• Uncategorised

ದಪ್ಪಗಿದ್ದೀನಿ ಎಂದು ಕಟ್ಟಡದಿಂದ ಜಿಗಿದು ಸಾ.ವನ್ನಪ್ಪಿದ ವಿದ್ಯಾಥಿ೯ನಿ, ಯುವ ಜನತೆಯ ಮನಸ್ಥಿತಿಗೆ ಬೇಸತ್ತ ಜನ

ಬಾಡಿ ಶೇಮಿಂಗ್ ಭಾರತದಲ್ಲಿ ಹೆಚ್ಚಾಗಿಯೇ ಇದೆ ಅದರ ಪರಿಣಾಮವಾಗಿ ಹಲವಾರು ಜನ ಖಿನ್ನತೆಗೆ ಒಳಗಾದವರಿದ್ದಾರೆ ಹೌದೂ ಈದೀಗ ಮೆಡಿಕಲ್ ಓದುತ್ತಿದ್ದ ಹುಡುಗಿಯೊಬ್ಬಳ ಸರದಿ.ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಎಜೆ ಹಾಸ್ಟೆಲ್ ಕಟ್ಟಡದ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಜೆ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ. ತಡರಾತ್ರಿ 3 ಗಂಟೆಗೆ ಮೊದಲ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದ ಪ್ರಕೃತಿ ಶೆಟ್ಟಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ .ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ದಪ್ಪಗಿದ್ದೇನೆ ಎಂದು ವಿದ್ಯಾರ್ಥಿನಿ ಮಾನಸಿಕ ಖಿನ್ನತೆಯಲ್ಲಿದ್ದಳು. ಇದೇ ಚಿಂತೆಯಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಇವರ ಕುಟುಂಬ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೆಲೆಸಿದ್ದು ಪ್ರಕೃತಿ ಶೆಟ್ಟಿ ಹಾಸ್ಟೆಲ್​​​ನಲ್ಲಿ ವಾಸಿವಿದ್ದು ಓದುತ್ತಿದ್ದರು. ತಂದೆ ಪ್ರಶಾಂತ ಶೆಟ್ಟಿ ಮತ್ತು ತಾಯಿ ಅಥಣಿಯಲ್ಲಿ ನೆಲೆಸಿದ್ದಾರೆ. ತಾಯಿ ಕಾರ್ಕಳ ಮೂಲದವರಾಗಿದ್ದು ಡಾಕ್ಟರ್ ಕಲಿಯಬೇಕೆಂಬ ಕನಸಿನಲ್ಲಿ ಪುತ್ರಿಯನ್ನು ಪ್ರತಿಷ್ಠಿತ ಎಜೆ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.

ಹಲವು ಪುಟಗಳ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸೌಂದರ್ಯಕ್ಕೆ ದಪ್ಪ ಅನ್ಮೊದು ಅಡ್ಡಿಯಾಗಿದೆ. ತೂಕ ಇಳಿಸಲು ಸಾಕಷ್ಟು ಪ್ರಯತ್ನ ಪಟ್ಟರು ಆಗಲಿಲ್ಲ. ಇದ್ರಿಂದ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ‌ ಎಂದು ಬರೆದ ಡೆತ್ ನೋಟ್ ಸಿಕ್ಕಿದೆ ಎಂಬ ಮಾಹಿತಿಯಿದೆ. ಘಟನೆ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿಗೆ ತನಿಖೆ ನಡೆಸುತ್ತಿದ್ದಾರೆ.

You may also like...