ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಖ್ಯಾತಿ ಪಡೆದಿರುವುದು ಲಾಯರ್ ಜಗದೀಶ್. ಬಿಗ್ ಬಾಸ್ ಮನೆಯಲ್ಲಿ ಕೆಲವೇ ದಿನಗಳು ಇದ್ದರೂ ಸಹ ಕರ್ನಾಟಕ ಕ್ರಶ್ ಎನ್ನುವ ಬಿರುದು ಪಡೆದಿದ್ದರು. ಈ ಬಾರಿ ಬಿಗ್ ಬಾಸ್‌ನ ಫೈನಲಿಸ್ಟ್ ಎನ್ನುವ ನಿರೀಕ್ಷೆಯಲ್ಲಿದ್ದ ಲಾಯರ್ ಜಗದೀಶ್ ಒಂದೇ ಒಂದು ಮಾತು ತಪ್ಪಾಗಿ ಆಡಿದ ಪರಿಣಾಮ ನೇರವಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದರು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವು ಲಾಯರ್ ಜಗದೀಶ್ ಸದಾ ಸುದ್ದಿಯಲ್ಲಿದ್ದು, ಕನ್ನಡ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೋದ ಕಡೆಗಳಲ್ಲಿ ತಮ್ಮದೇ ಹವಾ ಎಬ್ಬಿಸುತ್ತಿದ್ದ ಲಾಯರ್ ಜಗದೀಶ್ ಇದೀಗ ಪರಭಾಷೆಯ ರಿಯಾಲಿಟಿ ಶೋಗೆ ಹೋಗುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಕನ್ನಡ ಬಿಗ್ ಬಾಸ್‌ನಿಂದ ಹೊರ ಬಂದ ಲಾಯರ್ ಜಗದೀಶ್ ಹಿಂದಿ ಬಿಗ್ ಬಾಸ್‌ಗೆ ಹೋಗುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಈವರೆಗೂ ಶೋನಲ್ಲಿ ಜಗದೀಶ್ ಕಾಣಿಸಿಕೊಂಡಿಲ್ಲ. ಯಾಕೆ..? ಎನ್ನುವ ಪ್ರಶ್ನೆಗೆ ಸ್ವತಃ ಜಗದೀಶ್ ಉತ್ತರ ಕೊಟ್ಟಿದ್ದಾರೆ.
ಹಿಂದಿ ಬಿಗ್ ಬಾಸ್‌ನಿಂದ ಕರೆ ಬಂದಿರುವುದು ನಿಜ. ಹಿಂದಿನ ವಾರವೇ ಫೋನ್ ಮಾಡಿದ್ದರು. ನನ್ನ ಫೋನ್‌ಗೆ ದಿನಕ್ಕೆ ಎರಡು ಸಾವಿರ ಕರೆಗಳು ಬರುತ್ತದೆ. ಹೀಗಾಗಿ ಮೊದಲು ನಾನು ನೋಡಿರಲಿಲ್ಲ. ಎರಡು ಮೂರು ದಿನ ನೋಡದೆ. ಬಳಿಕ ನಾನೇ ವಾಪಸ್ ಕರೆ ಮಾಡಿ ಅಂತಾ ಮೆಸೇಜ್ ಹಾಕದೆ. ಅವರೇ ಕರೆ ಮಾಡಿ ಎಲ್ಲಾ ಕೇಳಿ ತಿಳಿದುಕೊಂಡರು. ನನಗೆ ಹಿಂದಿಯಲ್ಲಿ ಎಷ್ಟು ಹಿಡಿತ ಇದೆ ಎನ್ನುವುದೇ ಅವರ ಮೊದಲ ಪ್ರಶ್ನೆ. ಹೀಗಾಗಿ ಹಿಂದಿನಲ್ಲಿ ಆಡಿಶನ್ ಕೊಟ್ಟೆದ್ದೇನೆ ಎಂದರು
ತಂಡ ನನ್ನ ಬಗ್ಗೆ ಖುಷಿಯಾಗಿದೆ. ನಮಗೂ ಅವರಿಗೂ ಡೇಟ್‌ಗಳು ಹೊಂದಾಣಿಕೆಯಾಗಾದ ಕಾರಣ ಇನ್ನೊಂದು ಸುತ್ತಿನ ಆಡಿಷನ್ ಆಗಿಲ್ಲ. ಇನ್ನು ಸಂಭಾವನೆ ವಿಚಾರ ಬಂತು. ಎಷ್ಟು ತೆಗೆದುಕೊಳ್ಳುತ್ತೀರಾ ಅಂತಾ ಕೇಳಿದರು. ನಾವು ಕೂಡ ಹೇಳಿದೆವು. ಅವರು ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಎಷ್ಟು ಕೊಟ್ಟರೋ ಅಷ್ಟೇ ಕೊಡುತ್ತೇವೆ ಎಂದರೆ ಆದರೆ ನಾನು ಅಲ್ಲಿ ಫ್ರೀ ಆಗಿನೇ ಮಾಡಿದ್ದೇವೆ ಎಂದು ಹೇಳಿದ್ದೇನೆ.
ಮುಂದಿನ ವಿಚಾರಗಳು ಮುಂದಿನ ದಿನಗಳಲ್ಲಿ ತಿಳಿದು ಬರುತ್ತದೆ ಕರ್ನಾಟಕದ 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ.ಬಿಜೆಪಿ ಟೀಮ್ ನಮಗೆ ಕೆಲಸ ವಹಿಸಿದ್ರೆ ಈ ಸ್ಥಿತಿ ಬರುತ್ತಿರಲಿಲ್ಲ. ಸಲ್ಮಾನ್ ಖಾನ್ ರೀತಿಯ ಜನ ಇವರು.ಯಾರನ್ನು ನಂಬುವುದಿಲ್ಲ ಎಂದು ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಲಾಯರ್ ಜಗದೀಶ್ ಕರ್ನಾಟಕ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.