ರಜನಿಕಾಂತ್ ಜೊತೆ ನಟಿಸಲು ಇಷ್ಟವಿಲ್ಲ ಎಂದು ರಿಜೆಕ್ಟ್ ಮಾಡಿದ ಜನಪ್ರಿಯ ನಟಿ ಯಾ ರು ಗೊ.ತ್ತಾ
ಅದೆಷ್ಟೇ ಹೊಸ ನಟರು ಚಿತ್ರರಂಗಕ್ಕೆ ಕಾಲಿಟ್ಟರೂ ಸಹ ರಜಿನಿ ಕಾಂತ್ ಅವರಷ್ಟು ಚಾರ್ಮ್ ಗಳಿಸಿಲ್ಲ. ಹೌದು ಭಾರತ ಸಿನಿಮಾರಂಗದ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಂದು ಸಿನಿರಂಗದಲ್ಲಿ ಮಾಡಿರುವ ಸಾಧನೆ ಒಂದೆರೆಡಲ್ಲ. ಬಹುತೇಕ ಈಗಿನ ಕಾಲದ ಕಲಾವಿದರಿಗೆ ಎಲ್ಲರಿಗೂ ತಾನ್ನೊಮ್ಮೆ ರಜಿನಿಕಾಂತ್ ಅವರೊಂದಿಗೆ ನಟಿಸಬೇಕು, ಸಿನಿಮಾ ಮಾಡಬೇಕೆನ್ನುವ ಕನಸು ಇದ್ದೇ ಇರುತ್ತದೆ.
ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಸಿನಿಮಾಗಳು ಹೊಸ ದಾಖಲೆಯನ್ನೇ ಬರೆಯುತ್ತವೆ. ಅವರ ಹಳೆಯ ಕಾಲದ ಸಿನಿಮಾಗಳಂತೂ ಇಂಡಸ್ಟ್ರಿ ಹಿಟ್ ಆಗಿವೆ. ಈಗಲೂ ಅವರ ಒಂದೊಂದು ಸಿನಿಮಾಗಳು ಹೊಸ ರೀತಿಯ ದಾಖಲೆಗಳನ್ನು ಬಾಕ್ಸ್ ಆಫೀಸ್ ನಲ್ಲಿ ಮಾಡುತ್ತವೆ.
ರಜಿನಿಕಾಂತ್ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕರೆ, ಯಾವ ಕಲಾವಿದರು ತಾನೇ ಬೇಡ ಹೇಳುತ್ತಾರೆ. ಆದರೆ ಒಂದಲ್ಲ ಎರಡಲ್ಲ ನಾಲ್ಕು ಸಲಿ ರಜಿನಿಕಾಂತ್ ಅವರಿಗೆ ನಟಿಸುವ ಅವಕಾಶ ಸಿಕ್ಕರೂ ಆ ಆಫರ್ ನ್ನು ಖ್ಯಾತ ನಟಿಯೊಬ್ಬರು ನಿರಾಕರಿಸಿದ್ದರು ಎನ್ನುವುದರ ಬಗ್ಗೆ ನಿಮಗೆ ಗೊತ್ತಾದರೆ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತೀರಿ.
ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಸಿನಿಮಾದಲ್ಲಿ ನಟಿಸಲು ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸತತ ನಾಲ್ಕು ಬಾರಿ ಆಫರ್ ಬಂದಿತ್ತು. ಆದರೆ ಅವರು ಅದನ್ನು ಒಪ್ಪಿರಲಿಲ್ಲ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮತ್ತೊಂದು ಹಿಟ್ ಚಂದ್ರಮುಖಿ ಚಿತ್ರಕ್ಕೂ ಐಶ್ವರ್ಯಾ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಅದನ್ನು ಐಶ್ವರ್ಯಾ ರಿಜೆಕ್ಟ್ ಮಾಡಿದ್ದರು. ಇವರ ಬದಲಿಗೆ ಸಿನಿಮಾದಲ್ಲಿ ಜ್ಯೋತಿಕಾ ಕಾಣಿಸಿಕೊಂಡಿದ್ದರು.
ಇನ್ನು ರಜಿನಿಕಾಂತ್ ವೃತ್ತಿ ಬದುಕಿನ ಬ್ಲಾಕ್ ಬಸ್ಟರ್ ʼಶಿವಾಜಿ: ದಿ ಬಾಸ್ ಸಿನಿಮಾದಲ್ಲೂ ಐಶ್ವರ್ಯಾ ರೈ ಅವರು ಕಾಣಿಸಿಕೊಳ್ಳಲಿದ್ದರು. ಆದರೆ ಆಫರ್ ತಿರಸ್ಕರಿಸಿದ ಕಾರಣ ಶ್ರಿಯಾ ಶರಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ನಾಲ್ಕು ಬಾರಿ ಆಫರ್ ರಿಜೆಕ್ಟ್ ಮಾಡಿದ ಬಳಿಕ ಕೊನೆಗೂ ಐಶ್ವರ್ಯಾ ರೈ ಅವರು ಶಂಕರ್ ಅವರ ಎಂದಿರಾನ್ (ರೋಬೋಟ್) ಸಿನಿಮಾದಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡರು. ಈ ಸಿನಿಮಾ ದೊಡ್ಡ ಹಿಟ್ ಆಯಿತು.