• Uncategorised
  • 0

ಸೌಜನ್ಯ ಪರವಾಗಿ ಕೋರ್ಟ್ ನಲ್ಲಿ‌ ಸಿಡಿದೆದ್ದ ಮಹೇಶ್ ಶೆಟ್ಟಿ; ಆರೋಪಿಗೆ ನಡುಕ‌ ಶುರು

ಸೋಷಿಯಲ್‌ ಮೀಡಿಯಾದಲ್ಲಿ ಬಹಳಷ್ಟು ಖ್ಯಾತಿ ಪಡೆದಿರುವ ಗಿಲ್ಲಿ ನಟ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ 4 ಫಸ್ಟ್ ರನ್ನರ್ ಅಪ್ ಆಗಿದ್ದ ಇವರು ತಮ್ಮ ಜರ್ನಿಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಗಿಲ್ಲಿ ನಟ ಮೂಲತಃ ಮಂಡ್ಯ ಜಿಲ್ಲೆಯವರು.

ನಲ್ಲಿ ಮೂಳೆ ಕಂಟೆಂಟ್‌ಯಿಂದ ಫೇಮಸ್‌ ಆದ ಇವರು, ಡೈರೆಕ್ಟರ್‌ ಆಗಬೇಕು ಎಂದುಕೊಂಡಿದ್ದರಂತೆ. ಇದೀಗ ಹೊಚ್ಚ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಎಂಟ್ರಿ ಕೊಟ್ಟಿದ್ದರು.ಬೆಂಗಳೂರು ಎಂಬುದು ಮಹಾಸಾಗರ. ಇದು ನೋಡಿದವರನ್ನೆಲ್ಲಾ ಕೈ ಬೀಸಿ ಕರೆಯುತ್ತದೆ. ಆದರೆ ಸಮುದ್ರದ ಆಳಕ್ಕೆ ಇಳಿದಾಗಲೇ ಗೊತ್ತಾಗುವುದು.

ಬಯಸಿದ ಮುತ್ತುಗಳು ಸಿಗುತ್ತವಾ? ಈಜುವುದಕ್ಕೆ ಬಾರದೆ ಹೋದರೆ ಪರಿಸ್ಥಿತಿ ಏನಾಗುತ್ತದೆ ಎಂಬುದೆಲ್ಲಾ ಈ ಮಹಾಸಾಗರದಲ್ಲಿ ಗೊತ್ತಾಗುವುದು ಎಂದು ಹೇಳಿದ್ದಾರೆ. ಗಿಲ್ಲಿ ನಟ ಹಾಗೋ ಐಟಿಐ ಓದಿದ್ದಾರೆ. ಮಂಡ್ಯದಲ್ಲಿ ಓದು ಮುಗಿಸಿರುವ ಇವರು, ಅಲ್ಲಿಂದ ಸೀದಾ ಬಂದಿಳಿದಿದ್ದೆ ಬೆಂಗಳೂರು ಮಹಾನಗರಿಗೆ. 

ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂತ ಧೈರ್ಯ ಮಾಡಿ ಮಂಡ್ಯದ ಮಳವಳ್ಳಿಯಿಂದ ಬೆಂಗಳೂರಿಗೆ ಬಂದಾಯ್ತು. ಬರುವ ತನಕ ಏನು ಮಾಡಬೇಕು ಎಂಬ ಐಡಿಯಾ ಇರಲಿಲ್ಲ. ಸ್ನೇಹಿತರ ಸಹಾಯದಿಂದ ಡೈರೆಕ್ಷನ್ ಡಿಪಾರ್ಟ್ಮೆಂಟ್ ಕೆಲಸಕ್ಕೆ ಸೇರಿದೆ. ಹಳ್ಳಿಯಿಂದ ಬೆಂಗಳೂರಿಗೆ ಮಕ್ಕಳು ಬಂದರೆ ಮುಗೀತು, ಮಗ ಏನೋ ಸಂಪಾದನೆ ಮಾಡಿಬಿಡುತ್ತಾನೆ ಅಂತ ಮನೆಯವರು, ಓ ಅವನು ಉದ್ಧಾರ ಆಗೋದಾ ಕಣೋ ಅಂತ ಊರವರು ಅಂದುಕೊಂಡು ಬಿಡುತ್ತಾರೆ.

ಅವರಿಗೆ ಉತ್ತರ ಕೊಡುವುದಕ್ಕೂ ಆಗುವುದಿಲ್ಲ, ಜವಾಬ್ದಾರಿ ನಿಭಾಯಿಸದೇ ಇರುವುದಕ್ಕೂ ಆಗುವುದಿಲ್ಲ. ಅಂಥದ್ದೇ ಸ್ಥಿತಿಯಲ್ಲಿ ನಾನು ಸಿಕ್ಕಿ ಹಾಕಿಕೊಂಡಿದ್ದೆ ಎಂದು ತಮ್ಮ ಕಷ್ಟದ ದಿನಗಳನ್ನು ಗಿಲ್ಲಿ ನಟ ನೆನೆದಿದ್ದಾರೆ.  ಬೆಂಗಳೂರ ಮಹಾನಗರಿಯಲ್ಲಿ ಇವರಿರುವ ಪುಟ್ಟ ಮನೆಯನ್ನು ವಿಡಿಯೋ ಒಂದರಲ್ಲಿ ತೋರಿಸಿದ್ದಾರೆ.

You may also like...

Leave a Reply

Your email address will not be published. Required fields are marked *