ಬಿಗ್ ಬಾಸ್ ಬಗ್ಗೆ ಕೆಟ್ಟದಾಗಿ ವಿಡಿಯೋ ಮಾಡಿದರೆ ಎ ಚ್ಚರ ಎಂದ ಸುದೀಪ್
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲೆರಡು ಸ್ಪರ್ಧಿಗಳಾಗಿ ಬಿಗ್ ಬಾಸ್’ ಮನೆಯೊಳಗೆ ಬಲಗಾಲಿಟ್ಟು ಹೋದವರು ಗೀತಾ ನಾಯಕಿ ಭವ್ಯಾ ಗೌಡ ಹಾಗೂ ನಟಿ ಯಮುನಾ ಶ್ರೀನಿಧಿ. ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್’ ಮನೆಯೊಳಗೆ ಹೋದವರು ಪ್ರತಿಭಾವಂತ ಹಾಸ್ಯ ಕಲಾವಿದ ಧನರಾಜ್ ಆಚಾರ್. ಕರಾವಳಿಯ ಕಲಾವಿದ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರೋರಿಗೆ, ಯಾವಾಗಲೂ ರೀಲ್ಸ್ ನೋಡುವವರಿಗೆ.. ಅದರಲ್ಲೂ ಕಾಮಿಡಿ ರೀಲ್ಸ್‌ನ ಹೆಚ್ಚಾಗಿ ನೋಡುವವರಿಗೆ ಧನರಾಜ್ ಆಚಾರ್ ಪರಿಚಯ ಇದ್ದೇ ಇರುತ್ತೆ. ಪುತ್ತೂರು ಮೂಲದ ಧನರಾಜ್ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್. ಹಾಸ್ಯ ಪ್ರಜ್ಞೆ ಹೊಂದಿರುವ ಧನರಾಜ್ ಆಚಾರ್ ತಮ್ಮ ಕುಟುಂಬದ ಸದಸ್ಯರೊಟ್ಟಿಗೆ ಸೇರಿ ಒಂದಲ್ಲಾ ಒಂದು ಹಾಸ್ಯದ ವಿಡಿಯೋಗಳನ್ನ ಕ್ರಿಯೇಟ್ ಮಾಡಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇವರ ಎಷ್ಟೋ ಕಾಮಿಡಿ ವಿಡಿಯೋಗಳು ಲಕ್ಷಾಂತರಗಟ್ಟಲೆ ವ್ಯೂಸ್ ಗಿಟ್ಟಿಸಿವೆ.
ಅಂಥದ್ದೇ ಒಂದು ವಿಡಿಯೋದಲ್ಲಿ ಬಿಗ್ ಬಾಸ್ ಬಗ್ಗೆ ಧನರಾಜ್ ಆಚಾರ್ ಕಾಮಿಡಿ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಜಗಳವಾದರೆ ಟಿಆರ್‌ಪಿ ಹೆಚ್ಚು ಎಂಬ ಮಾತು ಅವರ ಬಾಯಿಂದಲೇ ಬಂದಿತ್ತು. ಅದೇ ವಿಡಿಯೋನ ಬಿಗ್ ಬಾಸ್ ಕನ್ನಡ 11ಪ್ರೀಮಿಯರ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಪ್ಲೇ ಮಾಡಿಸಿದರು. ವಿಡಿಯೋ ಕಂಡ ಕಿಚ್ಚ ಸುದೀಪ್ ಗರಂ ಆದಂತೆ ನಟಿಸಿದರು. ಶೋ ಬಗ್ಗೆ ಗೌರವ ಇಲ್ಲದಿರೋರನ್ನ ಯಾಕೆ ಕರೆಯಿಸ್ತೀರಾ? ಎಂದು ಆಯೋಜಕರನ್ನ ಪ್ರಶ್ನಿಸಿದ ಕಿಚ್ಚ ಸುದೀಪ್, ಈಗ ನೀವು ಒಳಗೆ ಜಗಳ ಮಾಡಿದರೆ ಏನು ಮಾಡೋದು? ಅಂತ ಧನರಾಜ್ ಆಚಾರ್‌ಗೆ ಪ್ರಶ್ನೆ ಮಾಡಿದರು.
ಸುದೀಪ್ ಕೊಟ್ಟ ಲುಕ್, ಆಡಿದ ಮಾತುಗಳನ್ನ ಕಂಡು ಧನರಾಜ್ ಆಚಾರ್ ಅಕ್ಷರಶಃ ನಡುಗಿಬಿಟ್ಟರು. ದಯವಿಟ್ಟು ಹಾಗೆ ನೋಡಬೇಡಿ. ನಾವು ಮಾಡಿದ್ದು ತಮಾಷೆಗಾಗಿ. ದಯವಿಟ್ಟು ಕ್ಷಮಿಸಿ ಅಂತ ಧನರಾಜ್ ಪರಿಪರಿಯಾಗಿ ಬೇಡಿದರು. ಕಿಚ್ಚ ಸುದೀಪ್ ಅವರ ಕೋಪ ಕಂಡು ಧನರಾಜ್ ಆಚಾರ್ ಪತ್ನಿ ಸಹ ಕಣ್ಣೀರು ಸುರಿಸಿದರು.ಕೊನೆಗೆ ನಮಗೆ ರೀಲ್ಸ್ ಮಾಡುವ ಅವಕಾಶ ಸಿಕ್ಕಲ್ಲ. ಅದಕ್ಕೆ ಈ ತರಹ ರೀಲ್ ಮಾಡಿದೆ. ಎಲ್ಲಾ ಟಿಆರ್‌ಪಿಗಾಗಿ ಎಂದು ಹೇಳಿ ನಕ್ಕುಬಿಟ್ಟರು ಕಿಚ್ಚ ಸುದೀಪ್. ಆಗ ಧನರಾಜ್ ಆಚಾರ್ ಮತ್ತು ಪತ್ನಿಗೆ ನಿರಾಳ ಆಯ್ತು.
ಸೋಷಿಯಲ್ ಮೀಡಿಯಾದ ಮೂಲಕವೇ ಫೇಮಸ್ ಆದ ಪ್ರತಿಭಾವಂತ ಹಾಸ್ಯ ಕಲಾವಿದ ಧನರಾಜ್ ಆಚಾರ್. ಆನಂತರ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಕರ್ನಾಟಕದಾದ್ಯಂತ ಮನೆ ಮಾತಾದರು. ಪ್ರಜ್ಞಾ ಆಚಾರ್ಯ ಎಂಬುವರನ್ನ ಇವರು ಮದುವೆಯಾಗಿದ್ದಾರೆ. ಇತ್ತೀಚೆಗಷ್ಟೇ.. ಅಂದ್ರೆ ಒಂದು ತಿಂಗಳ ಹಿಂದೆಯಷ್ಟೇ ಧನರಾಜ್ – ಪ್ರಜ್ಞಾ ದಂಪತಿ ಹೆಣ್ಣು ಮಗುವನ್ನ ಬರಮಾಡಿಕೊಂಡಿದ್ದಾರೆ.