• Uncategorised
  • 0

ಮದುವೆ ಆದ ಬಳಿಕ ಸೋನಲ್ ಎಷ್ಟು ಮುದ್ದಾಗಿದ್ದಾರೆ ನೋ ಡಿ

ಸ್ಯಾಂಡಲ್ವುಡ್ನ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಾಲ್ ಮೊಂತೆರೋ ಜೋಡಿ ಮತ್ತೊಮ್ಮೆ ಮದುವೆಯಾಗಿದ್ದಾರೆ. ಕಳೆದ ತಿಂಗಳು ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ದಂಪತಿ, ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೆ ಮದುವೆಯಾಗಿದ್ದಾರೆ.

ಹಿಂದೂ ಸಂಪ್ರದಾಯದ ಬಳಿಕ ಸೋನಾಲ್ ಅವರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನ ಕುಲಶೇಖರ ದ ಕೋರ್ಡೆಲ್ ಹೋಲಿ ಕ್ರಾಸ್ ಚರ್ಚ್ ನಲ್ಲಿ ವಿವಾಹವಾದರು. ರಿಂಗ್ ಬದಲಿಸುವ ಮೂಲಕ ತರುಣ್ ಸೋನಲ್‌ರನ್ನು ಎರಡನೇ ಬಾರಿ ವರಿಸಿದ್ದಾರೆ. ಕ್ಯಾಥೋಲಿಕ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಚರ್ಚ್‌ನಲ್ಲಿ ರಿಂಗ್ ಬದಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ನವ ಜೋಡಿಗಳು ಕಾಲಿರಿಸಿದ್ದಾರೆ.

ಬಿಳಿ ಬಣ್ಣದ ಸೂಟ್ ನಲ್ಲಿ ತರುಣ್ ಮಿಂಚಿದ್ರೆ, ಮೇಕಪ್ ಮಾಡಿಕೊಂಡು ಸುಂದರವಾಗಿ ಬಿಳಿ ಗೌನ್ ನಲ್ಲಿ ಸೋನಲ್ ಕಣ್ಮನ ಸೆಳೆದರು. ಐಷಾರಾಮಿ ಕಾರುಗಳಿಂದ ನವಜೋಡಿ ಹಾಲ್ ಮುಂಭಾಗ ಇಳಿಯುತ್ತಿದ್ದಂತೇ ಸಂಗಡಿಗರ ಡ್ಯಾನ್ಸ್ ಕೂಡಾ ಜೋರಾಗಿಯೇ ಇತ್ತು. ಸೋನಲ್ ಮತ್ತು ತರುಣ್ ಬ್ಯಾಂಡ್ ಬೀಟ್‌ಗೆ ಹೆಜ್ಜೆ ಹಾಕಿದರು. ಬಳಿಕ ಟಿಎಂಎ ಪೈ ಹಾಲ್ ನ ಮುಂಭಾಗ ತರುಣ್ ತಂದೆ ಸುಧೀರ್ ಅವರ ಚಿತ್ರಕ್ಕೆ ನಮಿಸಿ ಆಶೀರ್ವಾದ ಪಡೆದುಕೊಂಡರು.

ಅದ್ಧೂರಿ‌ ರಿಸೆಪ್ಶನ್‌ಗೆ ನಟ ನೆನಪಿರಲಿ ಪ್ರೇಮ್ ಪತ್ನಿ ಮತ್ತು ಮಗಳೊಂದಿಗೆ ಆಗಮಿಸಿದ್ದಾರೆ.ಹಿರಿಯ ನಟಿ ಶ್ರುತಿ, ಶರಣ್ ಮುಂತಾದವರು ಭಾಗಿಯಾಗಿದರು. ಸಿನಿಮಾ ಸೆಲಿಬ್ರಿಟಗಳೆಲ್ಲಾ ಬ್ಲಾಕ್ ಡ್ರೆಸ್ ಫಾರ್ಮೆಟ್ ನಲ್ಲಿ ಆಗಮಿಸಿದ್ದರು. ತುಳು ಚಿತ್ರರಂಗದ ನಟ ನಟಿಯರೂ ಸೋನಲ್ ಆರತಕ್ಷತೆಗೆ ಆಗಮಿಸಿದ್ದರು.

You may also like...

Leave a Reply

Your email address will not be published. Required fields are marked *