ಪುಣ್ಯವತಿ ಸೀರಿಯಲ್ ಕಲಾವಿದರ ನಿಜಜೀವನದಲ್ಲಿ ಮದುವೆ ಫಿಕ್ಸ್;
ಪುಣ್ಯವತಿ ಸೀರಿಯಲ್ ನಲ್ಲಿ ಮುಗ್ಧೆ ಪದ್ಮಿನಿಯಾಗಿ ನಟಿಸಿದ್ದ ನಟಿ ಪ್ರಿಯಾಂಕ ಸೀರಿಯಲ್ ಮುಗಿದ ಸ್ವಲ್ಪ ಸಮಯದಲ್ಲೇ ಆಸೆ ಸೀರಿಯಲ್ ನಲ್ಲಿ ಲೀಡ್ ರೋಲ್ ನಲ್ಲಿ ನಟಿಸಲಾರಂಬಿಸಿದ್ದಾರೆ. ಇನ್ನು ಮೀನಾ ಆಗಿ ನಟಿಸುತ್ತಿರುವ ಪ್ರಿಯಾಂಕಾ ಅವರಿಗೆ ನಟನೆಯ ಗೀಳು ಅಂಟಿಕೊಂಟಿದ್ದು ಥಿಯೇಟರ್ ಕ್ಲಬ್ ಮೂಲಕ. ವಿಜಯನಗರ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಓದುತ್ತಿದ್ದ ಈ ನಟಿ ಥಿಯೇಟರ್ ಕ್ಲಬ್ ಸೇರಿಕೊಂಡರು. ಬೇಲೂರು ರಘುನಂದನ್ ಅವರ ರಂಗಚಿರಂತನ ಕ್ಲಬ್ ಸೇರಿದ ಪ್ರಿಯಾಂಕಾ ಆ ರಂಗ ಚಟುವಟಿಕೆಗಳಿಂದ ಪ್ರೇರಣೆ ಪಡೆದುಕೊಂಡರು.
ನಾನು ನಟಿಯಾಗಲು ರಂಗಚಿರಂತನ ಥಿಯೇಟರ್ ಕ್ಲಬ್ ಕಾರಣ. ಅಲ್ಲಿಗೆ ಸೇರಿದ ನಾನು ನಟನೆಯ ರೀತಿ ನೀತಿ ತಿಳಿದುಕೊಂಡೆ ಎಂದು ಹೇಳುತ್ತಾರೆ ಪ್ರಿಯಾಂಕಾ.ನಾನು ಸೈನ್ಸ್ ವಿದ್ಯಾರ್ಥಿನಿಯಾಗಿದ್ದರಿಂದಲೇ ಪ್ರತಿದಿನವೂ ರಂಗಚಟುವಟಿಕೆ ತರಗತಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಒಟ್ಟಾರೆಯಾಗಿ ಎರಡರಿಂದ ಮೂರು ತಿಂಗಳುಗಳ ಕಾಲ ನಾನು ಈ ತರಗತಿಗೆ ಹೋಗಿದ್ದೆ. ನಂತರ ಹೋಗ್ಲಿಕ್ಕೆ ಆಗ್ಲಿಲ್ಲ. ಆದ್ರೆ ಈಗ ನಾನು ಕ್ಲಾಸ್ ಮಿಸ್ ಮಾಡ್ಕೊಂಡೆ ಅಂತ ಅನ್ನಿಸ್ತಿದೆ. ಇನ್ನು ಹೆಚ್ಚಿನ ತರಗತಿಗೆ ಹೋಗ್ಬೇಕಿತ್ತು ಅಂತ ಈಗ ನನಗೆ ಫೀಲ್ ಆಗ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಆ ಸಮಯದಲ್ಲಿ ಕಲರ್ಸ್ ಕನ್ನಡ ವಾಹಿನಿಯಿಂದ ಕಾಲ್ ಬಂದಿತ್ತು. ಆಡಿಶನ್ ಇದೆ, ಸ್ವಲ್ಪ ಅರ್ಜೆಂಟ್ ಇದೆ, ಈಗಲೇ ಭಾಗವಹಿಸಿ ಎಂದು ಕಾಲ್‌ನಲ್ಲಿ ಹೇಳಿದ್ದರು. ಶಾಕ್ ಆಯಿತು ನನಗೆ. ನಿಜಾನಾ, ಸುಳ್ಳಾ ಎಂದು ನಂಬಲಾಗಲಿಲ್ಲ. ಕನ್‌ಫ್ಯೂಸ್‌ನಲ್ಲಿದ್ದೆ. ಸರಿ, ಹೋಗೋಣ, ಟ್ರೈ ಮಾಡೋಣ ಅಂತ ಹೋದೆ. ಅವರು ಲಂಗ ದಾವಣಿ ಹಾಕ್ಕೊಂಡು ಬನ್ನಿ ಅಂತ ಹೇಳಿದ್ರು. ಹಾಗೇ ಹೋಗಿದ್ದೆ.
ಮತ್ತೆ ಆಡಿಶನ್‌ನಲ್ಲಿ ಅವ್ರು ಕೊಟ್ಟ ಕ್ಯಾಸ್ಟ್ಯೂಮ್ ಹಾಕೊಂಡೆ ಎಂದು ಹೇಳುತ್ತಾರೆ ಪ್ರಿಯಾಂಕಾ.ಇನ್ನು ಮೊದಲ ಧಾರವಾಹಿ ಹೀರೊ ಜೊತೆಗೆ ಮದುವೆ ಆಗಿಬಿಡು ಎಂದು ಮನೆಯಲ್ಲೆಲ್ಲಾ ಕಾಡಿಸುತ್ತಾರೆ ಎಕೆಂದರೆ ನಮ್ಮಿಬ್ಬರ ಜೋಡಿ ಎಲ್ಲರಿಗೂ ಇಷ್ಟವಾಗಿತ್ತು. ಆದರೆ ನಾನು ಅವರಿಗೆ ಈಗಾಗಲೇ ಹೇಳಿದ್ದೇನೆ ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ ಎಂದು ಮುಗುಳುನಗೆ ಬೀರಿದ್ದಾರೆ.