• Uncategorised
  • 0

ವಿವಾದದ ನಡುವೆಯೇ ಮುಸ್ಲಿಂ ಯುವಕನ ಜೊತೆ ಸಿಹಿಸುದ್ದಿ ಕೊಟ್ಟ ರಚಿತಾ ರಾಮ್

ಜಯತೀರ್ಥ ನಿರ್ದೇಶನದ ‘ಬನಾರಸ್’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ವಸತಿ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್, ಈಗ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಝೈದ್ ಖಾನ್ ಅವರ ಈ ಮುಂದಿನ ಸಿನಿಮಾಗೆ ನಿರ್ದೇಶಕರು ಕೂಡ ಫಿಕ್ಸ್ ಆಗಿದ್ದು, ಆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಝೈದ್ ಖಾನ್ ಈ ಬಾರಿ ನಿರ್ದೇಶಕ ಅನಿಲ್ ಕುಮಾರ್ ಜೊತೆಗೆ ಕೈಜೋಡಿಸಲಿದ್ದಾರೆ. ಈಚೆಗೆ ತೆರೆಕಂಡು ಸಕ್ಸಸ್ ಆಗಿದ್ದ ‘ಉಪಾಧ್ಯಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದವರು ಇದೇ ಅನಿಲ್ ಕುಮಾರ್. ಸದ್ಯ ಝೈದ್ ಖಾನ್ ಜೊತೆಗೆ ಒಂದು ಸಿನಿಮಾ ಮಾಡುವುದಕ್ಕೆ ಅನಿಲ್ ರೆಡಿ ಆಗಿದ್ದಾರೆ.

ಬನಾರಸ್’ ಸಿನಿಮಾದ ನಂತರ ಝೈದ್ ಖಾನ್ ಅವರು ಹಲವು ಕಥೆಗಳನ್ನು ಕೇಳಿದ್ದರು. ಆದರೆ ಅಷ್ಟೊಂದು ಇಷ್ಟವಾಗಿರಲಿಲ್ಲ. ಆದರೆ ಅನಿಲ್ ಕುಮಾರ್ ಹೇಳಿದ ಕಥೆ ಝೈದ್ ಖಾನ್‌ಗೆ ಇಷ್ಟವಾಗಿದೆ. ಹಾಗಾಗಿ, ಇದನ್ನು ಒಪ್ಪಿಕೊಂಡು ಎರಡನೇ ಸಿನಿಮಾ ಆರಂಭಿಸಿದ್ದಾರೆ. ಈ ಸಿನಿಮಾವು ಕ್ಲಾಸ್ ಮತ್ತು ಮಾಸ್ ಎರಡೂ ಆಡಿಯೆನ್ಸ್‌ಗೆ ಇಷ್ಟವಾಗುವಂತೆ ಮೂಡಿಬರಲಿದೆಯಂತೆ.

ಸದ್ಯ ನಿರ್ದೇಶಕರ ಆಯ್ಕೆ ಆಗಿರುವುದು ಬಿಟ್ಟರೆ ಇವರೊಂದಿಗೆ ನಟಿ ರಚಿತಾ ರಾಮ್ ಹೆಜ್ಜೆ ಹಾಕಲಿದ್ದಾರೆ.ಹಾಗೂ ಮುದ್ದು ಮುಖದ ಚೆಲುವೆ ಮಲೈಕಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಅನಿಲ್ ಕುಮಾರ್ ನಿರ್ದೇಶಿಸುತ್ತಿರುವ ‘ಕಲ್ಟ್’ ಚಿತ್ರ ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ವೈರಲ್ ಆಗಿತ್ತು.

ಇದೀಗ ಝೈದ್ ಖಾನ್ ಅವರ ‘ಬ್ಲಡ್ಡೀ ಲವ್’ಗೆ ರಚಿತಾ ರಾಮ್ ಬಳಿಕ ಮತ್ತೋರ್ವ ನಾಯಕಿಯಾಗಿ ಮಲೈಕಾ ಬಣ್ಣ ಹಚ್ಚುತ್ತಿದ್ದಾರೆ. ಕಲಾವಿದರ ಬಗ್ಗೆ ಇನಷ್ಟೇ ಮಾಹಿತಿ ಸಿಗಬೇಕಿದೆ.

You may also like...

Leave a Reply

Your email address will not be published. Required fields are marked *