ಮತ್ತೆ ಒಂದಾದ ಜೋಡಿ; ಬೆಳ್ಳಿ ಗೊಂಬೆಯಂತಿದ್ದ ಹೆಂಡತಿ ಬಂದಿದ್ದಕ್ಕೆ ಕೀರ್ತಿ ಫುಲ್ ಫಿದಾ
ಪತ್ರಕರ್ತ, ನಿರೂಪಕ, ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಪತ್ನಿ ಅರ್ಪಿತಾಗೆ ವಿಚ್ಛೇದನ ನೀಡಿರುವುದಾಗಿ ನೆನ್ನೆಯಷ್ಟೇ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದರು. ಇದೀಗ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಇನ್ನು ಕೆಲವೇ ದಿನಗಳಲ್ಲಿ ಖುಷಿಯ ವಿಚಾರವೊಂದನ್ನು ಹಂಚಿಕೊಳ್ಳುವುದಾಗಿ ಹೇಳಿದ್ದು, ನಿರೀಕ್ಷೆ ಹುಟ್ಟುಹಾಕಿದ್ದಾರೆ.
ಕಾಳಜಿಯಿಂದ ಕೆಲವರು ಹೇಗೊ ಕನೆಕ್ಟ್ ಆಗಿ ನನಗೆ ಸಮಾಧಾನ ಮಾಡಿದವರೂ ಇದ್ದಾರೆ. ನನ್ನನ್ನು ನಂಬಿ ನನ್ನ ಮೇಲೆ ಹೂಡಿಕೆ ಮಾಡಿದವರಿಗೆ ಏನಾಗುತ್ತೋ ಎನ್ನುವ ಆತಂಕವಿತ್ತು. ಆದರೆ, ಅದಕ್ಕೆಲ್ಲ ಈಗ ಪೂರ್ಣ ವಿರಾಮ. ಇನ್ನು ನಾನು ನಿಮ್ಮೊಡನೆ ಇರ್ತೀನಿ ಮುಂದೆ ಕೂಡಾ ಎಂದು ಭರವಸೆ ನೀಡಿದ್ದಾರೆ.
ಇನ್ನು ತಾಯಂದಿರ ದಿನಕ್ಕೆ ಎಲ್ಲರೂ ಅವರ ಅಮ್ಮನೊಂದಿಗಿನ ಫೋಟೋ ಹಾಕಿ ವಿಶ್ ಮಾಡುತ್ತಿದ್ದಾರೆ. ಅಂತೆಯೇ ಕಿರಿಕ್ ಕೀರ್ತಿಯ 8 ವರ್ಷದ ಪುತ್ರ ಆವಿಷ್ಕಾರ್ ಕೂಡಾ ತನ್ನ ತಾಯಿಗೆ ಶುಭಾಶಯ ಕೋರಿದ್ದಾನೆ. ಇನ್ಸ್ಟಾಗ್ರಾಂನಲ್ಲಿ ಅಮ್ಮನೊಂದಿಗಿನ ಫೋಟೋ ಹಂಚಿಕೊಂಡಿರುವ ಆವಿಷ್ಕಾರ್, ‘Happy mother’s day… ಅಮ್ಮ ಐ ಲವ್ ಯೂ..’ ಎಂದಿದ್ದಾನೆ. #mothersday ಹ್ಯಾಷ್ ಟ್ಯಾಗ್ ಹಾಕಿದ್ದಾನೆ. ಆದ್ರೆ ಇದನ್ನು ಬರೆದಿದ್ದು ಪೋಸ್ಟ್ ಮಾಡಿದ್ದು ಕಿರಿಕ್ ಕೀರ್ತಿ ಅವರು.
ಕಿರಿಕ್ ಕೀರ್ತಿ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಅರ್ಪಿತಾ ಅವರನ್ನು 2012ರಲ್ಲಿ ಮದುವೆ ಆಗಿದ್ದರು. ಆದರೆ, ಕಳೆದ ವರ್ಷ ಇವರು ವಿಚ್ಚೇದನ ಪಡೆದಿದ್ದಾರೆ. ಇದೀಗ ಮಗನಿಗಾಗಿಯೇ ಒಂದಾಗಲಿದ್ದಾರೆ ಎಂಬ ಮಾತುಗಳು ಕೇಳಿರ್ಬರ್ತಿದೆ. ಹಾಗಾಗಿ ಅಭಿಮಾನಿಗಳು ಕೂಡಾ ಸಕತ್ ಥ್ರಿಲ್ ಆಗಿದ್ದಾರೆ.