• Uncategorised

ಮುಂಬೈನಲ್ಲಿ ಮನೆ ಕೆಲಸ ಮಾಡುತ್ತಿರುವ ಕನ್ನಡದ ಹಿರಿಯ ನ.ಟಿ, ಮಂಕಾದ ಕರುನಾಡು

70-80ರ ದಶಕದ ಪ್ರಖ್ಯಾತ ಬಹುಬೇಡಿಕೆಯ ನಟಿ ಆರತಿ ತಮ್ಮ ಸರಳ, ಸುಂದರ ಅಭಿನಯದಿಂದ ಹಲವಾರು ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು. ಅವರ ಕಣ್ಣೋಟದ ಅಭಿನಯಕ್ಕೆ ಮಾರುಹೋಗದವರೇ ಇಲ್ಲ ಎನ್ನಬಹುದು. ಆದರೆ 1986ರ ನಂತರ ಟೈಗರ್ ಸಿನಿಮಾದಲ್ಲಿ ನಟಿಸಿದರು, 2005ರಲ್ಲಿ ಮಿಠಾಯಿ ಮನೆ ಚಿತ್ರದ ನಿರ್ದೇಶನ ಮಾಡಿದರು. ಆ ನಂತರ ಆರತಿ ಚಿತ್ರರಂಗದಿಂದ ಹಿಂದೆ ಸರಿದರು. ವೈಯಕ್ತಿಕ ಜೀವನದ ಬಗ್ಗೆ ಬೇಸರವೋ ಅಥವಾ ಸಿನಿಮಾದಲ್ಲಿ ಅವರ ಇಚ್ಛೆಯಂತೆ ಪಾತ್ರಗಳು ಸಿಕ್ಕಿರಲಿಲ್ಲವೋ ಏನೋ ತೆರೆ ಮೇಲೆ ಆರತಿ ಬೆಳಗಲಿಲ್ಲ.

1954ರಲ್ಲಿ ಜನಿಸಿದ ಆರತಿ ಒಟ್ಟಾರೆಯಾಗಿ 125 ಸಿನಿಮಾಗಳಲ್ಲಿ ನಟಿಸಿದ್ದಾರೆ. 1969ರಲ್ಲಿ ‘ಗೆಜ್ಜೆಪೂಜೆ’ಯಲ್ಲಿ ನಟಿಸಿದ ನಂತರ ನಾಗರಹಾವು, ಎಡಕಲ್ಲು ಗುಡ್ಡದಮೇಲೆ, ಬಿಳಿ ಹೆಂಡ್ತಿ, ಧರ್ಮಸೆರೆ, ಪಡುವಾರಳ್ಳಿ ಪಾಂಡವರು, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ, ಕಲಿಯುಗ’ ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ 12 ಸಿನಿಮಾಗಳಲ್ಲಿ ಆರತಿ ಕಾಣಿಸಿಕೊಂಡಿದ್ದಾರೆ. 1986ರಲ್ಲಿ ‘ನಮ್ಮ ನಮ್ಮಲ್ಲಿ’ ಎಂಬ ಟಿವಿ ಸಿರೀಸ್‌ಗಳನ್ನು ಆರತಿ ನಿರ್ದೇಶನ ಮಾಡಿದ್ದಾರೆ. ‘ಮಿಠಾಯಿ ಮನೆ’ ಚಿತ್ರಕ್ಕೆ ಉತ್ತಮ ಮಕ್ಕಳ ಚಿತ್ರ ಎಂಬ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಂದಿದೆ.

ಬೆಂಗಳೂರಿನ ಜೆಪಿ ನಗರದಲ್ಲಿ ಸರ್ಕಾರ ಅವರಿಗೆ ನಿವಾಸ ನೀಡಿತ್ತು. ಆ ನಿವಾಸನ್ನು ಕಾರ್ಪೋರೇಟ್‌ ಕಂಪನಿಯೊಂದಕ್ಕೆ ನೀಡಿದ್ದಾರೆ ಎನ್ನಲಾಗಿತ್ತು. ದೇವನಹಳ್ಳಿಯ ಫಾರ್ಮ್‌ಹೌಸ್‌ನಲ್ಲಿ ಆರತಿ ಇದ್ದಾರೆ ಎಂಬ ಊಹಾಪೋಹವಿದೆ. ಬೆಂಗಳೂರಿನ ಪ್ಯಾಲೇಸ್ ರೋಡ್‌ನ ಬಳಿಯಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆರತಿ ನೆಲೆಸಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಆರತಿ ಗಂಡನ ಜೊತೆ ಅಮೆರಿಕಾದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯೂ ಇದೆ. ಅವರಿಗೆ ಯಶಸ್ವಿನಿ, ಪ್ರೀತಿ ಎಂಬ ಮಗಳಿದ್ದಾರೆ ಎನ್ನಲಾಗಿತ್ತು. ಮುಂಬೈ ಅಲ್ಲಿ ಕೆಲ ದಿನಗಳ ಕಾಲ ನೆಲೆಸಿದ್ದರು ಎನ್ನಲಾಗುತ್ತಿದೆ.ಒಟ್ಟಾರೆಯಾಗಿ ಆರತಿ ಸಾರ್ವಜನಿಕ ಬದುಕಿನಿಂದ ದೂರವಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಇದೊಂದು ನಿಜಕ್ಕೂ ದೊಡ್ಡ ಪ್ರಶ್ನೆಯಾಗಿದೆ. ಅವರ ವೈಯಕ್ತಿಕ ಬದುಕಿನಲ್ಲಿ ಏನಾಯ್ತು ಅನ್ನೋದು ಕೂಡ ಚಿದಂಬರ ರಹಸ್ಯವೇ ಸರಿ. ಕನ್ನಡದಲ್ಲಿ ನಟಿಸಿರುವ ಎಷ್ಟೋ ನಟಿಯರು ಸಿನಿಮಾದಲ್ಲಿ ನಟಿಸುತ್ತಿಲ್ಲವಾದರೂ ಕೂಡ ತಾವು ಏನು ಮಾಡುತ್ತಿದ್ದೇವೆ? ಎಲ್ಲಿದ್ದೇವೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಉದಾಹರಣೆಗೆ ನಟಿ ಮಾಧವಿ ಅಮೆರಿಕದಲ್ಲಿ ತಮ್ಮ ಪತಿ, ಮೂವರು ಹೆಣ್ಣುಮಕ್ಕಳ ಜೊತೆ ಇದ್ದಾರೆ ಎಂದು ಅವರೇ ಖುದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ಹೇಳಿದ್ದರು. ಆದರೆ ಆರತಿಯವರು ಮಾಧ್ಯಮಗಳಿಂದ ತುಂಬ ದೂರವಿದ್ದಾರೆ.

You may also like...