• Uncategorised

ಸೌಜನ್ಯ ಕೇ.ಸ್.ಗೆ 11 ವರ್ಷದಲ್ಲಿ 90 ಕೋಟಿ ಖರ್ಚು, ಇಷ್ಟು ವೆಚ್ಚ ಮಾಡಿದ್ದು ಯಾರು ಗೊ.ತ್ತಾ

ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿಯ ನಿರ್ಭಯಾ ಪ್ರಕರಣವಾದ ಸಮಯದಲ್ಲೇ ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣ ನಡೆದಿತ್ತು. ಧರ್ಮಸ್ಥಳದಲ್ಲಿ, 2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಮಾಯಕ ಸಂತೋಷ್ ರಾವ್‌ ಅವರನ್ನು ಪೊಲೀಸರು ಬಂಧಿಸಿ, ಬರೋಬ್ಬರಿ 6 ವರ್ಷ ಜೈಲಿನಟ್ಟಿದ್ದರು.

ಅಂತಿಮವಾಗಿ, 2023ರ ಜೂನ್ 16ರಂದು ಆತ ನಿರ್ದೋಷಿ ಎಂದು ಸಿಬಿಐ ಕೋರ್ಟ್‌ ತೀರ್ಪು ನೀಡಿದ್ದು, ಪ್ರಕರಣದಿಂದ ಆತನನ್ನು ಖುಲಾಸೆಗೊಳಿಸಿದೆ. ಸಂತೋಷ್ ಆರೋಪ ಮುಕ್ತನಾಗಿದ್ದರೂ, ಸಮಾಜದ ಹಳದಿ ಕಣ್ಣಿಗೆ ಆತನೊಬ್ಬ ಅಪರಾಧಿಯಂತೆಯೇ ಇಂದಿಗೂ ಕಾಣಿಸುತ್ತಿದ್ದಾರೆ. ಆತ ಮತ್ತು ಆತನ ಕುಟುಂಬದ ಬದುಕು ಛಿದ್ರವಾಗಿದೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ತಲ್ಲಣ ಮೂಡಿಸಿತ್ತು. ಕೊಲೆಗೀಡಾದ ಯುವತಿಯ ಕುಟುಂಬದವರು ಯಾರನ್ನು ಈತ ಅಪರಾಧಿಯಲ್ಲವೇ ಅಲ್ಲ ಎನ್ನುತ್ತಿದ್ದರೋ ಆತನನ್ನೇ ಪೊಲೀಸರು ಬಂಧಿಸಿದ್ದರು. ಈಗ ಆ ʼನಿರಪರಾಧಿʼ ಆರೋಪಮುಕ್ತನಾದ. ಹಾಗಾದರೆ, ‘ಅಪರಾಧಿ ಯಾರು’ ಎಂಬ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಪೊಲೀಸ್, ಸಿಐಡಿ ಮತ್ತು ಸಿಬಿಐ ತನಿಖೆಯಲ್ಲಿ ಬೇರೆ ಯಾವ ಆರೋಪಿಗಳ ಉಲ್ಲೇಖವೂ ಇಲ್ಲ. ಕೃತ್ಯವೊಂದು ನಡೆದಿದೆ ಎಂದಾದ ಮೇಲೆ ಅಪರಾಧಿಯೂ ಇರಲೇಬೇಕಲ್ಲವೇ? ಯಾರು ಆರೋಪಿಗಳು ಅಂತ ಸಂತ್ರಸ್ತ ಕುಟುಂಬ ಹೇಳುತ್ತಲೇ ಬಂದಿತ್ತು. ಆದರೆ ಅವರನ್ನು ಕೂಡ ಮತ್ತೆ ವಿಚಾರಿಸುವ ಗೋಜಿಗೆ ಹೋಗುತ್ತಿಲ್ಲ.

ಸಂತೋಷ್ ಅಪರಾಧಿಯಲ್ಲ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಆತ ನಿಜವಾದ ಅಪರಾಧಿಯಲ್ಲ. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಎಂದು ನಾವು ಹೇಳುತ್ತಲೇ ಇದ್ದೆವು. ಕೆಲವರ ವಿರುದ್ಧ ನಮಗೆ ಅನುಮಾನವೂ ಇತ್ತು. ಆದರೆ, ಪೊಲೀಸರು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಇಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರವನ್ನು ಎಲ್ಲರೂ ಹೆಣೆದಿದ್ದರು ಎಂದು ಸೌಜನ್ಯ ತಾಯಿ ಕುಸುಮಾವತಿ ಆರೋಪಿಸಿದ್ದಾರೆ.

ಇನ್ನು ಹೀರೆಬೆಟ್ಟುವಿನಲ್ಲಿ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ 11 ವರ್ಷಗಳ ಹೋರಾಟ ಇಂದಲ್ಲ ನಾಳೆ ನ್ಯಾಯ ಸಿಕ್ಕೇ ಸಿಗುತ್ತದೆ. ಮರುತನಿಖೆ ನಡೆದೇ ನಡೆಯುತ್ತದೆ. ಅಲ್ಲಿಯವರೆಗೆ ನಾವು ಕಾಯುತ್ತೇವೆ. ಮಾಧ್ಯಮದ ಮಿತ್ರರು ಸೌಜನ್ಯಾ ಹೆಸರಲ್ಲಿ 11 ವರ್ಷಗಳಲ್ಲಿ ಬಹಳಷ್ಟು ದುಡ್ಡು ಮಾಡಿದ್ದಾರೆ. ಆದರೆ ನಾವು 90 ಕೋಟಿಗಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎಂದು ಕೋಪದಿಂದ ನುಡಿದಿದ್ದಾರೆ.

You may also like...