• Uncategorised

7 ಬಾರಿ ಗ‌‌ ರ್ಭಪಾತ, ತೆಲುಗು ನಿರ್ಮಾಪಕನಿಂದ ಜೀವನವೇ ಹಾಳಾಯಿತು, ವಿಜಯಲಕ್ಷ್ಮಿ

ಸ್ಯಾಂಡಲ್ವುಡ್ನ ಸೂಪರ್ ಹಿಟ್ ಚಿತ್ರಗಳಾದ ಸೂರ್ಯವಂಶ, ನಾಗಮಂಡಲ ಸಿನಿಮಾದ ನಟಿ ವಿಜಯಲಕ್ಷ್ಮಿ ಮತ್ತೆ ವಿವಾದದಲ್ಲಿದ್ದಾರೆ. ನಾಮ್ ತಮಿಳರ್ ಪಾರ್ಟಿಯ ಸೀಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ವಿಜಯಲಕ್ಷ್ಮಿ ಅವರು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. 

ಅಷ್ಟೇ ಅಲ್ಲದೇ ಇದು ತನ್ನ ಕೊನೆಯ ವಿಡಿಯೋ ಎಂದು ಎಚ್ಚರಿಕೆ ನೀಡಿದ್ದಾರೆ. ಸೀಮಾನ್ 2023ರಲ್ಲಿ ನನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿದ್ದನು. ನನ್ನ ಜೊತೆ ಸೀಮಾನ್​ ಮೂರು ವರ್ಷ ಇದ್ದ. ಯಾರಿಗೂ ಗೊತ್ತಾಗದಂತೆ ಆತ ನನ್ನ ಜತೆ ರಹಸ್ಯವಾಗಿ ಮದುವೆ ಆದ. ನನ್ನ ಬದುಕನ್ನೇ ಹಾಳು ಮಾಡಿದ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಫೆಬ್ರವರಿ 29ರಂದು ವಿಜಯಲಕ್ಷ್ಮಿ ಅವರು ತಮ್ಮ ನಿವಾಸದ ಟೆರೇಸ್‌ನಿಂದ ವಿಡಿಯೋವನ್ನು ಹಂಚಿಕೊಂಡಿದ್ದರು. ಸೀಮಾನ್‌ ತಮ್ಮ ಜತೆ ಮಾತನಾಡಬೇಕು ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಹೊಸ ವಿಡಿಯೋ ಶೇರ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ವಿಜಯಲಕ್ಷ್ಮಿ ಅವರು ಆ ವಿಡಿಯೋ ಹಂಚಿಕೊಂಡು 5 ದಿನ ಕಳೆದರೂ ಕೂಡ ಸೀಮಾನ್​ ಕಡೆಯಿಂದ ಪ್ರತಿಕ್ರಿಉ ಯೆ ಬಂದಿಲ್ಲ. ಈ ರೀತಿ ವಿಡಿಯೋ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರೆ ನನಗೆ ಭಾವನಾತ್ಮಕವಾಗಿ ಎಷ್ಟು ನೋವಾಗಿರಬಹುದು ಅಂತ ನೀವೇ ಯೋಚಿಸಿ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಪರವಾಗಿಲ್ಲ, ಆಕೆ ಬಿದ್ದು ಸಾಯಲಿ ಎಂಬುದು ಜನರ ಪ್ರತಿಕ್ರಿಯೆ ಆಗಿದ್ದರೆ ಎಲ್ಲವನ್ನೂ ಹೇಳುತ್ತೇನೆ ಕೇಳಿ ಎಂದಿದ್ದಾರೆ ವಿಜಯಲಕ್ಷ್ಮಿ.

You may also like...