ಮಂಗಳೂರಿನ ಯುವಕನಿಗೆ 40ಲಕ್ಷ ಪಂಗನಾಮ ಹಾಲಿದ ಪದ್ಮಜಾ ರಾಮ್
ಕನ್ನಡ ಚಿತ್ರರಂಗದ ನಟ-ನಟಿಯರ ಒಂದೊಂದೇ ವಿವಾದಗಳು ಬೆಳಕಿಗೆ ಬರುತ್ತಿದ್ದು, ನಟ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಜನಪ್ರಿಯ ನಟಿಯೊಬ್ಬರು ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಟಿ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ನಲವತ್ತು ಲಕ್ಷ ರೂಪಾಯಿ ದಂಡ ವಿಧಿಸಿ ಮಂಗಳೂರಿನ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ನಾಲ್ಕು ವರ್ಷಗಳ ಹಿಂದೆ ನಟಿ ಪದ್ಮಜಾ ರಾವ್ ಅವರ ಚೆಕ್ ಬೌನ್ಸ್ ಪ್ರಕರಣ ಭಾರೀ ಸುದ್ದಿಯಾಗಿತ್ತು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಸಿನಿಮಾ ಜೊತೆಗೆ ಸದ್ಯ ಕಿರುತೆರೆಯಲ್ಲೂ ಬಹುಬೇಡಿಕೆಯ ನಟಿಯಾಗಿರುವ ಪದ್ಮಜಾ ರಾವ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರ ಬಳಿಯಿಂದ ಪದ್ಮಜಾ ರಾವ್, 41ಲಕ್ಷ ರೂಪಾಯಿ ಹಣ ಪಡೆದು, ಆ ಬಳಿಕ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು 2021ರಲ್ಲಿ ಕೇಸ್ ದಾಖಲಾಗಿತ್ತು. ಪದ್ಮಜಾ ರಾವ್ ನಟ ವೀರೇಂದ್ರ ಶೆಟ್ಟಿ ಒಡೆತನದ ವೀರೂ ಟಾಕೀಸ್ ನಿರ್ಮಾಣ ಸಂಸ್ಥೆಯಿಂದ ಹಂತ ಹಂತವಾಗಿ 40 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದರು ಎನ್ನಲಾಗಿತ್ತು.
ಈ ಲಕ್ಷಾಂತರ ಮೌಲ್ಯದ ಹಣವನ್ನು ವಾಪಸ್ ನೀಡದೇ ಪದ್ಮಜಾ ರಾವ್ ತಪ್ಪಿಸಿಕೊಂಡಿದ್ದು, ಕೊನೆಗೆ ಒತ್ತಡಕ್ಕೆ ಮಣಿದು ತಮ್ಮ ಐಸಿಐಸಿಐ ಬ್ಯಾಂಕ್ ಖಾತೆ ಚೆಕ್‌ಅನ್ನು ವೀರೂ ಟಾಕೀಸ್‌ಗೆ ನೀಡಿದ್ದರು. ಆದರೆ ಆ ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಮೊದಮೊದಲು ನ್ಯಾಯಾಲಯಕ್ಕೆ ನಟಿ ಉತ್ತರಿಸದ ಕಾರಣ ಪದ್ಮಜಾ ರಾವ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ಬಂಧಿಸಿ ತರುವಂತೆ ಬೆಂಗಳೂರಿನ ಪೊಲೀಸರಿಗೆ ಆದೇಶ ನೀಡಿತ್ತು.
ಈ ಪ್ರಕರಣದಲ್ಲಿ ಪದ್ಮಜಾ ರಾವ್ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ 40,17,000 ರೂಪಾಯಿಗಳನ್ನು ದೂರುದಾರ ವೀರೇಂದ್ರ ಶೆಟ್ಟಿಯವರಿಗೆ ಹಾಗೂ 3,000 ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸುವಂತೆ ಆದೇಶ ನೀಡಿದೆ. ಒಟ್ಟು 40,20,000 ರೂಪಾಯಿಯನ್ನು ಪಾವತಿಸಬೇಕು. ಹಾಗೂ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.