ದರ್ಶನ್ ಬಿಡುಗಡೆ ಸುದ್ದಿ ತಿಳಿದು ಭರ್ಜರಿ ಡ್ಯಾನ್ಸ್ ಮಾಡಿದ ವೈಷ್ಣವಿ ಗೌಡ ಹಾಗೂ ಸ್ನೇಹಿತರು
ಸೀರಿಯಲ್ ಪ್ರೀಯರ ಸ್ಟಾರ್ಗಳು ವಿಭಿನ್ನವಾಗಿ ತೆರೆಯಮೇಲೆ ಕಾಣಿಸಿಕೊಂಡಿದ್ದಾರೆ.ಝೀ ಕನ್ನಡ ಸೀರಿಯಲ್ ಸೀತಾರಾಮ ಫೇಮ್ ನ ಸೀತಾ ಹಾಗೂ ರಾಮನ ಸ್ಟೈಲ್ ಬದಲಾಗಿದೆ. ಸೀರೆಯುಡುತ್ತಿದ್ದ ನಟಿ ವೈಷ್ಣವಿ ಸ್ಕೂಲ್ ಯೂನಿಫಾರ್ಮ್ ಹಾಕಿದ್ದಾರೆ. ಬರೀ ವೈಶೂ ಮಾತ್ರವಲ್ಲ ರಾಮ್ ಕೂಡ ಸ್ಕೂಲಿಗೆ ಹೋಗೋ ಹುಡುಗನ ರೀತಿ ಯೂನಿಫಾರ್ಮ್ ಧರಿಸಿ, ಸಖತ್ ಡಾನ್ಸ್ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಟ ದರ್ಶನ್ ಜೈಲಿಗೆ ಹೋದ್ಮೇಲೆ ಅವರ ಹಾಡಿಗೆ ಸ್ಟೆಪ್ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಈ ಲೀಸ್ಟ್ ನಲ್ಲಿ ವೈಷ್ಣವಿ ಕೂಡ ಸೇರಿದ್ದಾರೆ. ವೈಷ್ಣವಿ ಹಾಗೂ ನಟ ಗಗನ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಾಂಗ್, ಸಖತ್ತಾಗವ್ಳೆ, ಸುಮ್ನೆ ನಗ್ತಾಳೆ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.ವೈಷ್ಣವಿ ಹಾಗೂ ಗಗನ್ ಜೊತೆ ವಿಶ್ವ ಮತ್ತು ಸಾಧನಾ ಕೂಡ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಪೋಸ್ಟ್ ಮಾಡಿರುವ ವೈಷ್ಣವಿ ಇದು ಫನ್ ಅಂತ ಶೀರ್ಷಿಕೆ ಹಾಕಿದ್ದಾರೆ.
ಇನ್ನು ವೈಷ್ಣವಿ ಹಾಗೂ ಸಾಧನಾ, ಬಿಳಿ ಶರ್ಟ್, ನೀಲಿ ಸ್ಕರ್ಟ್ ಧರಿಸಿ, ಟೈ ಹಾಕಿದ್ದಾರೆ. ಎರಡು ಜಡೆ ಹಾಕಿಕೊಂಡು, ಸ್ಕೂಲಿಗೆ ಹೋಗುವ ಹುಡುಗಿಯರಂತೆ ಮಿಂಚುತ್ತಿದ್ದಾರೆ. ಇನ್ನು ಗಗನ್ ಹಾಗೂ ವಿಶ್ವ ಕಡಿಮೆ ಏನಿಲ್ಲ. ಚಡ್ಡಿ, ಶರ್ಟ್ ಮೇಲೆ ಟೈ ಧರಿಸಿ, ಸಖತ್ ಆಗಿ ಕುಣಿದಿದ್ದಾರೆ. ಇವರ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಫ್ಯಾನ್ಸ್, ಸೀತಾರಾಮನ ಡಾನ್ಸ್ ಇಷ್ಟಪಟ್ಟಿದ್ದಾರೆ. ದರ್ಶನ್ ಹಾಡು, ಸೂಪರ್ ಹಿಟ್ ಸಾಂಗ್ ಅಂತ ಅನೇಕರು ದರ್ಶನ್ ನೆನಪು ಮಾಡಿಕೊಂಡಿದ್ದಾರೆ. ಬೇಗ ಮದುವೆ ಆಗಿ ಅಂತ ವೈಷ್ಣವಿಗೆ ಅನೇಕರು ಸಲಹೆ ಕೂಡ ನೀಡಿದ್ದಾರೆ. ಈ ರೀಲ್ಸ್ ನೋಡಿದ್ರೆ ಸಿಹಿ ಅಳ್ತಾಳೆ ಎನ್ನುತ್ತಿದ್ದಾರೆ ನೆಟ್ಟಿಗರು.
ವೈಷ್ಣವಿ, ಯೂನಿಫಾರ್ಮ್ ಧರಿಸಿ ಕೆಲ ದಿನಗಳ ಹಿಂದೆ ಫೋಟೋ ಹಂಚಿಕೊಂಡಿದ್ದರು. ಇದನ್ನು ನೋಡಿದ ಫ್ಯಾನ್ಸ್, 10ನೇ ಕ್ಲಾಸ್ ಹುಡುಗಿ ತರ ಕಾಣ್ತೀರಾ ಅಂತ ಕಮೆಂಟ್ ಮಾಡಿದ್ದರು. ಚೆಲುವಿನ ಚಿತ್ತಾರ 2 ಗೆ ಹೀರೋಯಿನ್, ಬೆಸ್ಟ್ ಫ್ರೆಂಡ್ ಅಮೂಲ್ಯ ಜಾಗಕ್ಕೆ ವೈಷ್ಣವಿ ಎಂದು ಫ್ಯಾನ್ಸ್ ಹೇಳಿದ್ದರು.ಸೀತಾರಾಮ ಸೀರಿಯಲ್ ತಂಡ ಸಾಕಷ್ಟು ವಿಡಿಯೋಗಳನ್ನು ಮಾಡ್ತಿರುತ್ತದೆ. ಬ್ಯುಸಿ ಶೆಡ್ಯೂಲ್ ನಲ್ಲೂ ಬಿಡುವು ಮಾಡ್ಕೊಂಡು ಸೀರಿಯಲ್ ಕಲಾವಿದರು ಭಿನ್ನವಾದ ರೀಲ್ಸ್ ಪೋಸ್ಟ್ ಮಾಡ್ತಿರುತ್ತಾರೆ. ಅವರ ರೀಲ್ಸ್ ನೋಡೋಕೆ ಅಭಿಮಾನಿಗಳು ಉತ್ಸುಕರಾಗಿರ್ತಾರೆ.