ವಿಡಿಯೋ ವೈರಲ್ ಬೆನ್ನಲ್ಲೇ temple ರನ್ನ್ ಮಾಡಿದ ಜ್ಯೋತಿ ರೈ;
ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಜ್ಯೋತಿ ರೈ ಅವರು ಟೆಂಪಲ್ ರನ್ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೆ ಅವರು ತಮ್ಮ ಪತಿ ಜೊತೆ ತಿರುಪತಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ. ನಟನೆ ಜೊತೆಗೆ ತಮ್ಮ ಸೌಂದರ್ಯದಿಂದ ಅಭಿಮಾನಿಗಳ ನಿದ್ದೆ ಕದ್ದಿರುವ ಚೆಲುವೆ, ನಟಿ ಜ್ಯೋತಿ ರೈ ಅವರು ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೆ ಭಾನುವಾರ ಅವರು ಟೆಂಪಲ್ ರನ್ ಮಾಡಿದ್ದಾರೆ.
ತಿರುಪತಿ ಹಾಗೂ ಶ್ರಿಕಾಳಹಸ್ತಿಗೆ ದಂಪತಿ ಸಮೇತರಾಗಿ ಭೇಟಿ ನೀಡಿದರು. ಕನ್ನಡದ ಹಲವು ಧಾರವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನೆ ಮಾತಾಗಿರುವ ನಟಿ ಜ್ಯೋತಿ ರೈ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಿರುಪತಿಯ ಬಾಲಾಜಿ ಜೊತೆಗೆ ಶ್ರೀಕಾಳಹಸ್ತಿಗೆ ತೆರಳಿ ಪರಶಿವನ ದರ್ಶನ ಪಡೆದಿದ್ದಾರೆ.
ಈ ಕುರಿತು ಸ್ವತಃ ನಟಿ ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಗಾಗ ಹಾಟ್ ಅವತಾರಗಳು, ತುಂಡು ಉಡುಗೆಯ ಫೋಟೋಗಳಿಂದ ಸುದ್ದಿಯಾಗಿದ್ದ ನಟಿ ಜ್ಯೋತಿ ರೈ ಅವರು ಲಕ್ಷ್ಮಣವಾಗಿ ಸೀರೆಯುಟ್ಟು ಗೃಹಿಣಿಯಂತೆ ಕಂಗೊಳಿಸಿದ್ದಾರೆ. ಪತಿ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಿರುಪತಿಗೆ ಕಾರಿನಲ್ಲಿ ತೆರಳಿರುವ ವಿಡಿಯೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಕಿಸ್ಸಿಂಗ್ ಫೋಟೋ ಹಾಗೂ ಬೆಡ್ ಮೇಲಿನ ರೋಮ್ಯಾಂಟಿಕ್ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿರುವವರು ಜ್ಯೋತಿ ರೈ ಎಂದು ಗುಲ್ ಎಬ್ಬಿಸಲಾಗಿತ್ತು. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ಇದು ಎಡಿಟೆಡ್ ಫೋಟೋಗಳು ಎಂದಿದ್ದರು. ಜೊತೆಗೆ ಈ ಕುರಿತು ಸೈಬರ್ ಠಾಣೆಯಲ್ಲಿ ಅವರು ದೂರು ದಾಖಲಾಗಿಸಿದ್ದಾರೆ ಎನ್ನಲಾಗಿದೆ.
ಕೇವಲ ಹಾಟ್ ಫೋಟೋಗಳಲ್ಲಿ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದ ನಟಿ ಜ್ಯೋತಿ ರೈ ಅವರು, ಅಕ್ಷಯ ತೃತೀಯ ದಿನವೇ ಪದ್ಮಶ್ರೀ ಪುರಸ್ಕೃತ ಮೊಗಿಲಯ್ಯ ಎಂಬುವವರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಮತ್ತೆ ಸುದ್ದಿಯಾದರು.
ಅವರಿಗೆ ನಟಿ 50000 ರೂಪಾಯಿ ನಗದು ನೀಡಿ ಸಹಾಯವಾಗಿದ್ದಾರೆ. ನಿಮಗೆ ಧೈರ್ಯವಿಲ್ಲದ್ದಲ್ಲಿ ಇಂತಹ ಸುದ್ದಿಗಳನ್ನು ವೈರಲ್ ಮಾಡಿ ಎಂದು ಅವರು ನೆಟ್ಟಿಗರಿಗೆ ಸವಾಲೆಸಿದಿದ್ದಾರೆ.