• Uncategorised
  • 0

ರಚಿತಾ ರಾಮ್ ಅವರು ಇಷ್ಟ ಮುದ್ದಾಗಿರಲು ಕಾರಣ ದಿನನಿತ್ಯದ ಜಿಮ್ ವರ್ಕೌಟ್ ಅಂತೆ;

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ತಮ್ಮ ಸೌಂದರ್ಯ, ನಟನೆ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದ ಚೆಲುವೆ ಈಕೆ. ಇನ್ನು ರಚಿತಾ ರಾಮ್‌ ಅವರಂತೆ ಅವರ ತಂಗಿಯೂ ಸಹ ಅಪರೂಪ ಸೌಂದರ್ಯವತಿ. ಅಷ್ಟೇ ಅಲ್ಲ ಕಾಲಿವುಡ್‌ ಸ್ಟಾರ್‌ ಹಿರೋಯಿನ್‌ ಸಹ.

ಹೌದು.. ರಚ್ಚು ಸಹೋದರಿ ನಿತ್ಯಾ ರಾಮ್ ತಮಿಳು ಸಿನಿ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದರೆ, ತಂಗಿ ಕಾಲಿವುಡ್‌ನಲ್ಲಿ ಹೆಸರು ಮಾಡುತ್ತಿದ್ದಾರೆ. ಸಧ್ಯ ನಿತ್ಯಾ ಅಣ್ಣಾ ಎಂಬ ಸಿರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಜನ ಮೆಚ್ಚುಗೆ ಪಡೆದಿದೆ.

ನಿತ್ಯಾ ರಾಮ್‌ ನಂದಿನಿ ಎಂಬ ಸಿರಿಯಲ್‌ ಮೂಲಕ ಖ್ಯಾತಿ ಪಡೆದರು. ಮದುವೆಯ ನಂತರ ಸಿನಿ ಪ್ರಪಂಚಕ್ಕೆ ಗುಡ್ ಬೈ ಹೇಳಿದ್ದ ನಟಿ, ಹಲವು ವರ್ಷಗಳ ಬ್ರೇಕ್ ನಂತರ ತಮಿಳು ಜನಪ್ರಿಯ ಸೀರಿಯಲ್ ಅಣ್ಣ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ನಿತ್ಯಾ ಗೌತಮ್‌ ಎಂಬುವವರ ಕೈ ಹಿಡಿದಿದ್ದಾರೆ

ನಿತ್ಯಾ ಬೆಂಕಿಯಲ್ಲಿ ಅರಳಿದ ಹೂ ಎಂಬ ಕನ್ನಡ ಧಾರಾವಾಹಿಯ ಮೂಲಕ ನಟನಾವೃತ್ತಿಯನ್ನು ಪ್ರಾರಂಭಿಸಿದರು. ಆದ್ರೆ ತಮಿಳು ಸಿನಿರಂಗದಲ್ಲಿ ಮಿಂಚಿದರು. ಸಧ್ಯ ನಿತ್ಯಾ ಕನ್ನಡಕ್ಕೆ ಮರಳಿ ಬರಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಒಳ್ಳೆ ಪಾತ್ರ, ಕಥೆ ಸಿಕ್ಕರೆ ಖಂಡಿತಾ ಬರ್ತೀನಿ ಅಂತ ನಿತ್ಯಾ ಹೇಳ್ತಾರೆ.

You may also like...

Leave a Reply

Your email address will not be published. Required fields are marked *