50 ವರ್ಷ ಕಳೆದರು ಕೂಡ ಇನ್ನೂ ಮದುವೆಯಾಗದ ಭಾವನಾ, ಅವರಿಗಿರುವ ಸಮಸ್ಯೆ ಏನು ಗೊತ್ತಾ

ನಟಿ ಭಾವನಾ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದವರು. ಪ್ರತಿಭಾವಂತ ನಟಿಯಾಗಿದ್ದ ಭಾವನಾ ಕನ್ನಡ ಮಾತ್ರವಲ್ಲದೆ ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದರು. ಆದರೆ ಸಮಯ ಕಳೆದಂತೆ ಹೊಸ ನಟ-ನಟಿಯರ ಅಬ್ಬರದ ನಡುವೆ ಹಾಗೂ ಸ್ವತಃ ರಾಜಕೀಯ ರಂಗದತ್ತ ಗಮನ ಬದಲಾಯಿಸಿದ ಕಾರಣ ಸಿನಿಮಾದಿಂದ ದೂರವಾದರು.

ಇದೀಗ 6 ವರ್ಷದ ಬಳಿಕ ಮತ್ತೆ ಭಾವನಾ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಇನ್ನು ತಮ್ಮ ಸಿನಿಮಾ ಕಮ್‌ಬ್ಯಾಕ್, ರಾಜಕೀಯ ಭವಿಷ್ಯ ಇತರೆ ವಿಷಯಗಳ ಬಗ್ಗೆ ನಟಿ ಭಾವನಾ ಇತ್ತೀಚೆಗಿನ ತಮ್ಮ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅದೇ ಸಂದರ್ಶನದಲ್ಲಿ ತಾವೇಕೆ ಈವರೆಗೆ ವಿವಾಹವಾಗಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ.

ಮದುವೆ ಏಕೆ ಆಗಿಲ್ಲ ಎಂಬುದಕ್ಕೆ ಒಂದು ನಿರ್ದಿಷ್ಟ ಕಾರಣ ಇಲ್ಲ. ನನ್ನ ಬೆಳವಣಿಗೆಯ ವಿವಿಧ ಹಂತದಲ್ಲಿ ನನಗೆ ಸೂಕ್ತವಾದ ಆಯ್ಕೆ ಸಿಗಲಿಲ್ಲ. ಅಲ್ಲದೆ, ನಾನು ಕ್ಯಾಮೆರಾ ಮುಂದೆ ಬಹಳ ನೈಸ್, ಒಳ್ಳೆಯಳು. ಆದರೆ ವೈಯಕ್ತಿಕವಾಗಿಯೂ ನಾನು ಹೀಗೆ ಎಂದೇನಿಲ್ಲ. ನನ್ನಲ್ಲೂ ಕೆಲವು ಕೊರತೆಗಳು ಇವೆ. ಸಣ್ಣ ವಿಷಯಕ್ಕೆ ಇರಿಟೇಟ್ ಆಗುವುದು, ಬೇಸರ ಮಾಡಿಕೊಳ್ಳುವುದು, ಕಿರುಚಾಡುವುದು ಇದ್ದದ್ದೆ, ಅದು ಎಲ್ಲರಲ್ಲೂ ಇರುತ್ತೆ, ನನ್ನಲ್ಲೂ ಇದೆ.

ಅದು ಬೇರೆಯವರಿಗೆ ಇಷ್ಟವಾಗದೇ ಹೋಗಬಹುದು. ಇದೂ ಒಂದು ಕಾರಣ ಆಗಿರಬಹುದು ಎಂದಿದ್ದಾರೆ ಭಾವನಾ. ನಾನು ಎಲ್ಲದರಲ್ಲೂ, ಎಲ್ಲ ವ್ಯಕ್ತಿಗಳಲ್ಲಿಯೂ ಫರ್ಪೆಕ್ಷನ್‌ ನೋಡುತ್ತೇನೆ. ವ್ಯಕ್ತಿ ಎಲ್ಲ ವಿಷಯದಲ್ಲಿಯೂ ಫರ್ಪೆಕ್ಟ್ ಆಗಿರಬೇಕು ಎಂದು ನಿರೀಕ್ಷಿಸುತ್ತೇನೆ. ಅಂಥಹವರು ನನಗೆ ಯಾರೂ ಸಿಗಲಿಲ್ಲ. ಸಂಬಂಧದಲ್ಲಿರುವುದು ಒಮ್ಮೊಮ್ಮೆ ಕಟ್ಟಿಹಾಕಿದ ಹಾಗೆ ಅನ್ನಿಸುತ್ತದೆ ಆ ಭಾವ ನನಗೆ ಇಷ್ಟವಾಗುವುದಿಲ್ಲ.

ನನಗೆ ಸ್ವತಂತ್ರ್ಯವಾಗಿ ಬದುಕುವುದು ಬಹಳ ಇಷ್ಟ. ಒಬ್ಬಳೇ ಇರುವುದು ಇಷ್ಟ, ನಾನು ಸಿಂಗಲ್ ಆಗಿರಲು ಇದೂ ಸಹ ಕಾರಣ ಇರಬಹುದು ಎಂದಿದ್ದಾರೆ ನಟಿ ಭಾವನಾ. ನಾನು ಬೇರೊಬ್ಬರಿಗೆ ಅಡ್ಜಸ್ಟ್ ಆಗ್ತೀನೋ ಇಲ್ವೋ ಎಂಬುದೇ ನನಗೆ ಅನುಮಾನ. ನನಗೆ ಸೋಮಾರಿಯಾಗಿರುವವರು, ಶಿಸ್ತಿಲ್ಲದೇ ಇರುವವರೆಂದರೆ ಆಗುವುದಿಲ್ಲ. ಜಗಳ ಮಾಡಿಬಿಡುತ್ತೇನೆ.

ಭಾರತದ ಮಹಿಳೆಯರಲ್ಲಿ ದೊಡ್ಡ ಮಟ್ಟಿನ ಸಹನೆ ಇದೆ. ಅದು ನನಗೆ ಇಲ್ಲ. ಮನೆಯಲ್ಲಿ ಅಶಿಸ್ತನ್ನು ನನಗೆ ಸಹಿಸಲಾಗುವುದಿಲ್ಲ. ಇವುಗಳ ಜೊತೆಗೆ ಈಗಿನ ಪುರುಷರಿಗೆ ಮಹಿಳೆ ಸಮಾನಳು ಎಂಬ ಭಾವನೆ ಇದೆ. ಆದರೆ ಮೊದಲು ಹೀಗಿರಲಿಲ್ಲ. ಇದೂ ಸಹ ನಾನು ಮದುವೆ ಆಗದೇ ಇರಲು ಕಾರಣ ಎಂದಿದ್ದಾರೆ ನಟಿ ಭಾವನಾ.

You may also like...