ಸೀರಿಯಲ್ ನಟಿ ಸಿರಿ ಅವರು 40 ವರ್ಷ ದಾಟಿದರೂ ಕೂಡ ಮದುವೆ ಯಾಕೆ ಆಗಿಲ್ಲ, ಯೌವನದಲ್ಲಿ ಆಗಿದ್ದೇನು ಗೊತ್ತಾ

ಪ್ರತಿದಿನ ಸಂಜೆ ನೋಡುಗರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಂತಹ ರಂಗೋಲಿ
ಸೀರಿಯಲ್ ಇಂದಿಗೂ ಅದೆಷ್ಟೋ ಮಹಿಳೆಯರ ಫೇವರೆಟ್. ಹೀಗಿರುವಾಗ ರಂಗೋಲಿ ಧಾರವಾಹಿಯ ಮೂಲಕ ತಮ್ಮ ಬಣ್ಣದ ಬದುಕಿನ ಪ್ರಯಾಣವನ್ನು ಪ್ರಾರಂಭ ಮಾಡಿದ ನಟಿ ಸಿರಿ ಈಗ ಹೇಗಿದ್ದಾರೆ?40 ವರ್ಷ ವಯಸ್ಸಾದರೂ ಮದುವೆಯಾಗದಿರುವುದು ಏಕೆ ಎಂದು ತಿಳಿದ್ರೆ ಖಂಡಿತವಾಗಿಯೂ ನೀವು ಶಾಕ್ ಆಗ್ತೀರಿ.

ಅದೊಂದು ಕಾಲದ ಕನ್ನಡ ಕಿರುತೆರೆಯಲ್ಲಿ ಬಹಳ ಜನಪ್ರಿಯವಾಗಿದ್ದಂತಹ ಸಾಕಷ್ಟು ಧಾರಾವಾಹಿಗಳಲ್ಲಿ ರಂಗೋಲಿ ಮತ್ತು ಬದುಕು ಎರಡು ಸೀರಿಯಲ್ಗಳು ಜನರ ಮನಸ್ಸನ್ನು ಆಳವಾಗಿ ಸೆಳೆದಿದ್ದಂತು ನಿಜ.
ಇನ್ನು ಇವೆರಡು ಸೀರಿಯಲ್ನ ನಾಯಕನಟಿ ಸಿರಿಯವರು ಅದೆಷ್ಟೋ ಕನ್ನಡಿಗರ ಮನೆಮಗಳಾಗಿ ಹೋಗಿದ್ದರು. ಹೀಗೆ ಕನ್ನಡ, ತಮಿಳು, ತೆಲುಗಿನಲ್ಲಿಯೂ ಸಾಕಷ್ಟು ಸೀರಿಯಲ್ಗಳಲ್ಲಿ ನಟಿಸಿ ಜನಪ್ರಿಯ ನಟಿಯಾಗಿ ಹೊರಹೊಮ್ಮಿದಂತಹ ಸಿರಿಯವರು ರಂಗೋಲಿಯಲ್ಲಿ ಪ್ರಪ್ರಥಮ ಬಾರಿಗೆ ನಟಿಸುವಾಗ ಪಿಯುಸಿ ಓದುತ್ತಿದ್ದರಂತೆ.

ಬಹಳ ಚಿಕ್ಕ ವಯಸ್ಸಿಗೆ ಅಂಬಿಕಾ ಎನ್ನುವ ಪ್ರಬುದ್ಧವಾದ ಪಾತ್ರ ದೊರಕಿ ಸಿರಿಯವರ ಅದೃಷ್ಟ ಬದಲಾಯಿತು ಎಂದರೆ ತಪ್ಪಾಗಲಾರದು. ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡಿ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದ ಸಿರಿ ಅವರು ಬರೋಬ್ಬರಿ 30 ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಸದಾ ಕಾಲ ಮುಗ್ಧ, ಸೌಮ್ಯ ಹೆಣ್ಣುಮಗಳ ಪಾತ್ರಕ್ಕೆ ಜೀವ ತುಂಬುತ್ತಿದ್ದಂತಹ ಸಿರಿಯವರು ‘ಮದುಮಗಳು’ ಎಂಬ ಧಾರಾವಾಹಿಯ ಮೂಲಕ ಪ್ರಪ್ರಥಮ ಬಾರಿಗೆ ಘಟವಾಣಿ ಅತ್ತೆಯ ಪಾತ್ರದಲ್ಲಿಯೂ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು.

ಹೀಗೆ ಹಲವಾರು ದಶಕಗಳಿಂದ ಸಿನಿ ಬದುಕಿನಲ್ಲಿ ತೊಡಗಿಸಿಕೊಂಡಿರುವ ಸಿರಿ ಬರೋಬ್ಬರಿ 40 ವರ್ಷ ವಯಸ್ಸಾದರೂ ಮದುವೆಯಾಗದಿರುವುದು ಯಾಕೆ ಎಂಬುದು ಅಭಿಮಾನಿಗಳ ತಲೆಯಲ್ಲಿ ಕಾಡುತ್ತಿರುವಂತಹ ಪ್ರಶ್ನೆಯಾಗಿದೆ. ಹೀಗಿರುವಾಗ ಸಂದರ್ಶನ ಒಂದರಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ನಟಿ ಸಿರಿ, ತನ್ನ ವೃತ್ತಿ ಬದುಕನ್ನು ಅರ್ಥ ಮಾಡಿಕೊಳ್ಳುವ ಹಾಗೂ ಪ್ರತಿಯೊಂದು ಹೆಜ್ಜೆಯಲ್ಲಿಯು ಸಪೋರ್ಟ್ ಮಾಡುವಂತಹ ತಕ್ಕ ವರ ಸಿಕ್ಕರೆ ಮಾತ್ರ ಮದುವೆಯಾಗುತ್ತೇನೆ ಎಂಬ ಕಂಡೀಶನ್ ಹಾಕುವ ಮೂಲಕ ಮನೆಯವರ ಒತ್ತಾಯದ ಮೇರೆಗೆ ಕೊನೆಗೂ ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರಂತೆ.

You may also like...