ಬಳ್ಳಾರಿ ಜೈಲಿನಲ್ಲಿ ರೇಣುಕಾಸ್ವಾಮಿ ದೆ ವ್ವ; ‘ನಾನು ಇಲ್ಲಿ ಇರಲ್ಲ ಎಂದ ದಾಸ’
ದರ್ಶನ್ ತೂಗುದೀಪ್ ಸೇರಿದಂತೆ ಅವರ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬಾತ ಸಾಯುವ ರೀತಿ ಹೊಡೆದು, ರೇಣುಕಾಸ್ವಾಮಿ ಕೊಲೆ ಮಾಡಿ ಮೋರಿ ಅಂದ್ರೆ ಚರಂಡಿ ಬಳಿ ಎಸೆದು ಹೋದ ಆರೋಪ ಇತ್ತು. ಇದೇ ಆರೋಪದ ಕಾರಣಕ್ಕೆ ಇದೀಗ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಆಗಿದೆ.
ಹೀಗಿದ್ದಾಗ ರೇಣುಕಾಸ್ವಾಮಿ ಆತ್ಮದ ಕಾಟ ಜೋರಾಗಿದ್ದು, ಹಲ್ಲೆ ನಡೆಸಿದ್ದ ಪಟ್ಟಣಗೆರೆ ಶೆಡ್ ಹಾಗೂ ಹೆಣ ಎಸೆದ ಮೋರಿ ಪಕ್ಕದ ಜಾಗದಲ್ಲಿ ದೆವ್ವದ ಕಿರುಚಾಟ & ಅರಚಾಟ ಕೇಳಿಬರುತ್ತಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ತೀವ್ರ ರೀತಿ ಹಲ್ಲೆ ಮಾಡಿ, ಎತ್ತಿ ಎತ್ತಿ ಬಿಸಾಡಿ, ಮರ್ಮಾಂಗದ ಸಿಪ್ಪೆ ಸುಲಿದು, ಸಿಗರೇಟ್ & ಇತರ ವಸ್ತುಗಳ ಬಳಸಿ ಬರೆ ಹಾಕಿ, ತಲೆ ಮೇಲೆ ತೂತು ಮಾಡಿ, ಮರ್ಮಾಂಗಕ್ಕೆ ಜಾಡಿಸಿ ಒದ್ದು, ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದೆ ಎನ್ನುವ ಆರೋಪ ಇದೆ.
ಹೀಗಿದ್ದಾಗ ರೇಣುಕಾಸ್ವಾಮಿ ಆತ್ಮ ಇದೀಗ ಹೆಣ ಸಿಕ್ಕಿರುವ ಜಾಗದಲ್ಲಿ ಸುತ್ತಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಬಳ್ಳಾರಿ ಜೈಲಿನಲ್ಲಿರುವ ದರ್ಶನ ಅವರಿಗೆ ಕೂಡ ಮಧ್ಯರಾತ್ರಿ ಎಚ್ಚರವಾಗೋದು. ಯಾರೋ ಕರೆದಂತೆ ಕೇಳೋದು ಆಗ್ತಿದೆ ಅಂತೆ. ದರ್ಶನ್ ತೂಗುದೀಪ್ ನೆಮ್ಮದಿಯಾಗಿ ಇದ್ದ ಜೀವನ ಹಾಳು ಮಾಡಿಕೊಂಡು ಇದೀಗ ಜೈಲಿನ ನರಕಕ್ಕೆ ಬಿದ್ದಂತೆ ಆಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಕಂಬಿ ಎಣಿಸುತ್ತಿರುವ ಈ ನಟನಿಗೆ ಸಾಲು ಸಾಲು ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಒಂದೊಂದು ಸಿನಿಮಾಗೆ ಕೂಡ ಕೋಟಿ ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂಬ ಮಾತು ಕೂಡ ಇತ್ತು. ಇಂತಹ ಡಿ-ಬಾಸ್ ಈಗ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿದ್ದು, ದರ್ಶನ್ ಅವರ ಸಿನಿಮಾಗಳು ನಿಂತು ಹೋಗಲಿವೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಒಟ್ಟಿನಲ್ಲಿ ಮಾನಸಿಕವಾಗಿಯೂ ದಾಸ ಸೋತು ಹೋಗಿದ್ದಾರೆ ಎನ್ನಲಾಗ್ತಿದೆ.