ಮುದ್ದಾದ ಪ ತ್ನಿಯನ್ನು ಸ್ನೇಹಿತರಿಗೆ ಹರಾಜು ಹಾಕಿದ ಗಂಡ;
ಜನ ಸಾಮಾನ್ಯರಷ್ಟೇ ಅಲ್ಲ.ಸಿನಿಮಾ ಸೆಲೆಬ್ರಿಟಿಗಳ ಮನೆಗಳಲ್ಲೂ ಜಗಳ, ಮನಸ್ತಾಪ, ಗಂಡನ ರೂಪದಲ್ಲಿ ಒಂದಷ್ಟು ರಾಕ್ಷಸರು ಇದ್ದೇ ಇರುತ್ತಾರೆ. ತಮ್ಮ ಸೈಕೋ ಪತಿಯ ಜೊತೆ ಹೋರಾಡುವ ಅನೇಕ ನಟಿಯರೂ ಸಹ ಸಿನಿರಂಗದಲ್ಲಿ ಇದ್ದಾರೆ. ಸಾಮಾನ್ಯ ಪ್ರೇಕ್ಷಕನಿಗಷ್ಟೇ ಅಲ್ಲ, ಶ್ರೀಮಂತ ಸೆಲೆಬ್ರಿಟಿಗಳಿಗೂ ಒಂದು ಹಂತದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗುತ್ತದೆ.
ಈ ಪೈಕಿ ಸ್ಟಾರ್ ಹೀರೋಯಿನ್ ವರ್ಷಗಟ್ಟಲೆ ಗಂಡನ ಹಿಂಸೆಯನ್ನು ಸಹಿಸಿಕೊಂಡು ಕೊನೆಗೆ ಅವನಿಂದ ಮುಕ್ತಿ ಪಡೆದು ಇದೀಗ ಒಂಟಿ ಜೀವನ ನಡೆಸುತ್ತಿದ್ದಾರೆ.ಆ ಸ್ಟಾರ್ ಹೀರೋಯಿನ್ ಹೆಸರು ಕರಿಷ್ಮಾ ಕಪೂರ್. ಅವರು ಕರೀನಾ ಕಪೂರ್ ಅವರ ಅಕ್ಕ. 90 ರ ದಶಕದಲ್ಲಿ, ಈ ಸುಂದರಿ ಕ್ರೇಜ್ ಬಾಲಿವುಡ್ ಹೆಚ್ಚಿತ್ತು. ಈ ಬ್ಯೂಟಿ ಸಿನಿಮಾ ರಿಲೀಸ್ ಆದ್ರೆ ಸಾಕು.ಪ್ರೇಕ್ಷಕರು ಥಿಯೇಟರ್ ಗಳಿಗೆ ಓಡುತ್ತಿದ್ದರು.
ಪ್ರತಿ ವರ್ಷ ಕನಿಷ್ಠ ಐದಾರು ಚಿತ್ರಗಳನ್ನು ಮಾಡುವ ಮೂಲಕ ಆ ಸಮಯದಲ್ಲಿ ಅತ್ಯಂತ ಬ್ಯುಸಿ ನಾಯಕಿಯಾದರು ಕರಿಷ್ಮಾ. ಸುಮಾರು ಒಂದು ದಶಕದ ಕಾಲ ಬಾಲಿವುಡ್‌ನಲ್ಲಿ ಮಿಂಚಿದ ತಾರೆ ಈಕೆ. ಅಲ್ಲದೆ, ಈ ನಟಿಯ ಹೆಸರು ಅಭಿಷೇಕ್ ಬಚ್ಚನ್ ಜೊತೆ ಕೇಳಿ ಬಂದಿತ್ತು. ಅದ್ರೆ ಅದೇಷ್ಟು ಸತ್ಯ ಅಂತ ಇಂದಿಗೂ ಗೊತ್ತಿಲ್ಲ.
2003 ರಲ್ಲಿ ನಟಿ ಕರಿಷ್ಮಾ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 11 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆದರು. ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ, ತನ್ನ ಮಾಜಿ ಪತಿಯಿಂದ ಅನುಭವಿಸಿದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಇದು ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸಂಜಯ್ ಕಪೂರ್ ಒಳ್ಳೆಯ ವ್ಯಕ್ತಿಯಲ್ಲ, ಅವನು ತಮ್ಮನ್ನು ತುಂಬಾ ಹಿಂಸಿಸಿದ್ದ ಅಂತ ನಟಿ ಹೇಳಿಕೊಂಡಿದ್ದರು.
ಇದಲ್ಲದೆ, ಹನಿಮೂನ್‌ಗೆ ಹೋದಾಗ ತಮ್ಮ ಪತಿ ತನ್ನ ಸ್ನೇಹಿತರ ಜೊತೆ ರಾತ್ರಿ ಕಳೆಯುವಂತೆ ಒತ್ತಾಯಿಸಿದರು ಎಂದು ಅವರು ಬಹಿರಂಗಪಡಿಸಿದ್ದಾರೆ. ಒಂದು ಹಂತದಲ್ಲಿ ಅವನು ಅವಳನ್ನು ಹರಾಜು ಹಾಕಿದ್ದನು ಅಂತ ಬೆಚ್ಚಿ ಬೀಳಿಸುವ ಹೇಳಿಕೆ ನಟಿ ನೀಡಿದ್ದರು. ಆದರೆ ನಾನು ಅಂತಹ ಹೇಯ ಕೃತ್ಯಗಳನ್ನು ಮಾಡುವುದಿಲ್ಲ ಎಂದು ಕರಿಷ್ಮಾ ದೃಢವಾಗಿ ಹೇಳಿದ್ದಾರೆ.
ಇದಲ್ಲದೆ, ಮದುವೆಯಾದ ನಂತರವೂ ಸಂಜಯ್ ತನ್ನ ಮೊದಲ ಹೆಂಡತಿ ಜೊತೆ ಅನೈತಿಕ ಸಂಬಂಧವನ್ನು ಮುಂದುವರೆಸಿದ್ದ, ಇದನ್ನೆಲ್ಲ ಸಹಿಸಲಾರದೆ ವಿಚ್ಛೇದನ ನೀಡಿದೆ ಎಂದು ನಟಿ ಹೇಳಿದ್ದಾರೆ.