• Uncategorised
  • 0

ಡಾ ಬ್ರೋ ಅವರನ್ನೇ ‌ಮೀರಿ ಬೆಳೆದ‌ ಸೋನು, ಪ್ರತಿ ‌ತಿಂಗಳಿಗೆ ಯೂಟ್ಯೂಬ್ ಮೂಲಕ 3 ಲಕ್ಷ ಸಂಬಳ

ಇದು ಫಾಸ್ಟ್ ಫುಡ್ ಯುಗ.. ಊಟ ಆರ್ಡರ್ ಮಾಡಿದ ಕೂಡಲೇ ಹೇಗೆ ಫಾಸ್ಟಾಗಿ ಡೆಲಿವರಿ ಆಗುತ್ತೋ ಹಾಗೇ ಇಲ್ಲಿ ಯಾರು ಬೇಕಾದರೂ ಕ್ಷಣ ಮಾತ್ರದಲ್ಲಿ ಫೇಮಸ್ ಆಗಬಹುದು. ಇಂಟರ್ನೆಟ್ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬಂದಿವೆ.  ಕೆಲವರು ತಮ್ಮ ಟ್ಯಾಲೆಂಟ್ ಪ್ರದರ್ಶಿಸಿ ಇನ್ನೂ ಚಾಲ್ತಿಯಲ್ಲಿದ್ದಾರೆ.

ಇನ್ನೂ ಕೆಲವರು ಬಂದ ಪುಟ್ಟ ಹೋದ ಪುಟ್ಟ ಎನ್ನುವ ಹಾಗೇ ಆಗಿದ್ದಾರೆ. ಟಿಕ್​ ಟಾಕ್ ಬ್ಯಾನ್​ ಆಗುವುದಕ್ಕಿಂತ ಮುಂಚೆ ಕರ್ನಾಟಕದಲ್ಲೂ ಹಲವು ಪ್ರತಿಭೆಗಳು ಹೆಸರು ಮಾಡಿದ್ದರು. ರಾತ್ರೋ ರಾತ್ರಿ ಸ್ಟಾರ್​​ ಗಳ ರೇಂಜ್​ನಲ್ಲಿ ಹೆಸರು ಮಾಡಿದ್ದರು. ಆದರೆ, ಅದನ್ನು ಉಳಿಸಿಕೊಳ್ಳುವ ತಾಕತ್ತು ಯಾರಿಗೂ ಇರಲಿಲ್ಲ. ಇನ್ನೂ ಕೆಲವರು ಸೋಷಿಯಲ್​ ಮೀಡಿಯಾದಿಂದ ಬಂದ ಫೇಮ್ ಬಳಸಿಕೊಂಡು ಉತ್ತಮ ಕಮಾಯಿ ಮಾಡುತ್ತಿದ್ದಾರೆ.

ಇದೇ ರೀತಿ ಸಾಮಾಜಿಕ ಜಾಲತಾಣ ಬಳಸ ಲಕ್ಷಾಂತರ ಗಳಿಕೆ ಮಾಡುವುದರಲ್ಲಿ ಸೋನು ಶ್ರೀನಿವಾಸ್​ ಗೌಡ ಸಹ ಒಬ್ಬರು. ಈಕೆಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಇತ್ತೀಚೆಗಂತೂ ಈಕೆಯನ್ನು ನೋಡದಿರದೇ ಇರುವವರಿಲ್ಲ. ಟಿಕ್​ಟಾಕ್​ ಬ್ಯಾನ್​ ಆದಮೇಲೂ ಸೋನು ಇನ್​ಸ್ಟಾಗ್ರಾಂ ರೀಲ್ಸ್​ ಮಾಡಿ ಇನ್ನೂ ಚಾಲ್ತಿಯಲ್ಲಿದ್ದಾರೆ. ಹೀಗಿರುವಾಗ ಯಾವುದೇ ಕೆಲಸ ಮಾಡದೇ ಸದಾ ವಿಡಿಯೋ ಮಾಡುತ್ತಲೇ ಇರುವ ಇವರಿಗೆ ಹೇಗೆ ಇಷ್ಟೊಂದು ಹಣ ಸಿಗುತ್ತೆ? ಇವರ ತಿಂಗಳ ಗಳಿಕೆಯೆಷ್ಟು? ಎಂಬುದಂರ ಬಗ್ಗೆ ಪ್ರಶ್ನೆ ಮೂಡುತ್ತೆ. 

