• Uncategorised

ಲೀಲಾವತಿಯ ಗಂಡ ಯಾರು ಗೊ.ತ್ತಾ; ಮಗ ವಿನೋದ್ ರಾಜ್ ಹೆಸರಲ್ಲಿ ರಾಜ್ ಕುಮಾರ್‌ ಹೆಸರು ಸೇರ್ಪಡೆ ರ.ಹಸ್ಯ

ಕನ್ನಡದ ಹಿರಿಯ ನಟಿ ಲೀಲಾವತಿ ಮದುವೆ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಲೇ ಇವೆ. ನಟಿ ಲೀಲಾವತಿ ಈಗ ನಮ್ಮೊಂದಿಗಿಲ್ಲ, ಆದರೆ, ಅವರ ಮಗ ವಿನೋದ್‌ ರಾಜ್ ಹಾಗು ಅವರ ಹೆಂಡತಿ ಅನು ಬಿ, ಮೊಮ್ಮಗ ಯುವರಾಜ್ ವಿ ಇದ್ದಾರೆ. ಲೀಲಾವತಿ ನಾಟಕ ಹಾಗೂ ಸಿನಿಮಾಗಳಲ್ಲಿ ನಟಿಸಿದವರು. 60-70ರ ದಶಕದಲ್ಲಿ ನಟಿ ಲೀಲಾವತಿ ಸ್ಟಾರ್ ನಟಿಯಾಗಿ ಮೆರೆದವರು.

ಬರೋಬ್ಬರಿ 700 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ 86 ವರ್ಷಗಳ ತುಂಬು ಜೀವನ ನಡೆಸಿ 8 ಡಿಚೆಂಬರ್ 2023ರಂದು ನೆಲಮಂಗಲದ ತಮ್ಮ ಸ್ವಗ್ರಾಮದಲ್ಲಿ ನಿಧನರಾದರು. ನಟಿ ಲೀಲಾವತಿ ಡಾ ರಾಜ್‌ಕುಮಾರ್ ಸೇರಿದಂತೆ ಅಂದಿನ ಕಾಲದ ಎಲ್ಲ ಸ್ಟಾರ್ ನಟರೊಂದಿಗೂ ನಟಿಸಿ ಸೈ ಎನಿಸಿಕೊಂಡವರು.

ಕನ್ನಡ ಸಿನಿಮಾಗಳು ಮಾತ್ರವಲ್ಲದೇ ತಮಿಳು, ತುಳು, ಮಲಯಾಳಂ, ತೆಲುಗು ಹಾಗು ಹಿಂದಿ ಚಿತ್ರಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡವರು.ಶ್ರೇಷ್ಠನಟಿ ನ್ಯಾಷನಲ್ ಅವಾರ್ಡ್ ಸೇರಿದಂತೆ ಅವರಿಗೆ ಬಹಳಷ್ಟು ಪ್ರಶಸ್ತಿ-ಪುರಸ್ಕಾರಗಳು ಅವರಿಗೆ ಸಂದಿವೆ. ಲೀಲಾವತಿಯವರು ನಾಯಕಿಯಾಗಿ, ಮಗಳು, ಸೊಸೆ, ಅತ್ತಿಗೆ, ಅತ್ತೆ ಹಾಗೂ ಅಜ್ಜಿಯಾಗಿ ಕೂಡ ಮನೋಜ್ಞವಾಗಿ ನಟಿಸಿ ಅದ್ಭುತ ಕಲಾವಿದೆ ಎಂದು ಕರೆಸಿಕೊಂಡಿದ್ದಾರೆ. 

ಇಂಥ ಮಹಾನ್ ನಟಿ, ಕಲಾವಿದೆ ಲೀಲಾವತಿ ಅವರ ಮದುವೆ, ಸಂಸಾರದ ಬಗ್ಗೆ ಹಲವು ಗಾಸಿಪ್‌ಗಳು ಹರಿದಾಡಿವೆ. ಮಹಾಲಿಂಗ ಭಾಗವತರ್ ಲೀಲಾವತಿಯವರ ಗಂಡ ಅಂತ ಹಲವರು ವಾದ ಮಾಡ್ತಾರೆ. ಅದ್ರೆ ಲೀಲಾವತಿಯವ ಆತ್ಮೀಯರು ಹೇಳುವುದೇ ಬೇರೆ.

ಸ್ವತಃ ಲೀಲಾವತಿಯವರೇ ಒಮ್ಮೆ ಹೇಳಿದ್ರಂತೆ, ಅವ್ರು ನನ್ ಗಾಡ್ ಫಾದರ್ ಅಷ್ಟೇ. ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಇಬ್ರೂ ಜೊತೆಯಲ್ಲಿ ಕೆಲಸ ಮಾಡ್ತಾ ಇದ್ವಿ. ನನ್ನನ್ನು ರಂಗಭೂಮಿಗೆ ಪರಿಚಯ ಮಾಡಿಸಿದ್ದೂ ಅವರೇ. ಅವರಿಗೆ ಆಗ್ಲೇ ಎರಡು ಮದ್ವೆ ಆಗಿತ್ತು. ನಾನು ದಕ್ಷಿಣ ಕನ್ನಡ ಬೆಳ್ತಂಗಡಿಯವ್ಳು.

ಅವ್ರಿಗೂ ತುಳು ಭಾಷೆ ಬರ್ತಾ ಇತ್ತು. ಹಾಗಾಗಿ ಇಬ್ರೂ ಆತ್ಮೀಯತೆ ಬೆಳೆಸಿಕೊಂಡ್ವಿ, ತುಳು ಬಾಷೆ ಮಾತಾನಾಡ್ಲಿಕ್ಕೋಸ್ಕರ ಅಷ್ಟೇ. ಆದ್ರೆ ಕೆಲವೊಬ್ರು ಈ ಸ್ನೇಹವನ್ನೇ ಕೆಟ್ಟ ಸಂಬಂಧದ ಹಣೆಪಟ್ಟಿ ಕಟ್ಟಿಬಿಟ್ರು ಅಂತ. 

You may also like...