ನೆಚ್ಚಿನ ಜಯ ಇ.ಹಲೋಕ, ಕಣ್ಣೀರಿನಲ್ಲಿ ಮುಳುಗಿದ ಕುಟುಂಬಸ್ಥರು

ನೃತ್ಯಗಾರ್ತಿಯಾಗಿ ಜೀವನ ಆರಂಭಿಸಿದ ನಟಿ ನಿರ್ದೇಶಕಿ ಹಾಗೂ ನಿರ್ಮಾಪಕಿಯೂ ಆಗಿದ್ದ ಜಯಾ ಇನ್ನಿಲ್ಲವಾಗಿದ್ದಾರೆ. ಹೌದು ಖ್ಯಾತ ನಟ ರಾಜಿನಿಕಾಂತ್ ಜೊತೆ ನಟಿಸಿದ್ದ ಈ ನಟಿಯನ್ನು ಕಾಲಿವುಡ್ ಜನ ಎಂದೆಂದಿಗೂ ಮರೆಯಲಾರರು ಇಡಿಯ ಮಲರ್, ಸೈ0ದದಮ್ಮ ಸೈ0ದಾಡು, ವಾಲಾ ನೈನಿತಾಲ್ ವಾಲಾಂ, ಸರಿ ಸಮಾನ ಜೋಡಿ.
ಹಾಗೂ ಗಾಯತ್ರಿ ಚಿತ್ರಗಳಲ್ಲಿ ಅಭಿನಯಿಸಿ ಜನರ ಮನಗೆದ್ದಿದ್ದ ನಟಿ ಇದೀಗ ಇನ್ನಿಲ್ಲವಾಗಿದ್ದಾರೆ. ಕೇವಲ ನೃತ್ಯಗಾರ್ತಿ ನಟಿ ಮಾತ್ರವಲ್ಲದೆ ಇವರು ನಿರ್ಮಾಪಕಿಯಾಗಿ ಕೂಡ ಕೆಲ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ. ಅವುಗಳಲ್ಲಿ ಕೆಲವು ಮಾತೃವೈ ನೆರಿಲ್,ವಾ ಇಂಡ ಪಕ್ಕಾಂ,ನಂದ್ರಿ ಮೀ0ಡುಮ್ ವರುಗೈ ಮೊದಲಾದ ಚಿತ್ರಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಪಿ ಸಿ ಶ್ರೀರಾಮ್ ಅವರನ್ನು ಛಾಯಾಗ್ರಾಹಕರಾಗಿ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇವರು ವೇಲು ಪ್ರಭಾಕರನ್ ಅವರನ್ನು ವಿವಾಹವಾಗಿ ಕೆಲ ವರ್ಷಗಳ ಕಾಲ ಸಂಸಾರ ನೆಡೆಸಿ ನಂತರದಲ್ಲಿ ವಿಚ್ಛೇದನ ಪಡೆದಿದ್ದರು. ಇನ್ನು ಕೆಲವು ತಿಂಗಳುಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇನ್ನು ಅವರ ಸಾವಿಗೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.