• Uncategorised
  • 0

ರಚಿತಾ ರಾಮ್ ಮೊದಲ‌ ಗಂಡ ಇವರೇ; ಈ ಸ ತ್ಯ ಯಾರಿಗೂ ಗೊತ್ತಿಲ್ಲ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ ಈಗಂತೂ ತುಂಬಾ ಫೇಮಸ್ ಆಗಿದೆ. ಬಹಳ ದೊಡ್ಡ ಪ್ರೇಕ್ಷಕರ ಬಳಗವನ್ನು ಹೊಂದಿರುವ ಈ ಧಾರಾವಾಹಿ ಟಿಆರ್‌ಪಿಯಲ್ಲೂ ಮೇಲೆ ಮೇಲೇರುತ್ತಿದೆ. ಈ ಧಾರಾವಾಹಿಯಲ್ಲಿ ವಿಶೇಷ ಇಂಟೆರೆಸ್ಟಿಂಗ್ ಪಾತ್ರ ಒಂದರಲ್ಲಿ ನಟ ಕರಣ್ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ನಟ ಕರಣ್ ಪಾರ್ಥ ಅಲಿಯಾಸ್ ಭಾವನಾ ತಮ್ಮ ಪಾತ್ರದಲ್ಲಿ ಪ್ರೇಕ್ಷಕರಿಗೆ ಕಾಣಿಸುತ್ತಿದ್ದಾರೆ.

ಇವರ ತುಂಟತನ, ನಗು ಹಾಗೂ ಫನ್ನಿ ಡೈಲಾಗ್ ಇಡೀ ಧಾರಾವಾಹಿಯನ್ನು ಚಂದಗಾಣಿಸಿಕೊಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಧಾರಾವಾಹಿಯಲ್ಲಿ ನಾಯಕಿ ಭೂಮಿಯವರ ತಂಗಿ ಅಪೇಕ್ಷಾಳನ್ನು ಪ್ರೀತಿಸುವ ಹುಡುಗನಾಗಿ ತೆರೆಯ ಮೇಲೆ ನಟ ಕರಣ್ ಮೋಡಿ ಮಾಡುತ್ತಿದ್ದಾರೆ . ತಮ್ಮ ಪ್ರೇಯಸಿ, ಅತ್ತಿಗೆಯ ತಂಗಿಯಿಂದ ಮುದ್ದಾಗಿ ಭಾವನಾ ತಮ್ಮ ಎಂದು ಕರೆಸಿಕೊಳ್ಳುವ ಹುಡುಗನಾಗಿರುವ ಕರಣ್ ಅವರ ಅಭಿನಯಕ್ಕೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.

ಧಾರಾವಾಹಿಯಲ್ಲಿ ನಾಯಕ ನಾಯಕಿಯಷ್ಟೇ ಪ್ರಾಮುಖ್ಯತೆ ಪಾರ್ಥ ಹಾಗೂ ಈ ಭಾವನಾ ತಮ್ಮ ಹಾಗೂ ಅಕ್ಕನ ತಂಗಿಯ ಲವ್ ಸ್ಟೋರಿ ಪ್ರೇಕ್ಷಕರಿಗೆ ಹೊಸದೊಂದು ಮನರಂಜನೆ ನೀಡಿದೆ ಎಂದರೆ ತಪ್ಪಾಗಲ್ಲ. ಇಂತಹ ಒಂದು ಪಾತ್ರಕ್ಕೆ ಜೀವ ತುಂಬಿರುವ ಪಾರ್ಥ ಅಲಿಯಾಸ್ ನಟ ಕರಣ್ ಅವರಿಗೆ ‘ಅಮೃತಧಾರೆ’ ಮೊದಲ ಧಾರವಾಹಿಯೇನಲ್ಲ.

ಅದೇ ದಶಕದ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಸಿ’ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ಕರಣ್. ಹೌದು, ‘ಅರಸಿ’ ಎಂಬ ಧಾರಾವಾಹಿ ದಶಕದ ಹಿಂದೆ ಬಹಳಷ್ಟು ಪಾಪ್ಯುಲಾರಿಟಿ ಪಡೆದಿತ್ತು. ಆ ಧಾರಾವಾಹಿಯಲ್ಲಿ ರಚಿತಾ ರಾಮ್ ಅವರು ಕೂಡ ನಟಿಸಿದ್ದು, ನಟ ಕರಣ್ ಅವರು ರಚಿತಾ ರಾಮ್ ಅವರ ಪತಿಯ ಪಾತ್ರವನ್ನು ಮಾಡಿದ್ದರು. ಅಂದರೆ ರಶ್ಮಿಯ ಗಂಡ ಸಿದ್ದಾಂತ್ ಆಗಿ ನಟ ಕರಣ್ ಅವರು ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.

ನಂತರ ‘ಸಿಂಧೂರ’ ಎಂಬ ಧಾರಾವಾಹಿಯಲ್ಲೂ ನಟಿಸಿರುವ ಕರಣ್ ಅಲ್ಲಿ ಪೋಷಕ ಪಾತ್ರವೊಂದರಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ‘ಅಮೃತಧಾರೆ’ಯ ಪಾರ್ಥ ಆಗಿ ಕಿರುತೆರೆಯಲ್ಲಿ ನಟ ಕರಣ್ ಬ್ಯುಸಿಯಾಗಿದ್ದಾರೆ. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಕರಣ್ ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ಕಂಡರೆ ಆಶ್ಚರ್ಯವೇನೂ ಇಲ್ಲ. 

You may also like...

Leave a Reply

Your email address will not be published. Required fields are marked *