ನೆಚ್ಚಿನ ಬಿಗ್ ಬಾಸ್ ಸ್ಪರ್ಧಿ ಅ.ರೆಸ್ಟ್, ಯಾಕೆ ಏನಾಯಿತು ಗೊತ್ತಾ

ಬೆಂಗಳೂರಲ್ಲಿ ಹುಲಿ ಉಗುರು ಸದ್ದು ಮಾಡ್ತಿದ್ದರೆ ದೆಹಲಿಯಲ್ಲಿ ಹಾವಿನ ವಿಷ ಕಿಕ್ಕೆರಿಸುತ್ತಿದೆ.‌ ಹೌದು ರೇವ್ ಪಾರ್ಟಿಗಳಿಗೆ ಹಾವು ಹಾಗೂ ಹಾವಿನ ವಿಷವನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ ಹಿಂದಿ ಬಿಗ್ಬಾಸ್ ವಿಜೇತ ಇಲ್ವೀಸ್ ಯಾದವ್ ಸೇರಿದಂತೆ ಆರು ಮಂದಿಯ ಬಂಧನವಾಗಿದೆ.

ಇತ್ತೀಚೆಗೆ, ಎಲ್ವಿಶ್ ಯಾದವ್ ರೇವ್ ಪಾರ್ಟಿಗಳನ್ನು ಆಯೋಜಿಸಿದ್ದ ಎಂದು ಹೇಳಲಾಗಿದೆ, ಅಲ್ಲಿ ವಿದೇಶಿ ಮಹಿಳೆಯರನ್ನು ಆಹ್ವಾನಿಸಲಾಗಿತ್ತು. ಅಲ್ಲದೆ, ಪಾರ್ಟಿಯಲ್ಲಿ ಹಾವಿನ ವಿಷ ಮತ್ತು ಡ್ರಗ್ಸ್ ಬಳಸಲಾಗುತ್ತಿತ್ತು ಎಂದು ವರದಿಯಾಗಿದೆ. ಬಂಧಿತರ ವಿಚಾರಣೆ ವೇಳೆ ಒಂಬತ್ತು ನಿಷೇಧಿತ ವಿಷಕಾರಿ ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ವರದಿ ಪ್ರಕಾರ, 20 ಮಿಲಿಲೀಟರ್ ಹಾವಿನ ವಿಷ, 9 ವಿಷಕಾರಿ ಹಾವುಗಳು 5 ನಾಗರಹಾವು, 1 ಬೆಟ್ಟದ ಹಾವು, 1 ಎರಡು ತಲೆ ಹಾವು, 1 ಇಲಿ ಹಾವು ಪತ್ತೆಯಾಗಿದ್ದು ವಶಪಡಿಸಿಕೊಳ್ಳಲಾಗಿದೆ. ಪಾರ್ಟಿಯಲ್ಲಿ ಹಾವು ಮತ್ತು ಹಾವಿನ ವಿಷವನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ವಿಶ್ ಯಾದವ್ ಆಯೋಜಿಸುತ್ತಿದ್ದ ಈ ಪಾರ್ಟಿಯಲ್ಲಿ ಹೆಚ್ಚಾಗಿ ವಿದೇಶಿ ಪ್ರಜೆಗಳು ಭಾಗವಹಿಸುತ್ತಿದ್ದು, ಕಿಕ್ಕೇರಿಸಿಕೊಳ್ಳಲು ಅವರು ಹಾವಿನ ವಿಷವನ್ನು ಸೇವಿಸುತ್ತಿದ್ದರೂ ಎಂದು ಪೊಲೀಸರು ಹೇಳಿದ್ದಾರೆ.

ನೋಯ್ಡಾದ ಸೆಕ್ಟರ್ 49ರ ರಲ್ಲಿ ಮಧ್ಯರಾತ್ರಿ ನಡೆಯುತ್ತಿದ್ದ ಈ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಣಿಗಳ ಕಲ್ಯಾಣಕ್ಕೆ ಸಂಬಂಧಿಸಿದ ಎನ್ಜಿಒ ಒಂದು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ. ಹಾವಿನ ವಿಷಕ್ಕಾಗಿ ಈ ಖದೀಮರು ಬೇರೆ ಬೇರೆ ಪ್ರದೇಶಗಳಿಂದ ಹಾವನ್ನು ಹಿಡಿದು ತರುತ್ತಿದ್ದರು. 

ಬಳಿಕ ಈ ಹಾವಿನ ವಿಷವನ್ನು ತೆಗೆದು ಎಲ್ವಿಶ್ ಯಾದವ್ ಭಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಭಾರಿ ಮೊತ್ತದ ಹಣದ ಆಸೆಯ ಹಿನ್ನೆಲೆಯಲ್ಲಿ ಆರೋಪಿಗಳು ಈ ಹಾವಿನ ವಿಷ ಪೂರೈಕೆಯ ಕೆಲಸವನ್ನು ಮಾಡುತ್ತಿದ್ದರು ಎಂದು ಆರೋಪಿಗಳು ಪೊಲೀಸರ ಮುಂದೆ ಬಾಯ್ ಬಿಟ್ಟಿದ್ದಾರೆ. ಹಿಂದಿ ಬಿಗ್ಬಾಸ್ ಒಟಿಟಿ ಸೀಸನ್ 2ರಲ್ಲಿ ವಿನ್ ಆದ ಬಳಿಕ ಎಲ್ವಿಶ್ ಯಾದವ್ ಮುನ್ನಲೆಗೆ ಬಂದಿದ್ದರು.

https://youtu.be/fmzGLdyg4Zs?si=vywiLS9qaYUJ_GZ9

You may also like...