಸಂದರ್ಭದಲ್ಲಿ ಅವರ ಜೊತೆಗೆ ನಿಲ್ಲದೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಯಾವಾಗಲೂ ದರ್ಶನ್ ಅವರ ಜೊತೆಗೆ ನಿಲ್ಲುತ್ತೇನೆ ಎಂದು ಗಟ್ಟಿಯಾಗಿ ಹೇಳಿಕೆ ನೀಡಿದ್ದಾರೆ.

ಇನ್ನು ಸಂದರ್ಶನ ಒಂದರಲ್ಲಿ ಈ ಕುರಿತಾಗಿ ಭಾವನಾ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ಮಾತು ನಡೆದಿದ್ದು ಭಾವನಾ ಮಾತನ್ನು ವಿರೋಧಿಸಿದ್ದಾರೆ. ಎಲ್ಲೋ ಒಂದು ಕಡೆ ದರ್ಶನ್ ಕೇಸ್ ಹಳ್ಳ ಹಿಡಿಯತ್ತೆ ಅಂತ ಡೌಟ್ ಇತ್ತು. ಆದರೆ ಬೆಂಗಳೂರು ಪೊಲೀಸರು ಎಲ್ಲರಿಗೂ ಒಂದೇ ಕಾನೂನು ಅಂತ ಸಾಬೀತುಪಡಿಸಿದ್ದು ನನಗೆ ತುಂಬ ಖುಷಿ ಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳು ಬರುತ್ತಿವೆ. ಇದನ್ನು ಅರಿಯದೆ ಇದ್ದರೆ ಕಷ್ಟ. 47 ವರ್ಷ ದೇಹ ಬೆಳೆದು, ಬುದ್ಧಿ ಬೆಳೆದಿಲ್ಲ ಅಂದ್ರೆ ಅದು ಅಪ್ಪ-ಅಮ್ಮ ಕೊಟ್ಟಿರೋ ಜೀನ್ಸ್ .

ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇರುವ ಅಪಾರ್ಟ್‌ಮೆಂಟ್‌ನಲ್ಲಿಯೇ ನಾನು ಇದ್ದೇನೆ. ರಾತ್ರಿ 10ಗಂಟೆಯಿಂದ 2 ಗಂಟೆ ಮಧ್ಯೆ ದರ್ಶನ್ ಅವರು ಅಪಾರ್ಟ್‌ಮೆಂಟ್‌ಗೆ ಬರುತ್ತಿದ್ದರು. ಬೆಳಗ್ಗೆ ಆದತಕ್ಷಣ ಹೊಡೆದರು ಅಂತ ಅವರ ಕುಟುಂಬದ ಬಗ್ಗೆ ದೂರು ಕೇಳ್ತೀವಿ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಾರ್ಟ್‌ಮೆಂಟ್ ಇರತ್ತೆ, ಅಲ್ಲಿ ಚೆಕ್ ಮಾಡಿದರೆ 10 ದೂರು ಸಿಗತ್ತೆ.

ನನಗೆ ವಿಜಯಲಕ್ಷ್ಮೀ ಅವರ ಪರಿಚಯವೂ ಇಲ್ಲ, ಅವರ ಮಗನನ್ನು ನೋಡಿದ್ದೇನೆ. ಇಲ್ಲಿ 300 ಮನೆ ಇದೆ, ಎಲ್ಲ ಮನೆಯೂ ಗೊತ್ತಿಲ್ಲ. ಹುಲಿ ಉಗುರಿನ ವಿವಾದದ ಟೈಮ್‌ನಲ್ಲಿ ದರ್ಶನ್ ಅವರ ಪ್ರಾಣಿ ಪ್ರೀತಿ ಬಗ್ಗೆ ಮಾತ್ರ ನಾನು ಮಾತಾಡಿದ್ದು. ಅದು ಅಲ್ಲಿಗೆ ಸೀಮಿತ ಅಷ್ಟೇ ಅಂದಿದ್ದಾರೆ.

You may also like...

Leave a Reply

Your email address will not be published. Required fields are marked *