ಸಂಗೀತ ಪ್ರೀತಿಗಾಗಿ ತಲೆಬೊಳಿಸಿಕೊಂಡ ಕಾರ್ತಿಕ್, ನೋಡಲಾಗುತ್ತಿಲ್ಲ ಎಂದ ಪ್ರೇಕ್ಷಕರು
ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಸದ್ಯ ಕಾವು ಜೋರಾಗಿದೆ.. ಒಂದೆ ಗೂಡಿನ ಹಕ್ಕಿಯಂತಿದ್ದ ಕಾರ್ತಿಕ್, ಸಂಗೀತಾ, ತನಿಷಾ ಮಧ್ಯ ಬಿರುಕು ಮೂಡಿದೆ.. ಸದ್ಯ ಬೇರೆ ತಂಡಕ್ಕೆ ಶಿಫ್ಟ್ ಆದ ಸಂಗೀತಾ ಸವಾಲಿನ ಹೆಸರಿನಲ್ಲಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಬಿಗ್ ಬಾಸ್ ಸವಾಲು ಹಾಕುವ ಹೊಸ ಟಾಸ್ಕ್ ಒಂದನ್ನು ಸ್ಪರ್ಧಿಗಳಿಗೆ ನೀಡಿದ್ದು, ಅದರಲ್ಲಿ ಸಂಗೀತಾ ಕಾರ್ತಿಕ್ ಅವರಿಗೆ ನೀಡಿದ ಸವಾಲು ಕೇಳಿ ಉಳಿದ ಸ್ಪರ್ಧಿಗಳು ಮತ್ತು ನೆಟ್ಟಿಗರು ಶಾಕ್ ಆಗಿದ್ದಾರೆ. ಇನ್ನು ಸಂಗೀತಾ ಹಾಕಿರುವ ತಲೆ ಬೊಳಿಸಿಕೊಳ್ಳುವ ಸವಾಲನ್ನು ಕಾರ್ತಿಕ್ ಹಾಗೂ ತುಕಾಲಿ ಸ್ಟಾರ್ ಸಂತು ಅವರು ಒಪ್ಪಿಕೊಂಡಿದ್ದಾರೆ.
ಆದರೆ ಇದರಿಂದಾಗಿ ವೀಕ್ಷಕರು ಸಹ ಬೇಸರ
ಮಾಡಿಕೊಂಡಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಏನ್ ನಡೀತಾ ಇದೆ.. ಕಾರ್ತಿಕ್, ತುಕಾಲಿ ಸಂತು ಅವರು ಸದ್ಯ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.ಹೌದು ಸಂಗೀತಾ ನೀಡಿದ ಸವಾಲಿಗಾಗಿ ಕಾರ್ತಿಕ್, ಸಂತು ತಲೆಯನ್ನು ಬೋಳಿಸಿಕೊಂಡಿದ್ದಾರೆ. ಈ ಬಗ್ಗೆ ಇದೀಗ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ.
ಅಷ್ಟಕ್ಕೂ ಆಗಿದ್ದೇನು ಅಂದ್ರೆ ಗಜಕೇಸರಿ ಹಾಗೂ ಸಂಪತ್ತಿಗೆ ಸವಾಲ್ ಎಂದು ಎರಡು ತಂಡಗಖನ್ನು ಬಿಗ್ ಬಾಸ್ ಮನೆಯಲ್ಲಿ ಮಾಡಲಾಗಿದ್ದು… ಸ್ಪರ್ಧಿಗಳು ತಮ್ಮ ಎದುರಾಳಿ ತಂಡಕ್ಕೆ ಸವಾಲನ್ನು ನೀಡುವುದೇ ಟಾಸ್ಕ್.. ಆದರೆ ಇಲ್ಲಿ ಟ್ವಿಸ್ಟ್ ಏನಪ್ಪಾ ಅಂದ್ರೆ ಈ ಬಾರಿ ಸಂಗೀತಾ ಅವರು ಕಾರ್ತಿಕ್ ಟೀಂನ ಬಿಟ್ಟು ವಿನಯ್ ಟೀಂಗೆ ಸೇರಿಕೊಂಡಿದ್ದಾರೆ.
ಹೀಗಾಗಿ ಸಂಗೀತಾ ಕಾರ್ತಿಕ್, ತುಕಾಲಿ ಸ್ಟಾರ್ ಸಂತುಗೆ ತಲೆ ಬೋಳಿಸಿಕೊಳ್ಳಬೇಕು ಎಂದು ಸವಾಲು ಹಾಕಿದ್ದರು.
ಇಷ್ಟು ದಿನ ಫ್ರೆಂಡ್ಸ್ ಎಂದು ಹೇಳಿ ಬೇಕಾದಾಗ ಬಳಸಿಕೊಂಡು ಈಗ ಕಾರ್ತಿಕ್ ಗೆ ಹೇಗೆ ಮಾಡಿದ್ದು ತಪ್ಪು ಎಂದು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ.. ವೀಕ್ಷಕರು ಈ ವಿಚಾರವಾಗಿ ಬೇಸರ ಮಾಡಿಕೊಂಡಿದ್ದಾರೆ.
ಸಂಗೀತಾ ಈ ರೀತಿಯ ಟಾಸ್ಕ್ ನೀಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಅಭಿಮಾನಿಗಳು ಪ್ರಶ್ನೆಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬೆಸ್ಟ್ ಕಪಲ್ಸ್ ಆಗುತ್ತಾರೆ ಅಂದುಕೊಂಡ ಜೊಡಿ ಈಗ ಜಿದ್ದಿಗೆ ಬಿದ್ದಂತೆ ಕಾಣುತ್ತಿದೆ.