ಭಾರತ ವಿಶ್ವ ಕಪ್ ಗೆದ್ದರೆ, ನಮ್ಮೆಲ್ಲರ ಜನಪ್ರಿಯ ನಟಿ ಬೆ.ತ್ತಲೆಯಾಗಲು ಸಿದ್ದ
ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಮೊದಲ ಸೆಮಿಫಿನಾಲೆಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಇತ್ತ ರೋಹಿತ್ ಶರ್ಮಾ ಪಡೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಫೈನಲ್ನಲ್ಲೂ ಗೆದ್ದು ಬೀಗಲಿ ಎಂದು ಹಲವರು ಆಶಿಸಿದ್ದಾರೆ.
ಇದೀಗ ತೆಲುಗಿನ ಖ್ಯಾತ ನಟಿಯೊಬ್ಬರು ಭಾರತ ವಿಶ್ವಕಪ್ ಗೆದ್ದರೆ ತಾವು ಬೆತ್ತಲಾಗಿ ವಿಶಾಖಪಟ್ಟಣದ ಬೀಚ್ನಲ್ಲಿ ಓಡಾಡುವುದಾಗಿ ಹೇಳಿದ್ದಾರೆ. ಈ ಮೊದಲು ಪೂನಂ ಪಾಂಡೆ ಸಹ ಈ ರೀತಿಯ ಹೇಳಿಕೆಯನ್ನು ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು ಇದೀಗ ಮತ್ತೊಬ್ಬ ನಟಿ ಸಾಮಾಜಿಕ ಜಾಲತಾಣದಲ್ಲಿ ಹೀಗೆಂದು ಪೋಸ್ಟ್ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ತೆಲುಗು ನಟಿ ರೇಖಾ ಬೋಜ್, ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆದರೆ ನಾನು ವಿಶಾಖಪಟ್ಟಣದ ಬೀಚ್ನಲ್ಲಿ ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿಯ ಪೋಸ್ಟ್ಗೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಹಲವರು ಪೋಸ್ಟ್ ಅನ್ನು ಖಂಡಿಸಿದ್ದಾರೆ.
ಇನ್ನು ಕೆಲವರು ಫೈನಲ್ ಪಂದ್ಯವನ್ನು ವೈಜಾಗ್ ಬೀಚ್ನಲ್ಲಿಯೇ ನಿಂತು ವೀಕ್ಷಿಸುತ್ತೇವೆ ಎಂದು ಟೀಕಿಸಿದ್ದಾರೆ.
ಮಾಂಗಲ್ಯಂ, ಸ್ವಾತಿ ಚಿನುಕು, ರಂಗೀಲಾ, ಕಾಲಾಯ ತಸ್ಮಾಯ ನಾಮಃ ಸೇರಿದಂತೆ ತೆಲುಗಿನ ಕೆಲ ಸಿನಿಮಾಗಳಲ್ಲಿ ನಟಿಸಿರುವ ರೇಖಾ ಬೋಜ್ ಸಾಮಾಜಿಕ ಜಾಲತಾಣಗಳಲ್ಲಿ ಆಗಿಂದಾಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.
ವಿಶ್ವಕಪ್ ಗೆದ್ದರೆ ಬೆತ್ತಲಾಗುತ್ತೇನೆ ಎಂದು ನಟಿಯರು ಹೇಳುವುದು ಇದು ಹೊಸತೇನೂ ಅಲ್ಲ. ಗ್ಲಾಮರಸ್ ಪಾತ್ರಗಳ ಮೂಲಕವೇ ಜನಪ್ರಿಯತೆ ಗಳಿಸಿರುವ ನಟಿ ಪೂನಂ ಪಾಂಡೆ ಮೊದಲ ಬಾರಿ ಹೀಗೊಂದು ಹೇಳಿಕೆ ನೀಡಿದ್ದರು. ಭಾರತ 2011ರ ವಿಶ್ವಕಪ್ ಆಡುವ ಸಮಯದಲ್ಲಿ, ಭಾರತ ವಿಶ್ವಕಪ್ ಗೆದ್ದರೆ ಬೆತ್ತಲಾಗುವೆ ಎಂದು ಹೇಳಿಕೆ ನೀಡಿದ್ದರು. ಪೂನಂರ ಈ ಹೇಳಿಗೆ ತೀವ್ರ ವಿರೋಧ ಆಗ ವ್ಯಕ್ತವಾಗಿತ್ತು ಇದೀಗ ರೇಖಾ ಬೋಜ್ ಸರದಿ.