ರಾಗಿ ಮುದ್ದೆ ಸ್ಪರ್ಧೆಯಲ್ಲಿ 90ರ ಅಜ್ಜ 30ಮುದ್ದೆ ಒಂದೇ ನಿಮಿಷದಲ್ಲು, ಅಚ್ಚರಿ ಪಟ್ಟ ಪ್ರತಿಸ್ಪರ್ಧಿ
ಒಂದೊಂದೇ ರಾಗಿ ಮುದ್ದೆಯನ್ನು ಗುಳುಂ ಅಂತ ನುಂಗ್ತಿರೋ ಯುವಕರು, ನಾನ್ ಹೆಚ್ಚಾ? ನೀನ್ ಹೆಚ್ಚಾ ಎಂದು ಒಬ್ಬರಿಗಿಂತ ಒಬ್ಬರು ವೇಗವಾಗಿ ರಾಗಿ ಮುದ್ದೆ ನಾಟಿ ಕೋಳಿ ಸಾರನ್ನು ಜಬರ್ದಸ್ತ್ ಆಗಿ ಸ್ವಾಹಾ ಮಾಡ್ತಿರೋ ಈ ತರುಣರು ಮುದುಕರು ಅಂಕಲ್ ಗಳು ನೂರಾರು ಜನರ ನಡುವೆ ಕೇಂದ್ರಬಿಂದು!. ಗೆದ್ದವರಿಗೆ ಸಿಕ್ತು ಭರ್ಜರಿ ಬಹುಮಾನ! ಇದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ಖಾಸಗಿ ಹೋಟೆಲ್ ಒಂದು ನಡೆಸಿದ್ದ ರಾಗಿ ಮುದ್ದೆ ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯ ಝಲಕ್!
ನಾಟಿ ಕೋಳಿಯ ಸಾರು ಮುದ್ದೆ ಎಂದರೆ ನಾನ್ ವೆಜ್ ಪ್ರಿಯರು ಬಾಯಿ ಚಪ್ಪರಿಸುತ್ತಾರೆ. ಅಂತದ್ರಲ್ಲಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ಯುವಕರು ಮತ್ತು ಸ್ಥಳೀಯ ಮಂಥನ ಹೋಟೆಲ್ ಸೇರಿ ನಾಟಿ ಕೋಳಿ ಸಾಂಬಾರು ಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಮೊದಲ ಬಹುಮಾನ ಕುರಿ!ನಾಟಿ ಕೋಳಿ ಸಾರಿನ ಜೊತೆಗೆ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಕುಣಿಗಲ್, ಮಂಡ್ಯ, ಮಾಲೂರು ಸೇರಿದಂತೆ ಬೆಂಗಳೂರಿನ ಹಲವೆಡೆಗಳಿಂದ ಸ್ಪರ್ಧಾಳುಗಳು ಭಾಗಿಯಾಗಿದ್ದರು.
ಮೊದಲನೇ ಬಹುಮಾನವಾಗಿ ಒಂದು ಕುರಿ, ಎರಡನೇ ಹಾಗೂ ಮೂರನೇ ಬಹುಮಾನವಾಗಿ ನಾಟಿ ಕೋಳಿ ಕೊಡುವುದಾಗಿ ಘೋಷಣೆ ಮಾಡಲಾಗಿತ್ತು. 200 ರೂಪಾಯಿ ಎಂಟ್ರಿ ಫೀಸ್, 40ಕ್ಕೂ ಹೆಚ್ಚು ಸ್ಪರ್ಧಿಗಳು!ಈ ವಿಶಿಷ್ಟ ಸ್ಪರ್ಧೆಗೆ 200 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದು, 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾದ್ರು. ಸ್ಪರ್ಧೆಯಲ್ಲಿ ತಿನ್ನಲು ಕುಳಿತವ್ರಿಗೆ ಮೊದಲು ತಲಾ ಕಾಲು ಕೆಜಿ ತೂಕದ 2 ಮುದ್ದೆಗಳನ್ನ ನೀಡಲಾಯ್ತು. ಅದನ್ನ ಖಾಲಿ ಮಾಡಿದ ಮೇಲೆ ಮತ್ತಷ್ಟು ಮುದ್ದೆ ನೀಡಲಾಯ್ತು.
ಸ್ಪರ್ಧೆಗೆ 30 ನಿಮಿಷದವರೆಗೂ ಟೈಂ ನಿಗದಿಪಡಿಸಿದ್ದು, ಯಾರು ಹೆಚ್ಚು ಮುದ್ದೆ ತಿನ್ನುತ್ತಾರೋ ಅವರೇ ವಿಜೇತರು ಎಂದು ಘೋಷಿಸಲಾಗಿತ್ತು.13 ಮುದ್ದೆ ಬಾರಿಸಿದ ಹರೀಶ್!ಕೆಲವರು ಮೂರೇ ಮುದ್ದೆಗೆ ಸಾಕಾಯ್ತು ಅಂದ್ರೆ ಇನ್ನೂ ಕೆಲವರು ಆರೇಳು ಮುದ್ದೆ ತಿಂದು ಕ್ರೀಸಿಂಗ ಹಿಂದೆ ಸರೆದರು. ಆದ್ರೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಹರೀಶ್ ಅನ್ನೋರು ಮಾತ್ರ ಬರೋಬ್ಬರಿ 13 ಮುದ್ದೆ ಬಾರಿಸಿ ಮೊದಲನೇ ಬಹುಮಾನದ ಕುರಿಯನ್ನ ಹೆಗಲಿಗೇರಿಸಿಕೊಂಡರು.
ನಾಟಿ ಕೋಳಿ ಜೊತೆಗೆ ಮುದ್ದೆಗಳನ್ನ ಬ್ಯಾಟಿಂಗ್ ಮಾಡುತ್ತಿದ್ದ ಸ್ಫರ್ಧಾಳುಗಳಿಗೆ ಕೇಕೆ ಹಾಕಿ ಹುರಿದುಂಬಿಸಿದರು. ಸ್ಪರ್ಧೆಯಲ್ಲಿ ಭಾಗಿಯಾದವ್ರು ಮಾತ್ರ ನಾವು ಗೆಲ್ತೀವೋ ಬಿಡ್ತೀವೋ ಒಟ್ಟಿನಲ್ಲಿ ಕೊಟ್ಟ ಇನ್ನೂರು ರೂಪಾಯಿ ಎಂಟ್ರಿ ಫೀಸ್ಗೆ ಮೋಸ ಆಗಬಾರ್ದು ಅಂತ ಸರಿಯಾಗಿ ಬ್ಯಾಟಿಂಗ್ ಮಾಡಿದ್ದಾಗಿ ಮೊದಲ ಬಹುಮಾನ ವಿಜೇತ ಹರೀಶ್ ತಿಳಿಸಿದ್ದಾರೆ.