• Uncategorised
  • 0

ದೊಡ್ಮನೆಯಿಂದ ಮನೆಯಿಂದ ಹೊರಬಂದ‌‌ ಹಂಸಗೆ ಕೈತುಂಬಾ‌ ದುಡ್ಡು ಕೊಟ್ಟ ಬಿಗ್ ಬಾಸ್;

ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಎರಡನೇ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ. ನಾಲ್ಕನೇ ವಾರ ಜರ್ನಿ ಕೊನೆಗೊಳಿಸಿ ಹಂಸ ಪ್ರತಾಪ್‌ ಹೊರಬಂದಿದ್ದಾರೆ. ಹೋದಷ್ಟೇ ವೇಗವಾಗಿ ಮನೆಯಿಂದ ಆಚೆ ಬಂದಿರುವ ಶ್ರೀನಿಧಿ ಅವರಿಗಿಂತ ಹಂಸಾ ಹೆಚ್ಚಾಗಿ ಆಟ ಆಡಿದ್ದಾರೆ.

ಇನ್ನು ಮಾತೃ ವಿಯೋಗದ ನೋವಿನಲ್ಲಿರುವ ಕಿಚ್ಚ ಸುದೀಪ್‌ ಅವರು ಈ ವಾರ ಬಿಗ್‌ ಬಾಸ್‌ ವಾರದ ಪಂಚಾಯ್ತಿಗೆ ಭಾಗವಹಿಸಿರಲಿಲ್ಲ. ಈ ಕಾರಣದಿಂದ ಶನಿವಾರದಂದು ಸಿನಿಮಾ ನಿರ್ದೇಶಕ ಯೋಗರಾಜ್‌ ಭಟ್‌ರವರು ಆಗಮಿಸಿ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದ್ದರು.ಭಾನುವಾರದಂದು ನಟ ಸೃಜನ್‌ ಲೋಕೇಶ್‌ ಅವರು ಬಿಗ್‌ ಬಾಸ್‌ ಮನೆಗೆ ಆಗಮಿಸಿ ಎಲಿಮಿನೇಷನ್‌ ಪ್ರಕ್ರಿಯೆ ನಡೆಸಿಕೊಟ್ಟರು.

ಈ ವಾರ ಕ್ಯಾಪ್ಟನ್ಸ್‌ಗಳಿಂದ ನೇರವಾಗಿ ನಾಮಿನೇಟ್‌ ಆಗಿರುವ ಉಗ್ರಂ ಮಂಜು ಮತ್ತು ಮಾನಸ ಸೇರಿದಂತೆ, ಗೋಲ್ಡ್‌ ಸುರೇಶ್‌, ಚೈತ್ರಾ, ಮೋಕ್ಷಿತಾ, ಹಂಸಾ, ಗೌತಮಿ, ಶಿಶಿರ್ ಮತ್ತು ಭವ್ಯಾ ಅವರು ದೊಡ್ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದಾರೆ.ಬಿಗ್‌ ಬಾಸ್‌ ಆರಂಭವಾಗಿ ನಾಲ್ಕು ವಾರಗಳಾಗಿವೆ. ಈ ನಾಲ್ಕು ವಾರಗಳಲ್ಲಿ ನಿಯಮಾನುಸಾರ ಎಲಿಮಿನೇಷನ್‌ ನಡೆದಿದ್ದು ಕೇವಲ ಒಂದು ಬಾರಿ ಮಾತ್ರ. 

ಅದು ಮೊದಲ ಎಲಿಮಿನೇಷನ್‌ ಆಗಿದ್ದು, ಯಮುನಾ ಶ್ರೀನಿಧಿ ಅವರು ಹೊರಹೋಗಿದ್ದರು.ಆ ನಂತರದ ವಾರದಲ್ಲಿ ನೋ ಎಲಿಮಿನೇಷನ್‌ ರೌಂಡ್‌ ಇದ್ದು, ಎಲ್ಲರೂ ಸೇಫ್‌ ಆಗಿದ್ದರು. ಅದಾದ ನಂತರ ಅಂದರೆ ಮೂರನೇ ವಾರದಂದು ದೊಡ್ಮನೆಯಲ್ಲಿ ಕಲಹದ ವಾತಾವರಣ ಕಂಡುಬಂದು, ಸ್ಪರ್ಧಿಗಳು ಕೈಕೈ ಮಿಲಾಯಿಸಿಕೊಂಡಿದ್ದರು. ಇದನ್ನು ಅಪರಾಧವಾಗಿ ಪರಿಗಣಿಸಿದ್ದ ಬಿಗ್‌ ಬಾಸ್‌ ಜಗದೀಶ್‌ ಮತ್ತು ರಂಜಿತ್‌ ಅವರನ್ನು ಹೊರಕಳುಹಿಸಿದ್ದರು.

ಈ ಘಟನೆಗಳೆಲ್ಲಾ ನಡೆದ ನಂತರ ಮೊದಲ ಬಾರಿಗೆ ಎಲಿಮಿನೇಷನ್‌ ನಡೆದಿದೆ. ಈ ವಾರ ಹಂಸ, ಮೋಕ್ಷಿತಾ ಅಥವಾ ಮಾನಸಾ ಹೊರಹೋಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಿವಾಗಿತ್ತು. ಕೊನೆಗೂ ನಾಮಿನೇಷನ್‌ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಹಂಸ ಪ್ರತಾಪ್‌ ಅವರು ಹೊರಬಿದ್ದಿದ್ದಾರೆ.ಅಂದಹಾಗೆ ಈ ಸ್ಪರ್ಧಿ ಬಿಗ್‌ ಬಾಸ್‌ನಿಂದ ವಾರಕ್ಕೆ 50,000 ರೂ. ಸಂಭಾವನೆ ಪಡೆಯುತ್ತಿದ್ದರು ಎಂಬ ಮಾಹಿತಿ ಲಭಿಸಿದೆ. 50 ಸಾವಿರವನ್ನು 4 ವಾರಕ್ಕೆ ಎಷ್ಟೆಂದು ಲೆಕ್ಕಹಾಕಿದರೆ, 2 ಲಕ್ಷ ರೂ ಬರುತ್ತದೆ. ಇಷ್ಟು ಮೊತ್ತದ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. 

You may also like...

Leave a Reply

Your email address will not be published. Required fields are marked *