ಮಂಗಳೂರು ಬೆಡಗಿ ಹರಿಪ್ರಿಯಾ ಅವರ ಮನೆ ಹೇಗಿದೆ ಗೊತ್ತಾ, ಭೂಲೋಕದ ಸ್ವರ್ಗ ಕಂಡ್ರಿ

ಜನವರಿ 26ರಂದು ಮೈಸೂರಿನಲ್ಲಿ ವಿವಾಹ ನೆರವೇರಿಸಿಕೊಂಡಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಇದೀಗ ಗುಡ್‌ನ್ಯೂಸ್‌ ನೀಡಲು ತಯಾರಿ ನಡೆಸಿದೆ. ಹಾಗೆಂದ ಮಾತ್ರಕ್ಕೆ ಆ ವಿಚಾರವೇನು ಎಂಬುದನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಂಪೂರ್ಣವಾಗಿ ಹೇಳಿಕೊಂಡಿಲ್ಲ.

ಬದಲಿಗೆ ನೀವೇ ಊಹಿಸಿ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ಹರಿಪ್ರಿಯಾ. ಹಾಗಾದರೆ, ಆ ಗುಡ್‌ ನ್ಯೂಸ್‌ ಏನಿರಬಹುದು? ಗೊತ್ತಾ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಯೂಟ್ಯೂಬ್‌ ಚಾನೆಲ್‌ ತೆರೆಯುತ್ತಿದ್ದಾರೆ. ಇದೀಗ ಅದೇ ರೀತಿ ಹರಿಪ್ರಿಯಾ ಕೂಡ ತಮ್ಮ ಚಾನೆಲ್ ಓಪನ್ ಮಾಡಿದ್ದರು.

ಹಲವಾರು ಜನ ಅಭಿಮಾನಿಗಳು ಅವರ ಚಾನೆಲ್ ಗೆ ಈಗಾಗಲೇ ಮಾರು ಹೋಗಿದ್ದಾರೆ. ಅದರಲ್ಲೂ ಅವರು ಮಾಡಿರುವ ಹೋಮ್ ಟೂರ್ ಅಂತೂ 1 ಮಿಲಿಯನ್ ವೀಕ್ಷಣೆ ಕಂಡಿರುವುದು ನಿಜಕ್ಕೂ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಸಿಂಹಪ್ರಿಯ ದಂಪತಿಗಳ ಮನೆ ಮಾತ್ರ ನೋಡಲು ಬಹಳ ಆಧುನಿಕ ಹಾಗೂ ಅದ್ಭುತವಾದ ಶೈಲಿಯನ್ನು ಹೊಂದಿದೆ.

ಮರದ ಪೀಠೋಪಕರಣ ಹಾಗೂ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ಅಲಂಕರಿಸಿದ್ದು ನೋಡಲು ಕಣ್ಮನ ಸೆಳೆಯುತ್ತದೆ. ಇನ್ನು ತೆರೆದ ಜಾಗಗಳು ಕೂಡ ಮನೆಯಲ್ಲಿದ್ದು ಸಿಂಹ ಪ್ರಿಯಾ ಇಬ್ಬರಿಗೂ ಈ ಮನೆ ಪ್ರೀತಿ ಪಾತ್ರವಾದ ಸ್ಥಳವಾಗಿದೆ.

You may also like...