• Uncategorised

ತರುಣ್ ಸುಧೀರ್ ಮದಿವೆಗೆ ಭೂಲೋಕದ ಅಪ್ಸರೆಯಂತೆ ಸೀರೆ ಉಟ್ಟು ಬಂದ ರಚಿತಾ ರಾಮ್

ಸೋನಲ್ ಮಾಂತೆರೋ ಹಾಗೂ ತರುಣ್ ಸುಧೀರ್ ಅವರ ಮದುವೆ ಹಿಂದೂ ಸಂಪ್ರದಾಯದಂತೆ ನಡೆದಿದೆ. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಿದ ವಿವಾಹ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆದರು. ನವಜೋಡಿಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರು ಬಂದು ಸೋನಲ್ ಮತ್ತು ತರುಣ್ಗೆ ಹಾರೈಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ತರುಣ್​ ಸುಧೀರ್​ ಅವರು ಯಶಸ್ವಿ ನಿರ್ದೇಶಕನಾಗಿದ್ದಾರೆ. ಕಾಟೇರ ಸಿನಿಮಾದ ಬಿಗ್​ ಸಕ್ಸಸ್​ ಬಳಿಕ ಅವರು ವೈವಾಹಿಕ ಜೀವನಕ್ಕೆ ಕಾಲಿಡುವ ಬಗ್ಗೆ ಆಲೋಚಿಸಿದರು. ನಿನ್ನೆ ನಟಿ ಸೋನಲ್​ ಜೊತೆ ತರುಣ್​ ಮದುವೆ ನೆರವೇರಿದೆ.ರಾಬರ್ಟ್​ ಚಿತ್ರದಲ್ಲಿ ತರುಣ್​ ಸುಧೀರ್​ ಜೊತೆ ಕೆಲಸ ಮಾಡಿದ ಸೋನಲ್​ ಅವರು ಈಗ ದಾಂಪತ್ಯ ಜೀವನ ಆರಂಭಿಸಿದ್ದಾರೆ.

ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್​, ನಟ ನೆನಪಿರಲಿ ಪ್ರೇಮ್​ ಸೇರಿದಂತೆ ಅನೇಕ ಕಲಾವಿದರು ಈ ಮದುವೆಗೆ ಸಾಕ್ಷಿಯಾದರು. ಚಿತ್ರರಂಗದ ಬಹುತೇಕ ಎಲ್ಲರ ಜೊತೆಗೂ ತರುಣ್​ ಸುಧೀರ್​ ಅವರು ಆತ್ಮೀಯತೆ ಹೊಂದಿದ್ದಾರೆ. ಇನ್ನು ಜಗ್ಗೇಶ್ ನಟ ಶಿವಣ್ಣ ಮೊದಲಾದವರು ಕೂಡಾ ಬಂದು ಹೈರಸಿದ್ದಾರೆ.

ಇನ್ನು ನಟಿ ರಚಿತಾ ರಾಮ್ ಮರ್ಸಡೀಸ್ ಬೆಂಜ್ GLS 350d ಗ್ರ್ಯಾಂಡ್ ಎಡಿಶನ್ ಕಾರು. ಈ ಕಾರಿನ ಬೆಲೆ 1.6 ಕೋಟಿ ರೂಪಾಯಿ. ರಚಿತಾ ತಮ್ಮ ನೆಚ್ಚಿನ ನೀಲಿ ಬಣ್ಣದ ಕಾರಿನಲ್ಲಿ ಮದುವೆಗೆ ಬಂದಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಚೇಡಿಸಿದ್ದಾರೆ.

You may also like...