ಬೇರೆಯವರ ಹಾಡುಗಳಿಗೆ, ಡೈಲಾಗ್​ಗಳಿಗೆ ಲಿಪ್ ಸಿಂಕ್ ಮಾಡಿಬಿಟ್ಟರೆ , ತಾವೂ ಕೂಡ ಸೂಪರ್​ ಸ್ಟಾರ್​ ಎಂದು ಅಂದುಕೊಂಡು ಬಿಡುತ್ತಾರೆ. ಆದರೆ, ಇದು ನಿಜವಾದ ಟ್ಯಾಲೆಂಟ್​ ಅಲ್ಲ. ಯಾರೋ ಬರೆದಿರುವ ಹಾಡಿಗೆ, ಯಾರೋ ಬಾರಿಸಿರುವ ಮ್ಯೂಸಿಕ್​ಗೆ, ಇವರು ಕುಣಿದು ಹೆಸರು ಮಾಡಿದ್ದಾರೆ. ಅದರಲ್ಲಿ ಸೋನು ಶ್ರೀನಿವಾಸ್​ ಗೌಡ ಒಬ್ಬರು.

ಈ ಸೋನು ಶ್ರೀನಿವಾಸ್​ ಗೌಡ ವಿಡಿಯೋಗಳಿಗಿಂತ ಹೆಚ್ಚಾಗಿ ಟ್ರೋಲ್​ ಆಗಿಯೇ ಫೇಮಸ್​ ಆದವರು. ಟ್ರೋಲ್​ ಪೇಜ್​ಗಳಿಂದಲೇ ಈಕೆಗೆ ಇಷ್ಟು ಹೆಸರು ಬಂದಿದ್ದು. ಚೈಲ್ಡೀಸ್​ ಮಾತುಗಳಿಂದ, ಇನ್ನೂ ಅನೇಕ ವಿಚಾರಕ್ಕೆ  ಸಿಕ್ಕಾಪಟ್ಟೆ ಟ್ರೋಲ್​ ಆದವರು ಸೋನು ಶ್ರೀನಿವಾಸ್​ ಗೌಡ.ಈಗ ಸೋಷಿಯಲ್​ ಮೀಡಿಯಾ ಸ್ಟಾರ್​ ಪಟ್ಟ ಪಡೆದುಕೊಂಡಿದ್ದಾರೆ.

ಅನೇಕ ಆಲ್ಬಂ ಸಾಂಗ್​, ಜಾಹೀರಾತುಗಳಲ್ಲಿ ಸೋನು ಶ್ರೀನಿವಾಸ ಗೌಡ ಕಾಣಿಸಿಕೊಂಡಿದ್ದಾರೆ. ಕೆಲ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲೂ ನಟಿಸುವ ಚಾನ್ಸ್​ ಪಡೆದುಕೊಂಡಿದ್ದಾರೆ. ಕೆಲ ಬ್ರ್ಯಾಂಡ್​ಗಳ ಪ್ರ,ಮೋಷನ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಇವರು ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾರೆ ಎಂದು ಎಲ್ಲರಿಗೂ ಒಂದು ಕುತೂಹಲ ಇರುತ್ತೆ.

ತಿಂಗಳಿಗೆ ಒಂದರಿಂದ ಎರಡು ಲಕ್ಷ ವಿಡಿಯೋಗಳಿಂದ ಸೋನು ಶ್ರೀನಿವಾಸ ಗೌಡ ಗಳಿಸುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಕೆಲ ಜಾಹೀರಾತುಗಳು, ಪ್ರಮೋಷನ್ ವಿಡಿಯೋ ಮಾಡಿ ಸಂಪಾದನೆ ಮಾಡುತ್ತಿದ್ದಾರೆ ಸೋನು ಶ್ರೀನಿವಾಸ್ ಗೌಡ.

You may also like...

Leave a Reply

Your email address will not be published. Required fields are marked *