• Uncategorised

ಮಕ್ಕಳಿಲ್ಲದ ಮಹಿಳೆಯರನ್ನು ಗ‌.ರ್ಭಿಣಿ ಮಾಡಿದರೆ 18 ಲಕ್ಷ ರೂ ಬಹುಮಾನ

ಈ ಘಟನೆ ಬಗ್ಗೆ ಕೇಳಿದ್ರೆ ನಿಜಕ್ಕೂ ಬೆಚ್ಚಿಬೀಳೋದು ಗ್ಯಾರಂಟಿ. ಹೌದು ಬಿಹಾರದ ನವಾಡದಲ್ಲಿ ಈ ಅತ್ಯಂತ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯರನ್ನು ಗರ್ಭಧರಿಸುವಂತೆ ಮಾಡಬೇಕು ಎಂದು ಜನರಿಗೆ ಆಮಿಷವೊಡ್ಡಿ ಸಾವಿರಾರು ರೂಪಾಯಿ ವಂಚನೆ ನಡೆಸುತ್ತಿದ್ದ ಸೈಬರ್ ಕ್ರಿಮಿನಲ್‌ಗಳನ್ನು ಪೊಲೀಸರು ಹಿಡಿದಿದ್ದಾರೆ.

ವಿಟ ಪುರುಷರನ್ನು ಗುರಿಯಾಗಿಸಿಕೊಂಡು ಈ ಮೋಸದ ಜಾಲ ಹೆಣೆಯಲಾಗಿದ್ದು, ಅಖಿಲ ಭಾರತ ಗರ್ಭಿಣಿ ಉದ್ಯೋಗ ಏಜೆನ್ಸಿ ಹೆಸರಿನಲ್ಲಿ ಪತಿ ಅಥವಾ ಸಂಗಾತಿಯಿಂದ ಗರ್ಭಿಣಿಯಾಗಲು ವಿಫಲವಾದ ಮಹಿಳೆಯರನ್ನು ಗರ್ಭಿಣಿ ಮಾಡಿದರೆ ಅಂತವರಿಗೆ 13 ಲಕ್ಷ ರೂಪಾಯಿ ಮೌಲ್ಯದ ಬಹುಮಾನವನ್ನೂ ನೀಡುವುದಾಗಿ ಆಶ್ವಾಸನೆ ನೀಡಲಾಗುತ್ತಿತ್ತು.

ಆರಂಭದಲ್ಲಿ 799 ರೂಪಾಯಿ ಮೊತ್ತವನ್ನು ಠೇವಣಿ ಮಾಡಿ ನೋಂದಾಯಿಸಬೇಕು. ನೋಂದಣಿ ಬಳಿಕ ಯಾವ ಮಹಿಳೆಗೆ ಗರ್ಭದಾನ ಮಾಡಬಹುದು ಎಂದು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಹಲವು ಮಹಿಳೆಯರ ಫೋಟೊ ಕಳುಹಿಸಲಾಗುತ್ತಿತ್ತು. ಮಹಿಳೆಯರ ಭಾವಚಿತ್ರವನ್ನು ಆಯ್ಕೆ ಮಾಡಿದ ಬಳಿಕ ಭದ್ರತಾ ಠೇವಣಿಯಾಗಿ 5 ರಿಂದ 20 ಸಾವಿರ ರೂಪಾಯಿ ವರೆಗೆ ಠೇವಣಿ ಇಡಬೇಕು.

ಚಂದಚಂದದ ಮಹಿಳೆಯರನ್ನು ಆಯ್ಕೆ ಮಾಡಿಕೊಂಡಷ್ಟೂ ಅಧಿಕ ಮೊತ್ತ ನಿಗದಿಪಡಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಮೋಸದ ಜಾಲವನ್ನು ನಂಬಿದ ಅನೇಕ ಪುರುಷರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಇನ್ನೂ ಹಲವರು ಸಾಲ ಮಾಡಿಯಾದರೂ ಚಂದದ ಮಹಿಳೆಯರ ಫೋಟೋವನ್ನೇ ಆಯ್ಕೆ ಮಾಡಿ ಅವರಿಗೆ ಗರ್ಭದಾನ ಮಾಡುವುದಾಗಿ ದುಬಾರಿ ಹಣ ಕಟ್ಟಿ ನೋಂದಾಯಿಸಿಕೊಳ್ಳುತ್ತಿದ್ದರು.

ತಾವು ಆಯ್ಕೆ ಮಾಡಿಕೊಂಡ ಮಹಿಳೆಗೆ ಯಶಸ್ವಿಯಾಗಿ ಗರ್ಭದಾನ ಮಾಡಿದಲ್ಲಿ 13 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಾಗೂ ಗರ್ಭದಾನ ವಿಫಲವಾದಲ್ಲಿ 5 ಲಕ್ಷ ರೂಪಾಯಿ ಸಮಾಧಾನಕರ ಬಹುಮಾನವನ್ನು ಕೊಡುವುದಾಗಿ ವಾಗ್ದಾನ ನೀಡಿದ್ದರು. ಅದನ್ನು ನಂಬಿ ಜನ ಮಕ್ಮಲ್ ಟೋಪಿ ಹಾಕಿಕೊಂಡು ಈಗ ಹಣವೂ ಇಲ್ಲ ಆರಿಸಿದ ಮಹಿಳೆಯೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

You may also like...