ಸಂಬಂಧಿಕರು ನನ್ನ ಕೆಟ್ಟದಾಗಿ ನೋಡುತ್ತಾರೆ ಎಂದ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ

ನಮ್ರತಾ, ಸ್ನೇಹಿತ್‌ ಸೇರಿದಂತೆ ಒಟ್ಟು ಹದಿನೇಳು ಮಂದಿ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಶುರುವಾಗಿ ಐದು ದಿನಗಳಾದವು. ಇಷ್ಟರಲ್ಲೇ ಮನೆಯಲ್ಲಿರುವ ಎಲ್ಲರ ರಿಯಲ್‌ ಕ್ಯಾರೆಕ್ಟರ್‌ಗಳು ಆಚೆ ಬರುತ್ತಿವೆ. ಒಟ್ಟಾರೆ ಹದಿನೇಳು ಜನರನ್ನೊಳಗೊಂಡ ಮನೆಯಲ್ಲಿ ಎಲ್ಲರೂ ಎಲ್ಲರೊಂದಿಗೆ ಹೊಂದಾಣಿಕೆಯಾಗಲ್ಲ. 6 ಜನ ಈಗಾಗಲೇ ಅಸಮರ್ಥರ ಲಿಸ್ಟನಲ್ಲಿದ್ದಾರೆ.

ಇವರೊಂದಿಗೆ ಉಳಿದವರು ಒಂದಲ್ಲಾ ಒಂದು ವಿಚಾರಕ್ಕೆ ವಾದ-ವಾಗ್ವಾದಕ್ಕಿಳಿಯುತ್ತಾರೆ. ಮನೆಯಲ್ಲಿರುವ ಎಲ್ಲರೂ ಹೊಸಬರೇ ಆಗಿರುವುದರಿಂದ ಎಲ್ಲವನ್ನು ಅಡ್ಜಸ್ಟ್‌ ಮಾಡಿಕೊಳ್ಳಬೇಕಾಗಿರುತ್ತದೆ. ಎಷ್ಟೇ ಸ್ನೇಹ-ವಾತ್ಸಲ್ಯದಿಂದಿದ್ದರು ಟಾಸ್ಕ್ ಅಂತ ಬಂದಾಗ ಎದುರಾಳಿಯಾಗಿಯೇ ನೋಡಬೇಕು. ಅಲ್ಲಿ ಎಲ್ಲ ವೈಯಕ್ತಿಕ ವಿಚಾರಗಳನ್ನು ಶೇರ್‌ ಮಾಡಿಕೊಳ್ಳುವಷ್ಟು ಆತ್ಮೀಯತೆ ಬೆಳೆಯುವುದು ಕೆಲವರರೊಂದಿಗೆ ಮಾತ್ರ.

ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಇಶಾನಿ ಹಾಗೂ ನಮ್ರತಾ ನಡುವೆ ಆ ಬಾಂಡಿಂಗ್‌ ಹುಟ್ಟಿಕೊಂಡಿದೆ. ಇನ್ನು ಸೀರಿಯಲ್‌ಗಳ ಮೂಲಕ ಎಲ್ಲರ ಮನಸ್ಸನ್ನು ಕದ್ದ ನಮ್ರತಾ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ. ಇತ್ತೀಚೆಗೆ ಮನೆ ತೆಗೆದುಕೊಂಡು ಗೃಹಪ್ರವೇಶ ಸಹ ಮಾಡಿದ್ದಾರೆ. ದೊಡ್ಡ ದೊಡ್ಡ ಸವಾಲುಗಳನ್ನು ಎದುರಿಸಿ ತಮ್ಮದೇ ಆದ ಹೆಸರನ್ನು ಮಾಡುತ್ತಿರುವ ನಮ್ರತಾ ಲೈಫ್‌ನಲ್ಲಿ ಸಂಬಂಧಿಕರ ಹಂಗಿಸುವ ಮಾತುಗಳಿಂದ ನೊಂದಿರುವ ಕ್ಷಣಗಳನ್ನು ಇಶಾನಿ ಬಳಿ ಹಂಚಿಕೊಂಡಿದ್ದಾರೆ.

ಬಿಗ್‌ ಬಾಸ್‌ ಮನೆಗೆ ನಮ್ರತಾ ಅವರನ್ನು ಲಕ್ಷ್ಮೀಯ ರೂಪವೆಂದು ಮೊದಲು ಕಳುಹಿಸಿ ಹಾಲು ಉಕ್ಕಿಸಲಾಯಿತು. ಆದರೆ ನಮೃತಾ ಜೀವನದಲ್ಲಿ ಅವರು ಒಂದು ಹೆಣ್ಣು ಎನ್ನುವ ಕಾರಣಕ್ಕೆ ಸಂಬಂಧಿಕರು ಕೀಳಾಗಿ ನೋಡಿ..ಊಟ ಎತ್ತಿಡುತ್ತಿದ್ದರಂತೆ. ನಾನು ಹುಟ್ಟಿದ್ದಕ್ಕೆ ನಮ್ಮ ಅಪ್ಪ ಅಮ್ಮನಿಗೆ ತೊಂದರೆಯಾಯ್ತು ಎಂದು ನಮೃತಾ ತಮ್ಮ ಮನದಾಳದ ನೋವನ್ನು ತೆರೆದಿಟ್ಟಿದ್ದಾರೆ.

ಮುಂದುವರೆದು ಮಾತನಾಡಿದ ನಮೃತಾ ನನ್ನನ್ನು ಯಾರು ಕೀಳಾಗಿ ನೋಡಿದರೋ ಅವರನ್ನೆಲ್ಲ ದೂರ‌ನೇ ಇಟ್ಟಿದ್ದಿನಿ..ನಾನು ಚೆನ್ನಾಗಿ ಬದುಕಬೇಕೆಂಬ ಹಠ ತೊಟ್ಟಿದ್ದಿನಿ. ಇದೇ ಕಾರಣಕ್ಕಾಗಿಯೇ ನಾನು ಹಗಲು ರಾತ್ರಿ ದುಡಿಯುತ್ತಿರುವುದು. ಬಿಗ್‌ ಮನೆಯಲ್ಲಿ ಇಲ್ಲು ಬರೀ ಒಳಗಡೇ ಮಾಡತ್ರ ಇರುವುದಕ್ಕೆ ನನಗೆ ಅದೆಲ್ಲಾ ನೆನಪಾಗುತ್ತಿದೆ. ಹೊರಗೆ ಇದ್ದರೆ ಬ್ಯುಸಿ ಆಗಿಬಿಟ್ಟಿರ್ತಿವಿ. ಯೋಚನೆ ಮಾಡುವುದಕ್ಕೂ ಸಮಯ ಇರೋದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

You may also like...